Home Advertisement
Home ಸಿನಿ ಮಿಲ್ಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಜಯ್-ರಶ್ಮಿಕಾ: ಹನಿಮೂನ್‌ಗೆ ಈ ಜೋಡಿ ಆಯ್ದುಕೊಂಡ ತಾಣ ಯಾವುದು ಗೊತ್ತಾ?

ವೈವಾಹಿಕ ಜೀವನಕ್ಕೆ ಕಾಲಿಟ್ಟ ವಿಜಯ್-ರಶ್ಮಿಕಾ: ಹನಿಮೂನ್‌ಗೆ ಈ ಜೋಡಿ ಆಯ್ದುಕೊಂಡ ತಾಣ ಯಾವುದು ಗೊತ್ತಾ?

0
30

ಕಳೆದ ಹಲವು ವರ್ಷಗಳಿಂದ ‘ಡೇಟಿಂಗ್’ ಸುದ್ದಿಯ ಮೂಲಕವೇ ಸದ್ದು ಮಾಡುತ್ತಿದ್ದ ಟಾಲಿವುಡ್‌ನ ಕ್ಯೂಟ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕೊನೆಗೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳ ದೀರ್ಘಕಾಲದ ಕಾಯುವಿಕೆಗೆ ತೆರೆ ಬಿದ್ದಿದ್ದು, ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದ ಐತಿಹಾಸಿಕ ಅರಮನೆಯಲ್ಲಿ ಈ ತಾರಾ ಜೋಡಿ ಸಪ್ತಪದಿ ತುಳಿದಿದ್ದಾರೆ.

ಎರಡು ಸಂಪ್ರದಾಯದ ಸಮ್ಮಿಲನ: ಈ ವಿವಾಹ ಮಹೋತ್ಸವವು ಸಂಪ್ರದಾಯಗಳ ಸಂಗಮವಾಗಿತ್ತು. ಬೆಳಿಗ್ಗೆ ವಿಜಯ್ ಅವರ ಕುಟುಂಬದ ಇಚ್ಛೆಯಂತೆ ಅದ್ಧೂರಿಯಾಗಿ ತೆಲುಗು ಸಂಪ್ರದಾಯದ ವಿಧಿವಿಧಾನಗಳು ನಡೆದರೆ, ಸಂಜೆ ಕೊಡಗಿನ ಕನ್ಯೆ ರಶ್ಮಿಕಾ ಅವರ ಆಶಯದಂತೆ ಕೊಡವ ಸಂಪ್ರದಾಯದಂತೆ ವಿವಾಹ ಕಾರ್ಯಕ್ರಮಗಳು ಜರುಗಲಿವೆ. ಅತ್ಯಂತ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಈ ಮದುವೆ ನಡೆದಿದ್ದು, ಚಿತ್ರರಂಗದ ಈ ‘ಪವರ್ ಕಪಲ್’ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

ಹೈದರಾಬಾದ್‌ನಲ್ಲಿ ತಾರಾ ಮೆರುಗು: ಮದುವೆಯ ಸಂಭ್ರಮ ಇಲ್ಲಿಗೆ ಮುಗಿಯುವುದಿಲ್ಲ. ಮಾರ್ಚ್ 4ರಂದು ಹೈದರಾಬಾದ್‌ನ ಐಷಾರಾಮಿ ‘ತಾಜ್ ಕೃಷ್ಣ’ ಹೋಟೆಲ್‌ನಲ್ಲಿ ಅದ್ಧೂರಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಸ್ಯಾಂಡಲ್‌ವುಡ್, ಟಾಲಿವುಡ್ ಹಾಗೂ ಬಾಲಿವುಡ್‌ನ ದಿಗ್ಗಜರು ಆಗಮಿಸಲಿದ್ದಾರೆ. ಅಲ್ಲದೆ, ಆಂಧ್ರ ಮತ್ತು ತೆಲಂಗಾಣದ ಪ್ರಭಾವಿ ರಾಜಕಾರಣಿಗಳು ನವಜೋಡಿಗೆ ಹರಸಲಿದ್ದಾರೆ.

ದುಬಾರಿ ದ್ವೀಪದಲ್ಲಿ ಹನಿಮೂನ್ ಸಂಭ್ರಮ: ಮದುವೆಯ ನಂತರ ಈ ಜೋಡಿ ಎಲ್ಲಿಗೆ ಹನಿಮೂನ್‌ಗೆ ಹೋಗಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಸಿಕ್ಕಿರುವ ಮಾಹಿತಿ ಪ್ರಕಾರ, ಕೆರಿಬಿಯನ್ ಸಮುದ್ರದಲ್ಲಿರುವ ಅತ್ಯಂತ ಖಾಸಗಿ ಮತ್ತು ಐಷಾರಾಮಿ ‘ಕ್ಯಾಲಿವಿನಿ’ (Calivigny Island) ದ್ವೀಪಕ್ಕೆ ಇವರು ಪಯಣ ಬೆಳೆಸಲಿದ್ದಾರೆ.

ಇದು ವಿಶ್ವದ ಅತ್ಯಂತ ದುಬಾರಿ ಪ್ರವಾಸಿ ತಾಣಗಳಲ್ಲಿ ಒಂದಾಗಿದ್ದು, ಈ ದ್ವೀಪದಲ್ಲಿ ಸಂಪೂರ್ಣ ಪ್ರತ್ಯೇಕತೆ ಸಿಗಲಿದೆ. ಇದರೊಂದಿಗೆ ರಶ್ಮಿಕಾ ಅವರಿಗೆ ಅಚ್ಚುಮೆಚ್ಚಿನ ಜಪಾನ್ ಹಾಗೂ ವಿಜಯ್ ಅವರ ಪ್ರಿಯವಾದ ಇಟಲಿ ದೇಶಗಳಿಗೂ ಈ ಜೋಡಿ ಭೇಟಿ ನೀಡಲಿದೆ. ‘ಗೀತಾ ಗೋವಿಂದಂ’ ಚಿತ್ರದ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ಈಗ ರಿಯಲ್ ಲೈಫ್‌ನಲ್ಲಿಯೂ ಒಂದಾಗಿರುವುದು ಅಭಿಮಾನಿಗಳಿಗೆ ಸಂಭ್ರಮ ತಂದಿದೆ.

Previous articleಎಜಿಆರ್, ಆದಾಯದಲ್ಲಿ ಶೇ. 43ರಷ್ಟು ಪಾಲಿನೊಂದಿಗೆ ಜಿಯೋ ಮುಂಚೂಣಿ
Next articleಅಜ್ಞಾತ ಸ್ಥಳದಿಂದ ಮಲ್ಲಿಕಾರ್ಜುನ ಮುತ್ಯಾ ವಿಡಿಯೋ ರಿಲೀಸ್