Home Advertisement
Home ನಮ್ಮ ಜಿಲ್ಲೆ ಕೊಪ್ಪಳ `ಸರ್ಕಾರಿ ಆಸ್ತಿ ಲೂಟಿ ಮಾಡಿದವರ ದೂರವಿಡಿ’

`ಸರ್ಕಾರಿ ಆಸ್ತಿ ಲೂಟಿ ಮಾಡಿದವರ ದೂರವಿಡಿ’

0
175
ಇಕ್ಬಾಲ ಅನ್ಸಾರಿ

ಗಂಗಾವತಿ: ಸರ್ಕಾರದ ಆಸ್ತಿ ಲೂಟಿ ಹೊಡೆದು ಜೈಲಿಗೆ ಹೋಗಿ ಬಂದ ಬಳ್ಳಾರಿಯವರನ್ನು ದೂರವಿಡಿ. ಅವರ ಬಗ್ಗೆ ಎಚ್ಚರವಿರಲಿ ಎಂದು ಕಾಂಗ್ರೆಸ್ ಮಾಜಿ ಸಚಿವ ಇಕ್ಬಾಲ ಅನ್ಸಾರಿ ಹೇಳಿದರು.
ನಗರದ ೨ ಮತ್ತು ೧೮ ವಾರ್ಡ್‌ನ ಬಸವಣ್ಣ ವೃತ್ತದ ಬಳಿಯ ಕಾಳಿಕಾ ದೇವಿ ದೇವಸ್ಥಾನದ ಹತ್ತಿರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ ಚುನಾವಣೆಯಲ್ಲಿ ಬಳ್ಳಾರಿಯವರು ಮೂರು ಅಥವಾ ನಾಲ್ಕನೇ ಸ್ಥಾನಕ್ಕೆ ಹೋಗುವುದು ನಿಶ್ಚಿತ.
ಬೇರೆ ಊರಿನಿಂದ ಬಂದವರು ಬೇರೆ ಊರಿಗೆ ಮರಳಿ ಹೋಗುವುದು ಗ್ಯಾರಂಟಿ. ಅವರನ್ನು ನಂಬಿ ಹೋದವರು ಸಂಕಷ್ಟದಲ್ಲಿ ಸಿಲುಕುವುದು ಶತಸಿದ್ಧ ಎಂದರು. ನನ್ನ ಎರಡು ವರ್ಷದ ಶಾಸಕ ಸಚಿವ ಸ್ಥಾನದ ಅವಧಿಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ೧೧ ನೂರು ಕೋಟಿ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೊಳಿಸಿ ಅಭಿವೃದ್ಧಿ ಮಾಡಿರುವ ಬಗ್ಗೆ ಲೆಕ್ಕಪತ್ರ ಕೊಟ್ಟಿದ್ದೇನೆ ಎಂದರು.