Home Advertisement
Home ಸುದ್ದಿ ರಾಜ್ಯ ಬಳ್ಳಾರಿ–ಹೊಸಪೇಟೆ ಮಲ್ಟಿಟ್ರ್ಯಾಕ್: ಕೇಂದ್ರ ಸಚಿವ ಸಂಪುಟ ಅನುಮೋದನೆ

ಬಳ್ಳಾರಿ–ಹೊಸಪೇಟೆ ಮಲ್ಟಿಟ್ರ್ಯಾಕ್: ಕೇಂದ್ರ ಸಚಿವ ಸಂಪುಟ ಅನುಮೋದನೆ

0
52

₹18,509 ಕೋಟಿ ರೈಲು ಯೋಜನೆಗಳಿಗೆ ಕ್ಯಾಬಿನೆಟ್ ಗ್ರೀನ್ ಸಿಗ್ನಲ್: ಕರ್ನಾಟಕಕ್ಕೆ ಭಾರಿ ಲಾಭ

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತ ಕೇಂದ್ರ ಸಚಿವ ಸಂಪುಟ ಸಮಿತಿ ಸಭೆಯಲ್ಲಿ, ದೆಹಲಿ, ಹರಿಯಾಣ, ಮಹಾರಾಷ್ಟ್ರ ಹಾಗೂ ಕರ್ನಾಟಕದ 12 ಜಿಲ್ಲೆಗಳನ್ನು ಒಳಗೊಂಡ ಮೂರು ಪ್ರಮುಖ ಮಲ್ಟಿಟ್ರ್ಯಾಕ್ ರೈಲು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಈ ಯೋಜನೆಗಳಿಗೆ ಒಟ್ಟು ₹18,509 ಕೋಟಿ ಅಂದಾಜು ವೆಚ್ಚ ನಿಗದಿಪಡಿಸಲಾಗಿದ್ದು, ಕೇಂದ್ರ ರೈಲ್ವೆ ಸಚಿವಾಲಯದ ಅಡಿಯಲ್ಲಿ ಕಾರ್ಯಗತಗೊಳ್ಳಲಿವೆ.

ಇದನ್ನೂ ಓದಿ: ದೆಹಲಿ ಭೇಟಿಯ ಫಲಿತಾಂಶದ ಸುಳಿವು ನೀಡಿದ ಡಿಸಿಎಂ ಡಿಕೆ ಶಿವಕುಮಾರ್

ಅನುಮೋದನೆ ಪಡೆದ ಪ್ರಮುಖ ಯೋಜನೆಗಳು:

ಬಳ್ಳಾರಿ – ಹೊಸಪೇಟೆ 3ನೇ ಮತ್ತು 4ನೇ ಮಾರ್ಗ

ಕಸಾರಾ – ಮನ್ಮಾಡ್ 3ನೇ ಮತ್ತು 4ನೇ ಮಾರ್ಗ

ದೆಹಲಿ – ಅಂಬಾಲಾ 3ನೇ ಮತ್ತು 4ನೇ ಮಾರ್ಗ

ಇವುಗಳಲ್ಲಿ ಬಳ್ಳಾರಿ–ಹೊಸಪೇಟೆ ನಾಲ್ಕನೇ ಮಾರ್ಗ ಯೋಜನೆಗೆ ಮಾತ್ರವೇ ಸುಮಾರು ₹2,372 ಕೋಟಿ ವೆಚ್ಚವಾಗಲಿದೆ.

ಇದನ್ನೂ ಓದಿ: ಸಾವಿರ ದಿನಗಳ ಸಾಧನೆ: GDP, GST ಸಂಗ್ರಹದಲ್ಲಿ ಕರ್ನಾಟಕ ದಾಖಲೆ

ಕರ್ನಾಟಕಕ್ಕೆ ವಿಶೇಷ ಲಾಭ: ಬಳ್ಳಾರಿ–ಹೊಸಪೇಟೆ ಮೂರನೇ ಮತ್ತು ನಾಲ್ಕನೇ ಮಾರ್ಗ ಯೋಜನೆಯು ಬಳ್ಳಾರಿ ಹಾಗೂ ಹೊಸಪೇಟೆ ಪ್ರದೇಶಗಳ ಉಕ್ಕು ಮತ್ತು ಗಣಿಗಾರಿಕಾ ಚಟುವಟಿಕೆಗಳಿಗೆ ದೊಡ್ಡ ಬೆಂಬಲ ನೀಡಲಿದೆ. ಇದರಿಂದ ಈ ಭಾಗದ ರೈಲು ದಟ್ಟಣೆ ಕಡಿಮೆಯಾಗುವ ಜೊತೆಗೆ ಸರಕು ಸಾಗಣೆ ವೇಗವಾಗಿ ನಡೆಯಲಿದೆ.

ಈ ಮಾರ್ಗವು ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಿದ್ದು, ಹಂಪಿ, ಬಳ್ಳಾರಿ ಕೋಟೆ, ದರೋಜಿ ಕರಡಿ ಅಭಯಾರಣ್ಯ, ತುಂಗಭದ್ರಾ ಅಣೆಕಟ್ಟು, ಕೆಂಚನಗುಡ್ಡ ಹಾಗೂ ವಿಜಯ ವಿಠ್ಠಲ ದೇವಾಲಯಕ್ಕೆ ಉತ್ತಮ ರೈಲು ಸಂಪರ್ಕ ಒದಗಿಸಲಿದೆ.

ಇದನ್ನೂ ಓದಿ: ಭರವಸೆ ಪಾಲನೆ ಮುಂದುವರಿಯಲಿದೆ: ಹಾವೇರಿಯಲ್ಲಿ ಸಿಎಂ ಭರವಸೆ

ಸರಕು ಸಾಗಣೆ ಮತ್ತು ಆರ್ಥಿಕ ಪ್ರಗತಿ: ಈ ಯೋಜನೆಗಳಿಂದ ಸುಮಾರು 3,902 ಹಳ್ಳಿಗಳು (97 ಲಕ್ಷ ಜನ) ಹೆಚ್ಚುವರಿ ಸಂಪರ್ಕ ಪಡೆಯಲಿವೆ. ವರ್ಷಕ್ಕೆ 96 ಮಿಲಿಯನ್ ಟನ್ ಹೆಚ್ಚುವರಿ ಸರಕು ಸಾಗಣೆ ಸಾಧ್ಯ, ಕಲ್ಲಿದ್ದಲು, ಉಕ್ಕು, ಕಬ್ಬಿಣದ ಅದಿರು, ಸಿಮೆಂಟ್, ಧಾನ್ಯ, ಸಕ್ಕರೆ, ರಸಗೊಬ್ಬರ ಸಾಗಣೆಗೆ ಹೆಚ್ಚಿನ ಸಾಮರ್ಥ್ಯ, ಲಾಜಿಸ್ಟಿಕ್ಸ್ ವೆಚ್ಚದಲ್ಲಿ ಗಣನೀಯ ಇಳಿಕೆ, ಇದರಿಂದ ಕೈಗಾರಿಕೆ, ವ್ಯಾಪಾರ ಮತ್ತು ಕೃಷಿ ಕ್ಷೇತ್ರಗಳಿಗೆ ಬಲ ಸಿಗಲಿದೆ.

ಪರಿಸರ ಸ್ನೇಹಿ ಯೋಜನೆ: ಈ ರೈಲು ಯೋಜನೆಗಳು ಪರಿಸರದ ದೃಷ್ಟಿಯಿಂದಲೂ ಮಹತ್ವದ್ದಾಗಿವೆ. ಇದರಿಂದ ವರ್ಷಕ್ಕೆ ಸುಮಾರು 22 ಕೋಟಿ ಲೀಟರ್ ತೈಲ ಆಮದು ಕಡಿತ, 111 ಕೋಟಿ ಕೆ.ಜಿ. CO₂ ಹೊರಸೂಸುವಿಕೆಯು ಸುಮಾರು 4 ಕೋಟಿ ಮರಗಳನ್ನು ನೆಟ್ಟಷ್ಟರ ಪರಿಣಾಮ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: ಮುಂಬೈನಲ್ಲಿ ಮೆಟ್ರೋ ಕಾಮಗಾರಿ ದುರಂತ: ಸ್ಲ್ಯಾಬ್ ಕಂಬ ಕುಸಿದು ಒಬ್ಬ ಸಾವು, 3 ಜನರಿಗೆ ಗಾಯ

ಗತಿ ಶಕ್ತಿ ಯೋಜನೆಯಡಿ ಅಭಿವೃದ್ಧಿ: ಈ ಎಲ್ಲಾ ಯೋಜನೆಗಳನ್ನು PM-ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ ಅಡಿಯಲ್ಲಿ ರೂಪಿಸಲಾಗಿದ್ದು, ಬಹುಮಾದ್ಯಮ ಸಂಪರ್ಕ ಮತ್ತು ಲಾಜಿಸ್ಟಿಕ್ಸ್ ದಕ್ಷತೆ ಹೆಚ್ಚಿಸುವ ಗುರಿ ಹೊಂದಿವೆ. ಈ ಯೋಜನೆಗಳು 2030–31ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

Previous articleದೆಹಲಿ ಪ್ರವಾಸ ಸಕ್ಸಸ್: ಡಿಕೆಶಿ ಮುಗುಳ್ನಗೆಯಲ್ಲೇ ಉತ್ತರ