SK Home Ad
Home ನಮ್ಮ ಜಿಲ್ಲೆ ಬೆಂಗಳೂರು ದಲಿತ ಅಂತ ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡ್ತಿದೆ

ದಲಿತ ಅಂತ ಬಿಜೆಪಿ ನನ್ನನ್ನು ಟಾರ್ಗೆಟ್ ಮಾಡ್ತಿದೆ

0
8

ಬೆಂಗಳೂರು: ಒಬ್ಬ ದಲಿತ, ಆದಿವಾಸಿ ವ್ಯಕ್ತಿಯನ್ನು ಹೇಗಾದರು ಮಾಡಿ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಗುರಿಯಾಗಿಸಿಕೊಂಡು ಬಿಜೆಪಿ ನನ್ನ ರಾಜೀನಾಮೆ ಕೇಳುತ್ತಿದೆ ಎಂದು ಆರೋಪಿಸಿರುವ ಸಚಿವ ಬಿ.ನಾಗೇಂದ್ರ, ಅಖಂಡ ವಾಲ್ಮೀಕಿ ಸಮುದಾಯ ಎಲ್ಲವನ್ನೂ ನೋಡುತ್ತಿದೆ. ಮುಂಬರುವ ಚುನಾವಣೆ ವೇಳೆ ನಮ್ಮ ಸಮಾಜ ಯಾವ ರೀತಿ ಪ್ರತಿಕ್ರಿಯೆ ನೀಡಲಿದೆ ಎಂದು ಅವರಿಗೆ ಗೊತ್ತಾಗಲಿದೆ ಎಂದೂ ತಿರುಗೇಟು ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ರಾಜೀನಾಮೆಗೆ ಬಿಜೆಪಿ ಸದನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುರಿತು ಪ್ರತಿಕ್ರಿಯಿಸಿ, ವಾಲ್ಮೀಕಿ ನಿಗಮ ಹಗರಣದಲ್ಲಿ ನನ್ನ ಖಾತೆಗೆ ನಯಾ ಪೈಸೆ ಹಣ ಬಂದಿಲ್ಲ. ಆದರೂ ಇ.ಡಿ ನನ್ನನ್ನು ಜೈಲಿಗೆ ಹಾಕಿತು. ಅವರು ಯಾರ, ಯಾರ ಹೆಸರು ಹೇಳಬೇಕು ಎಂದು ನನ್ನ ಮೇಲೆ ಒತ್ತಡ ಹಾಕಿದ್ದರು. ಈ ಎಲ್ಲಾ ವಿಚಾರಗಳನ್ನು ಸದನದಲ್ಲಿ ಹೇಳಬೇಕಿದೆ ಎಂದು ನಾಗೇಂದ್ರ ತಿಳಿಸಿದರು.

ಕೋರ್ಟ್ ನನಗೆ ಬೇಲ್ ನೀಡಿದೆ: ನ್ಯಾಯಾಲಯ ನನಗೆ ಜಾಮೀನು ನೀಡಿದೆ. ಹಾಗಾಗಿ ಜೈಲಿನಿಂದ ಹೊರಗೆ ಬಂದಿದ್ದೇನೆ. ಯಾವ ಕೋರ್ಟ್ ಕೂಡಾ ನಾನು ಅಪರಾಧಿ ಎಂದು ಹೇಳಿಲ್ಲ. ಆದರೆ ನ್ಯಾಯಕ್ಕೆ ನಾನು ತಲೆಬಾಗುತ್ತೇನೆ. ರಾಜ್ಯಪಾಲರು ನನಗೆ ಪ್ರಮಾಣವಚನಕ್ಕೆ ಅವಕಾಶ ಕೊಟ್ಟಿದ್ದಾರೆ. ರಾಜಕೀಯ ದುರುದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡಬೇಡಿ. ಇನ್ನೇನು ನನ್ನನ್ನು ಹ್ಯಾಂಗ್ ಮಾಡಬೇಕಾ? ವಾಲ್ಮೀಕಿಯನ್ನು ಅಪಮಾನಿಸಲು ಹೊರಟಿದ್ದಾರೆ. ರಾಮನ ಹುಂಡಿ ಹಣ ಕದ್ದಿದ್ದಾರೆ. ಅದಕ್ಕಿಂತ ದೊಡ್ಡ ತಪ್ಪು ಮಾಡಿದ್ದೇನಾ? ವರ್ಣಪದ್ಧತಿಯನ್ನು ಮತ್ತೆ ಮಾಡಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸರ್ಕಾರಿ ಜಾಗ ಶ್ರೀರಾಮುಲು ಗುಳುಂ: ದಲಿತನನ್ನು ಅಪರಾಧಿ ಮಾಡಲು ಹೊರಟಿದ್ದೀರಾ. ದಲಿತರ ಮೇಲೆ ಕೆಂಗಣ್ಣು ಬೀರಬೇಡಿ. ಆದಿವಾಸಿ ವ್ಯಕ್ತಿ ಮುಂದೆ ಬರಲು ಪ್ರೋತ್ಸಾಹ ಕೊಡಿ. ಶ್ರೀರಾಮುಲು ಅವರ ಮೇಲೆ ಸರ್ಕಾರಿ ಜಮೀನು ಗುಳುಂ ಮಾಡಿದ ಆರೋಪ ಇದೆ. ನೀವು ಒಬ್ಬ ದಲಿತ. ಇನ್ನೊಬ್ಬ ದಲಿತನ ಮೇಲೆ ದ್ವೇಷ ಏಕೆ ಮಾಡುತ್ತಿದ್ದೀರಿ. ಬ್ಲ್ಯಾಕ್‌ಮೇಲ್ ಮಾಡಿ ನಾನು ಸಚಿವ ಸ್ಥಾನ ತೆಗೆದುಕೊಂಡಿಲ್ಲ. ನನ್ನ ಮೇಲೆ ನಂಬಿಕೆ ಇಟ್ಟು ಹೈಕಮಾಂಡ್ ಮಂತ್ರಿ ಮಾಡಿದೆ. ಕಲ್ಲೇಶ್ ಎಂಬ ಅಧಿಕಾರಿ ಮೇಲೆ ಇಡಿ ಅಧಿಕಾರಿಗಳು ಒತ್ತಡ ಹಾಕಿ, ಆಗಿನ ಡಿಸಿಎಂ ಹೆಸರು ಹೇಳಿ ಎಂದು ಒತ್ತಡ ಹಾಕಿದ್ದರು. 2 ವರ್ಷ ಆದರೂ ಪ್ರಕರಣ ವಿಚಾರಣೆಗೇ ಬರುತ್ತಿಲ್ಲ ಎಂದು ವಿಷಾದಿಸಿದರು.