Home Advertisement
Home ನಮ್ಮ ಜಿಲ್ಲೆ ಶಿವಮೊಗ್ಗ ಇ-ಮೇಲ್ ಹ್ಯಾಕ್: ಕಾರ್ಖಾನೆಗೆ 78 ಲಕ್ಷ ರೂ. ವಂಚನೆ

ಇ-ಮೇಲ್ ಹ್ಯಾಕ್: ಕಾರ್ಖಾನೆಗೆ 78 ಲಕ್ಷ ರೂ. ವಂಚನೆ

0
224

ಶಿವಮೊಗ್ಗ: ಈ ಮೇಲ್ ಹ್ಯಾಕ್ ಮಾಡಿ ಕಚ್ಚಾ ವಸ್ತುಗಳ ಪೂರೈಕೆದಾರರ ಸೋಗಿನಲ್ಲಿ ಶಿವಮೊಗ್ಗದ ಕಾರ್ಖಾನೆಯೊಂದಕ್ಕೆ 78 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆಟೋಮೊಬೈಲ್ ಬಿಡಿ ಭಾಗಗಳ ತಯಾರಿಕೆ ಕಾರ್ಖಾನೆಗೆ ಬೆಂಗಳೂರಿನ ಪೂರೈಕೆದಾರ ಕಂಪನಿಯಿಂದ ಕಚ್ಚಾ ಸಾಮಗ್ರಿ ತರಿಸಿಕೊಳ್ಳಲಾಗುತ್ತಿತ್ತು. ಜ. 27ರಂದು ಪೂರೈಕೆದಾರರ ಹೆಸರಿನಲ್ಲಿ ಈ ಮೇಲ್ ಬಂದಿತ್ತು. ನಮ್ಮ ಬ್ಯಾಂಕ್ ಖಾತೆ ಎಸ್‌ಬಿಐನಿಂದ ಸೌತ್ ಇಂಡಿಯನ್ ಬ್ಯಾಂಕಿಗೆ ಬದಲಾಯಿಸಿದ್ದೇವೆ. ಇನ್ನು ಮುಂದೆ ಇದೇ ಖಾತೆಗೆ ಹಣ ವರ್ಗಾಯಿಸಿ ಎಂದು ತಿಳಿಸಲಾಗಿತ್ತು.

ಇದನ್ನು ನಂಬಿದ ಶಿವಮೊಗ್ಗದ ಕಾರ್ಖಾನೆ ವ್ಯವಸ್ಥಾಪಕ, ಜ. 28ರಂದು ಹೊಸ ಖಾತೆಗೆ 78,89,950 ರೂ. ವರ್ಗಾವಣೆ ಮಾಡಿದ್ದರು. ನಂತರ ಪರಿಶೀಲಿಸಿದಾಗ, ಅನಾಮಧೇಯ ವ್ಯಕ್ತಿಗಳು ಪೂರೈಕೆದಾರ ಕಂಪನಿಯ ಇಮೇಲ್ ಐಡಿ ಹ್ಯಾಕ್ ಮಾಡಿ ಈ ಕೃತ್ಯ ಎಸಗಿರುವುದು ಪತ್ತೆಯಾಗಿದೆ.

ವಂಚಕರು ನಕಲಿ ಬ್ಯಾಂಕ್ ವಿವರ ನೀಡಿ ಕಾರ್ಖಾನೆಯ ಹಣವನ್ನು ಆರ್‌ಟಿಜಿಎಸ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.