Home Advertisement
Home ನಮ್ಮ ಜಿಲ್ಲೆ ಬಾಗಲಕೋಟೆ ಜೀತಕ್ಕಿದ್ದ 24 ಜನ ಕಾರ್ಮಿಕರ ರಕ್ಷಣೆ..!

ಜೀತಕ್ಕಿದ್ದ 24 ಜನ ಕಾರ್ಮಿಕರ ರಕ್ಷಣೆ..!

0
53

ಬಾಗಲಕೋಟೆ: ಇಳಕಲ್ ತಾಲೂಕಿನ ಸಂಕ್ಲಾಪುರ ಗ್ರಾಮ ಬಳಿಯ ಇಟ್ಟಿಗೆ ಬಟ್ಟಿಯೊಂದರಲ್ಲಿ ಜೀತಕ್ಕಿದ್ದ ಐವರು ಬಾಲ ಕಾರ್ಮಿಕರೂ ಸೇರಿದಂತೆ 24 ಜನರನ್ನು ರಕ್ಷಿಸಲಾಗಿದೆ.

ಈ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ತಹಶೀಲ್ದಾರ್ ಅಮರೇಶ ಪಮ್ಮಾರ ನೇತೃತ್ವದ ತಂಡ ಕಾರ್ಮಿಕರನ್ನು ರಕ್ಷಿಸಿದೆ. ಈ ಸಂಬಂಧ ಇಟ್ಟಿಗೆ ಬಟ್ಟಿ ಮಾಲೀಕ ಈರಪ್ಪ ಕುಂಬಾರ ಎಂಬಾತನ ಮೇಲೆ ಇಳಕಲ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ, ಜೀತ ಪದ್ಧತಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.‌

ಇದನ್ನೂ ಓದಿ: ಪ್ರೇಮಿಗಳ ದಿನಾಚರಣೆಗೂ ಮುನ್ನ 40 ವೀರಯೋಧರ ಪ್ರಾಣತ್ಯಾಗ ಮರೆಯದಿರಿ; ಜೈ ಜವಾನ್!

ಓಡಿಸ್ಸಾದಿಂದ ಕಾರ್ಮಿಕರಿಗೆ ಮುಂಗಡ ಹಣ ನೀಡಿ ಕರೆತರಲಾಗಿತ್ತು. ವಾರಕ್ಕೆ 400 ರೂ. ಗಳಂತೆ ಕೂಲಿ ನೀಡಲಾಗುತಿತ್ತು. ಕನಿಷ್ಠ ಮೂಲಸೌಕರ್ಯಗಳನ್ನೂ ನೀಡದೆ ಇಟ್ಟಿಗೆ ಬಟ್ಟಿಯಲ್ಲಿ ಶೋಷಣೆ ಮಾಡಲಾಗುತಿತ್ತು ಎಂದು ಆರೋಪಿಸಲಾಗಿದೆ. ಕಾರ್ಮಿಕರನ್ನು ತಮ್ಮ ಸ್ವರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Previous articleಹಂಪಿ ಉತ್ಸವ ಮುಖ್ಯವೇದಿಕೆಯ ಎದುರು ಅಗ್ನಿ ಅವಘಡ
Next articleನಾಗಾ ಸಾಧುಗಳ ಆಶೀರ್ವಾದ ಪಡೆದ ಧಾರವಾಡ ಜಿಲ್ಲಾಧಿಕಾರಿ