Home Advertisement
Home ವೈರಲ್ ‘ಸೈಜ್ ಎಷ್ಟು’ ಎಂದು ಕೇಳಿದವನಿಗೆ “ನನ್ನ ಚಪ್ಪಲಿ ಸೈಜ್‌ 9” ಎಂದು ತಿರುಗೇಟು ಕೊಟ್ಟ ಅದಾ...

‘ಸೈಜ್ ಎಷ್ಟು’ ಎಂದು ಕೇಳಿದವನಿಗೆ “ನನ್ನ ಚಪ್ಪಲಿ ಸೈಜ್‌ 9” ಎಂದು ತಿರುಗೇಟು ಕೊಟ್ಟ ಅದಾ ಶರ್ಮಾ!

0
26

ಬಾಲಿವುಡ್‌ ಮತ್ತು ದಕ್ಷಿಣ ಭಾರತದ ಜನಪ್ರಿಯ ನಟಿ ಅದಾ ಶರ್ಮಾ ಸದಾ ಒಂದಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ʻದಿ ಕೇರಳ ಸ್ಟೋರಿʼ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಗಿದೆ. ಬೆಳ್ಳಿತೆರೆಯ ಜೊತೆಗೆ ಸೋಶಿಯಲ್‌ ಮೀಡಿಯಾದಲ್ಲೂ ಆಕ್ಟೀವ್‌ ಆಗಿರುವ ಅವರು, ಆಗಾಗ ಫೋಟೋಶೂಟ್‌ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಮೇಲೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್‌ ಮಾಡುವುದು, ಅಸಭ್ಯ ಪ್ರಶ್ನೆಗಳು ಕೇಳುವುದು ಸಾಮಾನ್ಯವಾಗಿದೆ. ಹಲವರು ಇಂತಹ ಕಾಮೆಂಟ್‌ಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಅದಾ ಶರ್ಮಾ ಮಾತ್ರ ಈ ಬಾರಿ ಸುಮ್ಮನಿರಲಿಲ್ಲ.

ಕೆಲ ತಿಂಗಳುಗಳ ಹಿಂದೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ‘Ask Me Anything’ ಸೆಷನ್‌ ನಡೆಸಿದ್ದರು. ಈ ವೇಳೆ ಒಬ್ಬ ನೆಟ್ಟಿಗ ಅಸಭ್ಯವಾಗಿ “ಸೈಜ್‌ ಎಷ್ಟು?” ಎಂದು ಪ್ರಶ್ನೆ ಕೇಳಿದ್ದ. ಈ ಪ್ರಶ್ನೆ ಮುಜುಗರ ತರುವಂತದ್ದಾಗಿತ್ತು. ಆದರೆ ಅದಕ್ಕೆ ಅವರು ತಕ್ಷಣವೇ ಖಡಕ್‌ ಮತ್ತು ಚತುರ ಉತ್ತರ ನೀಡಿದರು: “ನನ್ನ ಚಪ್ಪಲಿ ಸೈಜ್‌ 9.” ಎಂದಿದ್ದಾರೆ.

ಈ ಒಂದು ಸಾಲಿನ ಉತ್ತರದ ಮೂಲಕ ಅಸಭ್ಯ ಪ್ರಶ್ನೆ ಕೇಳುವವರಿಗೆ ತಕ್ಕ ಪಾಠ ಕಲಿಸಿದರು. ಅವರ ಸಮಯಪ್ರಜ್ಞೆ, ಧೈರ್ಯ ಮತ್ತು ಪ್ರತಿಕ್ರಿಯೆ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಘಟನೆ ವೈರಲ್‌ ಆದ ನಂತರ ಹಲವರು, “ಇಂತಹವರಿಗೆ ಇಂತಹ ಉತ್ತರವೇ ಬೇಕು. ನಟಿಯರನ್ನು ಕೇವಲ ಗ್ಲ್ಯಾಮರ್‌ ಗೊಂಬೆಗಳಂತೆ ನೋಡುವವರಿಗೆ ಇದು ಸರಿಯಾದ ಉತ್ತರ” ಎಂದು ಕಾಮೆಂಟ್‌ ಮಾಡಿದ್ದಾರೆ.

ಒಟ್ಟಿನಲ್ಲಿ, ಅದಾ ಶರ್ಮಾ ಅವರು ಕೇವಲ ಸಿನಿಮಾಗಳಲ್ಲೇ ಅಲ್ಲ, ನೈಜ ಜೀವನದಲ್ಲೂ ತಮ್ಮ ಧೈರ್ಯ ಮತ್ತು ಚತುರತೆಯಿಂದ ಪ್ರತ್ಯೇಕವಾಗಿ ಗುರುತಿಸಿಕೊಂಡಿದ್ದಾರೆ. ಅಸಭ್ಯತೆಗೆ ಮಣಿಯದೇ, ಅದಕ್ಕೆ ತಕ್ಕ ಉತ್ತರ ನೀಡುವ ಮೂಲಕ ಅವರು ಮಹಿಳೆಯರಿಗೆ ಸ್ಪೂರ್ತಿಯಾಗಿದ್ದಾರೆ. ಅವರ ಈ ದಿಟ್ಟ ನಿಲುವು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.