Home Advertisement
Home ಸುದ್ದಿ ದೇಶ ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ, ಅಭ್ಯಾಸ ಮಾಡಿ

ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ, ಅಭ್ಯಾಸ ಮಾಡಿ

0
10

ನವದೆಹಲಿ: ದೇಶದಲ್ಲಿ ಈಗ ಅಂಕಿ-ಅಂಶಗಳು ಬಹಳ ಅಗ್ಗವಾಗಿದೆ ಎನ್ನುವ ಕಾರಣಕ್ಕೆ ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ. ಬದಲಿಗೆ ಶೈಕ್ಷಣಿಕ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ, 10ನೇ ತರಗತಿಯ ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಶುಕ್ರವಾರ ಸಲಹೆ ನೀಡಿದ್ದಾರೆ.

ಪರೀಕ್ಷಾ ಪೇ ಚರ್ಚಾದ ಒಂಬತ್ತನೇ ಆವೃತ್ತಿಯ ಭಾಗವಾಗಿ ತಮ್ಮ ನಿವಾಸದಲ್ಲಿ ನಡೆದ ಅಧಿವೇಶನದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ, ಯುವಕರಿಗೆ ಕೆಲವೊಂದು ಉಪಯುಕ್ತ ಸಲಹೆಗಳನ್ನು ನೀಡಿದರು.

ಶಿಕ್ಷಣ ಹೊರೆಯಲ್ಲ ಮನಸ್ಸಿಟ್ಟು ಕಲಿಯಿರಿ: ಶಿಕ್ಷಣವು ಹೊರೆಯಲ್ಲ. ಅರೆಮನಸ್ಸಿನಿಂದ ಕಲಿಕೆಯಲ್ಲಿ ತೊಡಗುವುದು ಸರಿಯಲ್ಲ, ಆದ್ದರಿಂದ ನೀವೆಲ್ಲರೂ ಮನಸ್ಸಿಟ್ಟು ಸಂಪೂರ್ಣವಾಗಿ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು ಎಂದವರು ಕರೆ ನೀಡಿದರು.

ಸಣ್ಣ ಸಣ್ಣ ಕಲಿಕೆಯಿಂದ ನಿಮ್ಮ ಯಶಸ್ಸು ನಿರ್ಣಯವಾಗುವುದಿಲ್ಲ. ಅಂಕಗಳ ಮೇಲೆ ಗಮನಹರಿಸುವ ಬದಲು ಪ್ರತಿಯೊಬ್ಬರೂ ಜೀವನದಲ್ಲಿ ನಾವು ಎಲ್ಲಿಗೆ ತಲುಪಬಹುದು ಎಂಬುದರ ಮೇಲೆ ಕೇಂದ್ರೀಕರಿಸಬೇಕು. ನಿಮ್ಮ ಪೋಷಕರು, ಶಿಕ್ಷಕರು ಅಥವಾ ಗೆಳೆಯರು ಏನೇ ಹೇಳಿದರೂ, ನೀವು ನಿಮ್ಮದೇ ಯೋಜನೆ, ಮಾದರಿಯಲ್ಲಿ ನಂಬಿಕೆ ಇರಿಸಿಕೊಂಡು ಅದನ್ನೇ ಅನುಸರಿಸಬೇಕು. ಆದರೆ ನಿಮಗೆ ನೀಡುವ ಎಲ್ಲಾ ಸಲಹೆಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಿ ಎಂದು ತಿಳಿ ಹೇಳಿದರು.

ವೈಯಕ್ತಿಕ-ದೇಶದ ದೃಷ್ಟಿಕೋನ ಇರಲಿ: ಇದೇ ವೇಳೆ ವಿದ್ಯಾರ್ಥಿಗಳು ತಮ್ಮ ವೈಯಕ್ತಿಕ ಜವಾಬ್ದಾರಿಯನ್ನು ರಾಷ್ಟ್ರದ ದೀರ್ಘಕಾಲೀನ ದೃಷ್ಟಿಕೋನದೊಂದಿಗೆ ಜೋಡಿಸಿಕೊಳ್ಳಬೇಕೆಂದು ಅವರು ಗುಜರಾತ್‌ನ ಅರ್ಜುನ್ ಪಟೇಲ್ ಮತ್ತು ಅಸ್ಸಾಂನ ಸ್ನೇಹಾ ರಾಯ್‌ಗೆ ಸಲಹೆ ನೀಡಿದರು.

ನಾನು ಅಭಿವೃದ್ಧಿ ಹೊಂದಿದ ಭಾರತದ ಬಗ್ಗೆ ಮಾತನಾಡುವಾಗ, 100 ವರ್ಷಗಳ ನಂತರ ಭಾರತವು ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವಾಗ ಭಾರತ ಹೇಗಿರಬೇಕು ಎಂಬ ಯೋಚಿಸುತ್ತೇನೆ. ಆಗ ನಿಮ್ಮ ವಯಸ್ಸು ಎಷ್ಟಾಗಬಹುದು ಎಂದವರು ವಿದ್ಯಾರ್ಥಿಗಳಿಗೆ ಕೇಳಿದರು.

ಪಿಎಂ ಸಲಹೆಗಳೇನು?
* ಇಂಟರ್ನೆಟ್‌ನಲ್ಲಿ ಸಮಯ ವ್ಯರ್ಥ ಮಾಡಬೇಡಿ
* ಶೈಕ್ಷಣಿಕ ಕೌಶಲ್ಯ ಹೆಚ್ಚಿಸುವತ್ತ ಹೆಚ್ಚು ಇರಲಿ ಗಮನ
* ಅರೆಮನಸ್ಸಿನಿಂದ ಕಲಿಕೆಯಲ್ಲಿ ತೊಡಗಬಾರದು
* ಅಂಕಗಳ ಬದಲಿಗೆ ಜೀವನದ ಗುರಿಯತ್ತ ಸಾಗಿ
* ಸ್ವಂತ ಯೋಜನೆ, ಮಾದರಿಗಳಲ್ಲಿರಲಿ ನಂಬಿಕೆ

Previous article1.5 ಕೋಟಿ ರೂ. ದಂಡ: ನಟ ವಿಜಯ್ ಅರ್ಜಿ ವಜಾ
Next articleಪಾಕಿಸ್ತಾನ ಮಸೀದಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ: 31 ಸಾವು