Home Advertisement
Home ನಮ್ಮ ಜಿಲ್ಲೆ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ಕರಡಿ..!

ವಿಮಾನ ನಿಲ್ದಾಣಕ್ಕೆ ಬಂದ ಕರಡಿ..!

0
96

ಶಿವಮೊಗ್ಗ: ನಗರದ ಹೊರವಲಯದ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣದೊಳಗೆ ಕರಡಿ ನುಗ್ಗಿ ಕೆಲಕಾಲ ಆತಂಕ ಮೂಡಿಸಿತ್ತು.

ಆಹಾರ ಅರಸುತ್ತ ಬಂದಿತ್ತೋ ಏನೋ.. ಕರಡಿಯೊಂದು ಸೋಮವಾರ ಬೆಳಗ್ಗೆ ವಿಮಾನ ನಿಲ್ದಾಣದ ಪಕ್ಕದ ವಿನಾಯಕ ನಗರದಲ್ಲಿ ಕಾಣಿಸಿಕೊಂಡಿತ್ತು.

ಅಲ್ಲಿನ ಮನೆಗಳು, ತೋಟಗಳ ಪಕ್ಕದಲ್ಲಿ ಕರಡಿ ಓಡಾಡಿದ್ದು, ಸುತ್ತಮುತ್ತಲಿನ ಗ್ರಾಮಸ್ಥರ ಆತಂಕ್ಕೆ ಕಾರಣವಾಯಿತು. ಸ್ಥಳೀಯರು ಇದರ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದರು.

ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿ, ಕಾರ್ಯಾಚರಣೆ ಆರಂಭವಾಗಿದ್ದೇ ತಡ ವಿಮಾನ ನಿಲ್ದಾಣದ ಕಾಂಪೌಂಡ್ ಒಳಗೆ ಕರಡಿ ನುಗ್ಗಿತು. ಕಾಂಪೌಂಡ್ ಒಳಗೆ ಪೊದೆ ಬೆಳೆದಿದ್ದು ಕರಡಿ ಕೆಲ ಕಾಲ ಅವಿತು ಕುಳಿತುಕೊಂಡಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಅರವಳಿಕೆ ಮದ್ದು ನೀಡಿ ಸೆರೆ ಹಿಡಿದರು.

ಕರಡಿ ಸೆರೆ ಹಿಡಿದಿರುವುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಖಚಿತಪಡಿಸಿದ್ದು, ಪುನರ್ವಸತಿ ಕೇಂದ್ರಕ್ಕೆ ಕರಡಿಯನ್ನು ರವಾನೆ ಮಾಡಲಾಗಿದೆ. ಮುತ್ತೋಡಿ ಅರಣ್ಯದಿಂದ ಕರಡಿ ಇಲ್ಲಿಗೆ ಬಂದಿರಬಹುದು ಎಂದು ಹೇಳಲಾಗುತ್ತಿದೆ.