SK Home Ad
Home ನಮ್ಮ ಜಿಲ್ಲೆ ಉತ್ತರ ಕನ್ನಡ ಗೋವನ್ನು ಕೊಂದು ಮಾಂಸ ಕದ್ದೊಯ್ದ ದುಷ್ಕರ್ಮಿಗಳು

ಗೋವನ್ನು ಕೊಂದು ಮಾಂಸ ಕದ್ದೊಯ್ದ ದುಷ್ಕರ್ಮಿಗಳು

0
278

ಉತ್ತರ ಕನ್ನಡ: ಹೊನ್ನಾವರ ತಾಲೂಕಿನ ವಂದೂರಿನ ಅರಣ್ಯದಲ್ಲಿ ಗೋವನ್ನು ನಿರ್ದಯವಾಗಿ ಕೊಂದು ಮಾಂಸ ಕತ್ತರಿಸಿ ಒಯ್ದ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ವರ್ಷದ ಹಿಂದಷ್ಟೆ ಕೊಂಡಾಕುಳಿಯಲ್ಲಿ ಗರ್ಭ ಧರಿಸಿದ ಗೋವನ್ನು ಚಿತ್ರಹಿಂಸೆ ನೀಡಿ ಕೊಂದ ಪ್ರಕರಣ ಮಾಸುವ ಮುನ್ನವೇ ವಂದೂರು ಗುಡ್ಡದ ಮೇಲೆ ಅಂತಹುದೇ ಪ್ರಕರಣ ಬೆಳಕಿಗೆ ಬಂದಿದೆ.

ವಂದೂರಿನ ಗಣಪತಿ ಮಹಾಬಲೇಶ್ವರ ಭಟ್ ಎನ್ನುವವರಿಗೆ ಸೇರಿದ ಹಸು ಇದಾಗಿದೆ. ಅವರ ಮನೆಯಲ್ಲಿ 27 ಕರು ಮತ್ತು ಗೋವುಗಳಿದ್ದು, ರವಿವಾರ ಮುಂಜಾನೆ ಎಂದಿನಂತೆ ಮೇಯಲು ಹೋದ ಆಕಳು ಮರಳಿ ಬರಲಿಲ್ಲ. ಎಲ್ಲ ಕಡೆ ಹುಡುಕಿದರೂ ಹಸುವಿನ ಸುಳಿವು ಸಿಗಲಿಲ್ಲ. ಸೋಮವಾರ ಮುಂಜಾನೆ ಗುಡ್ಡದಲ್ಲಿ ಗೋವಿನ ತಲೆ ಭಾಗ ನೋಡಿದಾಗ ಬೆಳಕಿಗೆ ಬಂದಿದೆ.

ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿ ತನಿಖೆ ಆರಂಭಿಸಿದರು. ಡಿವೈಎಸ್ಪಿ ಬಿ.ಗಿರೀಶ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಘಟನೆಯ ಮಾಹಿತಿ ಪಡೆದರು. ಪೊಲೀಸ್ ವೃತ್ತ ನಿರೀಕ್ಷಕ ಸಿದ್ದರಾಮೇಶ್ವರ, ಪಿ.ಎಸ್.ಐ ಮಂಜುನಾಥ, ಪಿ.ಎಸ್.ಐ ಮಹಾಂತೇಶ ವಾಲ್ಮಿಕಿ ಹಾಗೂ ಸಿಬ್ಬಂದಿ ಆಗಮಿಸಿ ತನಿಖೆ ಮುಂದುವರಿಸಿದ್ದಾರೆ.