SK Home Ad
Home ಸಿನಿ ಮಿಲ್ಸ್ ‘ಗುಳ್ಳೆನರಿ’ ಯಶಸ್‌ಗೆ ಸಿಂಹದ ಕಿರೀಟದ ಯೋಗ? ‘ಕಾಗೆ’ ಪತ್ತೆಹಚ್ಚಲು ಮನೆಯೊಳಗೆ ಮಹಾ ಟ್ವಿಸ್ಟ್!

‘ಗುಳ್ಳೆನರಿ’ ಯಶಸ್‌ಗೆ ಸಿಂಹದ ಕಿರೀಟದ ಯೋಗ? ‘ಕಾಗೆ’ ಪತ್ತೆಹಚ್ಚಲು ಮನೆಯೊಳಗೆ ಮಹಾ ಟ್ವಿಸ್ಟ್!

0
35

BBK13: ಬಿಗ್ ಬಾಸ್ ಕನ್ನಡ ಸೀಸನ್ 13ರ 12ನೇ ವಾರದ ಅಂತ್ಯದ ಹೊತ್ತಿಗೆ ಮನೆಯೊಳಗೆ ಆಟದ ಸ್ವರೂಪ ಸಂಪೂರ್ಣ ಬದಲಾಗಿದ್ದು, ‘ಗುಳ್ಳೆನರಿ’ ಮತ್ತು ‘ಕಾಗೆ’ ಕಾನ್ಸೆಪ್ಟ್‌ಗಳ ಮೂಲಕ ಬಿಗ್ ಬಾಸ್ ಮನೆಯನ್ನು ಅರಣ್ಯವನ್ನಾಗಿ ರೂಪಿಸಿದ್ದಾರೆ. ನಂಬರ್‌ಗಳ ಲೆಕ್ಕಾಚಾರದ ಮೇಲೆ ಇದೀಗ ‘ಸಿಂಹ’ವನ್ನು ಪರಿಚಯಿಸಲಾಗಿದ್ದು, ಕಿರೀಟ ಧರಿಸಿ ಆಡುವ ಸ್ಪರ್ಧಿ ಮನೆಯ ರಾಜನಾಗುವ ಅವಕಾಶ ಪಡೆದುಕೊಳ್ಳಲಿದ್ದಾರೆ. ಕಿರೀಟವನ್ನು ಸ್ಪರ್ಧಿಗಳು ಪರಸ್ಪರ ಹಸ್ತಾಂತರಿಸಿಕೊಳ್ಳಬೇಕಿದ್ದು, ಯಾರ ಬಳಿ ಕಿರೀಟ ಬರುತ್ತದೆಯೋ ಅವರು ಕಾಗೆ ಯಾರೆಂದು ಪತ್ತೆಹಚ್ಚುವ ಸವಾಲು ಇದೆ.

ಈ ಆಟದಲ್ಲಿ ‘ಗುಳ್ಳೆನರಿ’ಯಾಗಿ ಮುಖವಾಡ ಧರಿಸಿರುವ ಯಶಸ್ ಕೃಷ್ಣ ತಮ್ಮ ಮಾತಿನ ಚತುರತೆಯಿಂದ ಉಳಿದ ಸ್ಪರ್ಧಿಗಳಲ್ಲಿ ನಂಬಿಕೆ ಮೂಡಿಸಿ, ತಮ್ಮ ಗುಟ್ಟನ್ನು ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ. ಇತ್ತ ತಾಂಡವ್ ರಾಮ್ ಮತ್ತು ಸೌಂದರ್ಯ ಶೆಟ್ಟಿ ಅವರಿಗೆ ಕಾಗೆ ಸ್ಥಾನ ಹಂಚಿಕೆಯಾಗಿದ್ದು, ಗುಳ್ಳೆನರಿಯನ್ನು ಹುಡುಕುವ ಜವಾಬ್ದಾರಿ ಇದೆ. ಈ ನಡುವೆ ಕಿರಣ್ ಹೊಸ ಟ್ವಿಸ್ಟ್ ನೀಡಿದ್ದು, ಕಾಗೆ ನರಿಯನ್ನು ಹುಡುಕಲು ಯಶಸ್ ಅವರಿಗೆ ಅವಕಾಶ ನೀಡಿರುವುದು ಆಟದ ರೋಚಕತೆಯನ್ನು ಹೆಚ್ಚಿಸಿದೆ.

ಸೀಸನ್ ಅಂತ್ಯದವರೆಗೂ ನಾಮಿನೇಟ್ ಆಗಿರುವ ಯಶಸ್‌ಗೆ ಈ ಟಾಸ್ಕ್ ಗೆಲ್ಲುವುದು ಅನಿವಾರ್ಯವಾಗಿದ್ದು, ಪ್ರೋಮೋದಲ್ಲಿ ಯಶಸ್ ಸಿಂಹ ಆಗುವ ಸುಳಿವು ಕಾಣಿಸಿದೆ. ಒಂದು ವೇಳೆ ಸಿಂಹದ ಪಟ್ಟ ಸಿಕ್ಕರೆ ಯಶಸ್ ತಮ್ಮನ್ನೇ ತಾವು ಬಯಲು ಮಾಡಿಕೊಳ್ಳುತ್ತಾರಾ ಅಥವಾ ಕಾಗೆಯನ್ನು ಪತ್ತೆಹಚ್ಚುತ್ತಾರಾ ಎಂಬ ಕುತೂಹಲ ಮೂಡಿದೆ. ಹಳೆಯ ಸ್ನೇಹ-ದ್ವೇಷಗಳನ್ನು ಬಿಟ್ಟು ಸ್ಪರ್ಧಿಗಳು ಲೆಕ್ಕಾಚಾರದ ಆಟವಾಡುತ್ತಾರಾ, ತಾಂಡವ್ ಮತ್ತು ಸೌಂದರ್ಯ ತಂತ್ರವೇನು ಎಂಬುದನ್ನು ವಾರಾಂತ್ಯದ ಸಂಚಿಕೆಗಳಲ್ಲಿ ಕಾದು ನೋಡಬೇಕಿದೆ.