ಅಹಮದಾಬಾದ್: ಮಹಿಳಾ ಪ್ರೀಮಿಯರ್ ಲೀಗ್ ಫೈನಲ್‌ನಲ್ಲಿ ಮಾಜಿ ಚಾಂಪಿಯನ್ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.
ಮಹಿಳಾ ಪ್ರೀಮಿಯರ್ ಲೀಗ್ 4ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಈಗಾಗಲೇ ವೇದಿಕೆ ಸಿದ್ಧಗೊಂಡಿದ್ದು, ಎರಡನೇ ಟ್ರೋಫಿ ಮೇಲೆ ಆರ್‌ಸಿಬಿ ಕಣ್ಣಿಟ್ಟಿದೆ. ಇನ್ನೊಂದಡೆ ಕಳೆದ 3 ಆವೃತ್ತಿಗಳ ರನ್ನರ್-ಅಪ್ ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿ ಗೆಲುವಿನ ಕನಸನ್ನು ಹೊತ್ತುಕೊಂಡು ಮೈದಾನಕ್ಕೆ ಇಳಿಯಲಿದೆ.
ಈ ಎರಡು ತಂಡಗಳ ನಾಯಕಿಯರು ವೈಯಕ್ತಿಕವಾಗಿಯೂ ಗೆಳತಿಯರಾಗಿದ್ದು, ಇದು ಸ್ನೇಹಿತೆಯರ ಸವಾಲ್ ಎಂದೇ ಗುರುತಿಸಿಕೊಂಡಿದೆ. ಉಭಯ ತಂಡಗಳಲ್ಲಿ ಶ್ರೇಷ್ಠ ಆಟಗಾರ್ತಿಯರ ಪಟ್ಟಿಯೇ ಇದ್ದು, ಒಂದು ಕಡೆ ಶಫಾಲಿ ವರ್ಮಾ ಮತ್ತು ಜೆಮಿಮಾ ರೊಡ್ರಿಗಸ್; ಮತ್ತೊಂದೆಡೆ ಸ್ಮೃತಿ ಮಂಧಾನ ಮತ್ತು ರಿಚಾ ಘೋಷ್ ಮುಖಾಮುಖಿಯಾಗುತ್ತಿದ್ದಾರೆ.
ಆರ್‌ಸಿಬಿಗೆ ಹ್ಯಾಟ್ರಿಕ್ ಕನಸು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ WPL 2024ರಲ್ಲಿ ಮಹಿಳಾ ತಂಡ ಒಂದು ಬಾರಿ ಚಾಂಪಿಯನ್ ಆಗಿದ್ದು, ಐಪಿಎಲ್ 2025ರ ಪಂದ್ಯಾವಳಿಯಲ್ಲಿ ಪುರುಷರ ತಂಡ ಚಾಂಪಿಯನ್ ಆಗಿತ್ತು. ಈ ಬಾರಿ ಮತ್ತೇ ಚಾಂಪಿಯನ್ ಆದರೆ ಹ್ಯಾಟ್ರಿಕ್ ಸಾಧನೆ ಮಾಡಿದಂತಾಗುತ್ತದೆ.
ವಿಶೇಷ ಸಂಗತಿ
* ಕಳೆದ ಮೂರು ಆವೃತ್ತಿಗಳಿಲ್ಲಿ ಎಲಿಮಿನೇಟರ್ ಗೆದ್ದ ತಂಡವೇ ಚಾಂಪಿಯನ್ ಆಗಿದೆ.
* ಡಬ್ಲ್ಯುಪಿಎಲ್‌ನಲ್ಲಿ ಎಲ್ಲಾ ಫೈನಲ್‌ಗಳಲ್ಲಿ ಆಡಿದ ತಂಡ-ಡೆಲ್ಲಿ ಕ್ಯಾಪಿಟಲ್ಸ್
* ಈ ಆವೃತ್ತಿಯಲ್ಲಿ ಡೆಲ್ಲಿ 5 ಪಂದ್ಯಗಳಲ್ಲಿ ಚೇಸಿಂಗ್‌ನಲ್ಲಿ ಗೆಲುವು ಕಂಡಿದೆ.
* ಈ ಸೀಸನ್‌ನಲ್ಲಿ 2 ತಂಡಗಳು ಪರಸ್ಪರ ಒಮ್ಮೊಮ್ಮೆ ಗೆದ್ದಿವೆ.
ಪಂದ್ಯ ಆರಂಭ: ಸಂಜೆ 7.30 ಕ್ಕೆ
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್, ಜಿಯೋಹಾಟ್‌ಸ್ಟಾರ್























