Home Advertisement
Home ಸುದ್ದಿ ವಿದೇಶ ಪಾಕಿಸ್ತಾನ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 31 ಸಾವು

ಪಾಕಿಸ್ತಾನ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 31 ಸಾವು

0
7

ಇಸ್ಲಾಮಾಬಾದ್: ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಶಿಯಾ ಸಮುದಾಯಕ್ಕೆ ಸೇರಿದ ಮಸೀದಿಯೊಂದರಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆಯೇ ಆತ್ಮಾಹುತಿ ದಾಳಿ ನಡೆದ ಪರಿಣಾಮ ಕನಿಷ್ಠ 31 ಮಂದಿ ಮೃತರಾಗಿದ್ದು, 170ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ.

ತಲರೈ ಕಲಾನ್ ಪ್ರದೇಶದ ಖದೀಜತುಲ್ ಕುಬ್ರಾ ಮಸೀದಿಯಲ್ಲಿ ಆತ್ಮಾಹುತಿ ದಾಳಿಕೋರ ಶುಕ್ರವಾರದ ಪ್ರಾರ್ಥನೆ ಸಮಯದಲ್ಲಿ ಮಸೀದಿಯ ಮುಖ್ಯದ್ವಾರದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿರುವುದರಿಂದ ಈ ದುರಂತ ಸಂಭವಿಸಿದೆ.

ಸ್ಫೋಟದ ತೀವ್ರತೆಗೆ ಮಸೀದಿಯ ದ್ವಾರದ ಕಟ್ಟಡ ಹಾಗೂ ಕಿಟಕಿ ಗಾಜುಗಳಿಗೆ ಭಾರಿ ಹಾನಿಯಾಗಿದೆ. ಪರಿಣಾಮ ಇಡೀ ಇಸ್ಲಾಮಾಬಾದ್‌ನಲ್ಲಿ ತುರ್ತು ಪರಿಸ್ಥಿತಿಯನ್ನು ಸರ್ಕಾರ ಘೋಷಿಸಿದೆ.

24 ಟಿಟಿಪಿ ಉಗ್ರರ ಸದೆಬಡಿದ ಪಾಕ್ ಸೇನೆ: ಪಾಕಿಸ್ತಾನ ಭದ್ರತಾ ಪಡೆ ಖೈಬರ್ ಪಾಖ್ತುಂವ್ವಾ ಪ್ರಾಂತ್ಯದ ಒರಾಕ್‌ಝಾಯಿ ಪ್ರದೇಶದಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ತೆಹ್ರಿಕ್ ಇ ತಾಲಿಬಾನ್ ಪಾಕಿಸ್ತಾನ್(ಟಿಟಿಪಿ) ಗುಂಪಿನ 24 ಉಗ್ರರು ಹತರಾಗಿದ್ದಾರೆ. ಒರಾಕ್‌ಝಾಯಿ ಪ್ರದೇಶದಲ್ಲಿ 14 ಹಾಗೂ ಖೈಬರ್ ಜಿಲ್ಲೆಯಲ್ಲಿ 10 ಉಗ್ರರನ್ನು ಸದೆಬಡಿಯಲಾಗಿದೆ.

Previous articleಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ, ಅಭ್ಯಾಸ ಮಾಡಿ
Next articleಟಿ20 ವಿಶ್ವಕಪ್‌ನಿಂದ ಹರ್ಷಿತ್ ರಾಣಾ ಔಟ್