Home Advertisement
Home ಸಿನಿ ಮಿಲ್ಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻವಿರೋಶ್‌ʼ ಜೋಡಿ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻವಿರೋಶ್‌ʼ ಜೋಡಿ

0
84

ಉದಯಪುರ: ರಶ್ಮಿಕಾ ಮಂದಣ್ಣ ಮತ್ತು ವಿಜಯ್‌ ದೇವರಕೊಂಡ ತೆಲುಗು ಸಂಪ್ರದಾಯದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ರಾಜಸ್ಥಾನದ ಉದಯಪುರದ ಐಟಿಸಿ ಹೋಟೆಲ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಕೆಲವು ಸೆಲೆಬ್ರಿಟಿಗಳು, ರಾಜಕೀಯ ನಾಯಕರು ಸೇರಿದಂತೆ ಅಂದಾಜು ನೂರು ಜನ ಅತಿಥಿಗಳು ಮಾತ್ರ ಭಾಗಿಯಾಗಿದ್ದರು.

ಇದನ್ನೂ ಓದಿ:  T20 world cup: ಭಾರತ ಗೆದ್ದರಷ್ಟೇ ಸೆಮೀಸ್ ಕನಸು ಜೀವಂತ

ವಿಜಯ್ ದೇವರಕೊಂಡ ಅವರ ತೆಲುಗು ಹಿಂದೂ ಆಚರಣೆಗಳನ್ನು ಅನುಸರಿಸುತ್ತಿದ್ದು, ತೆಲುಗು ಸಂಪ್ರದಾಯದಂತೆ ಮದುವೆ ಕಾರ್ಯಕ್ರಮ ಬೆಳಗ್ಗೆ ಮುಕ್ತಾಯಗೊಂಡಿದೆ. ಕೊಡಗು ಜಿಲ್ಲೆಯವರಾಗಿರುವ ರಶ್ಮಿಕಾ ಮಂದಣ್ಣ ಅವರ ಕೊಡವ ಸಂಪ್ರದಾಯದಂತೆ ಸಂಜೆ ವೇಳೆಗೆ ಮದುವೆ ಕಾರ್ಯಕ್ರಮಗಳು ಜರುಗಲಿವೆ.

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ಈಗಾಗಲೇ ಮದುವೆ ಕುರಿತು ಅಧಿಕೃತ ಮಾಹಿತಿ ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಮದುವೆ ಆಮಂತ್ರಣವನ್ನು ಹಂಚಿಕೊಂಡಿದ್ದರು.

Previous articleT20 world cup: ಭಾರತ ಗೆದ್ದರಷ್ಟೇ ಸೆಮೀಸ್ ಕನಸು ಜೀವಂತ
Next articleರೈಲ್ವೆ ಮತ್ತು ಜಲಶಕ್ತಿ ಇಲಾಖೆಯಲ್ಲಿ ಅಭಿವೃದ್ಧಿ ಪರ್ವ