Home Advertisement
Home ಕ್ರೀಡೆ ಲಂಡನ್‌ನಲ್ಲೇ ಅಭ್ಯಾಸಕ್ಕಿಳಿದ ಕಿಂಗ್ ಕೊಹ್ಲಿ

ಲಂಡನ್‌ನಲ್ಲೇ ಅಭ್ಯಾಸಕ್ಕಿಳಿದ ಕಿಂಗ್ ಕೊಹ್ಲಿ

0
9

ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ ವೇಳಾಪಟ್ಟಿ ಪ್ರಕಟಣೆಗೂ ಮುನ್ನ ಬುಧವಾರ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ, ತನ್ನ ಅಭ್ಯಾಸದ ವಿಡಿಯೋವನ್ನು ಅಭಿಮಾನಿಗಳಿಗಾಗಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

ಈ ಮೂಲಕ ಮುಂದಿನ ಆವೃತ್ತಿಗೆ ಸಿದ್ಧತೆ ಆರಂಭಿಸಿರುವುದಾಗಿ ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಆದರೆ, ಮಾಹಿತಿಗಳ ಪ್ರಕಾರ ವಿರಾಟ್ ಲಂಡನ್‌ನಲ್ಲೇ ತನ್ನ ಅಭ್ಯಾಸ ನಡೆಸಿದ್ದು, ಭಾರತಕ್ಕೆ ಈವರೆಗೆ ಬಂದಿಲ್ಲ.

ಆದ್ರೆ, ಆರ್‌ಸಿಬಿ ಫ್ರಾಂಚೈಸಿ ಕೂಡ ಅಭ್ಯಾಸ ಶಿಬಿರ ಆರಂಭಿಸಿದ್ದು, ಭಾರತದಲ್ಲಿರುವ ಆಟಗಾರರು ಶಿಬಿರದಲ್ಲಿ ತಾಲೀಮು ನಡೆಸಿದ್ದಾರೆ. ಮಾರ್ಚ್ 15ರಂದು ವಿರಾಟ್ ಕೊಹ್ಲಿ ಭಾರತಕ್ಕೆ ಆಗಮಿಸಲಿದ್ದು, ತಂಡದ ಅಭ್ಯಾಸ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.

ಹಾಲಿ ಚಾಂಪಿಯನ್ ಪಟ್ಟ ಅಲಂಕರಿಸಿ, ಕೆಎಸ್‌ಸಿಎ ಕಾಲ್ತುಳಿತದ ಬಳಿಕ ವಿರಾಟ್ ಎಲ್ಲೂ ಆರ್‌ಸಿಬಿ ಜೊತೆ ಕಾಣಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೇ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂಗೂ ಕೊಹ್ಲಿ ಭೇಟಿ ನೀಡಿರಲಿಲ್ಲ. ಹಾಗಾಗಿ, ಈಗ ಐಪಿಎಲ್ ವೇಳಾಪಟ್ಟಿ ಬಿಡುಗಡೆಗೊಂಡಿದ್ದು, ಆರ್‌ಸಿಬಿ ಅಭಿಮಾನಿಗಳು ವಿರಾಟ್ ಅವರನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ಕಾಯುತ್ತಿದ್ದಾರೆ.