Home Advertisement
Home ನಮ್ಮ ಜಿಲ್ಲೆ ಹಾವೇರಿ ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿ

ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಿ

0
49

ಹಾವೇರಿ: ನಾವಿರುವ ಮನೆಯ ಮೇಲೆಯೇ ಕ್ಷಿಪಣಿಗಳು ದಾಳಿ ನಡೆದಿದ್ದು, ಸ್ನಾನಗೃಹದ ಮೇಲ್ಛಾವಣಿ ಕುಸಿದು ಬಿದ್ದಿದೆ. ಬಾಗಿಲು ವೇಗವಾಗಿ ಅಲುಗಾಡುತ್ತಿವೆ. ಇಲ್ಲಿ ನಮಗೆ ಬಹಳ ಭಯವಾಗುತ್ತಿದ್ದು, ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳಲು ವ್ಯವಸ್ಥೆ ಮಾಡಬೇಕು ಎಂದು ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದ ಎಂಜಿನಿಯರ್ ರಾಘವೇಂದ್ರ ಕುದುರಿ ಆತಂಕ ವ್ಯಕ್ತಪಡಿಸಿದರು.

ಸದ್ಯ ಯುಇಎ ಅಬುಧಾಬಿಯಲ್ಲಿ ಕುಟುಂಬದೊಂದಿಗೆ ನೆಲೆಸಿರುವ ರಾಘವೇಂದ್ರ ಕುದರಿ ಅವರು ಸಂಯುಕ್ತ ಕರ್ನಾಟಕದೊಂದಿಗೆ ಮಾತನಾಡಿ, ಅಲ್ಲಿರುವ ಪರಿಸ್ಥಿತಿಯನ್ನು ವಿವರಿಸಿದರು.

ಇದನ್ನೂ ಓದಿ: “ನಾವಿದ್ದ ಸ್ಥಳದ ಸನಿಹದಲ್ಲಿಯೇ ಐದಾರು ಬಾರಿ ಸ್ಫೋಟದ ಶಬ್ದ”

ಮೊದಲು ನಾನೊಬ್ಬನೇ ಅಬುಧಾಬಿಯಲ್ಲಿ ನೆಲೆಸಿದ್ದೆ. ಒಂದು ತಿಂಗಳ ಹಿಂದಷ್ಟೇ ಪತ್ನಿ, ಇಬ್ಬರು ಮಕ್ಕಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದೇನೆ. ಇಲ್ಲಿನ ಪರಿಸ್ಥಿತಿ ಬಹಳಷ್ಟು ಗಂಭೀರವಾಗಿದೆ ಎಂದರು. ನಾವಿರುವ ಕಟ್ಟಡದ ಮೇಲೆಗೆ ರವಿವಾರ ಕ್ಷಿಪಣಿ ದಾಳಿ ನಡೆದ ದೃಶ್ಯ ನೋಡಿ ಕೆಲ ಹೊತ್ತು ಭಯಗೊಂಡಿದ್ದೇವು ಎಂದರು.