SK Home Ad
Home ಅಪರಾಧ ಜಮಖಂಡಿ: ನಿಷೇದಾಜ್ಞೆ ಜಾರಿ

ಜಮಖಂಡಿ: ನಿಷೇದಾಜ್ಞೆ ಜಾರಿ

0
180
ಜಮಖಂಡಿ

ಬಾಗಲಕೋಟೆ: ಜಿಲ್ಲೆಯ ಜಮಖಂಡಿ ನಗರದಲ್ಲಿ ಅನಧಿಕೃತವಾಗಿ ಸರ್ಕಲ್​ ನಿರ್ಮಾಣ ಹಿನ್ನೆಲೆ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಮಖಂಡಿ ತಹಶೀಲ್ದಾರ್ ಸದಾಶಿವ ಮಕ್ಕೋಜಿ ಆದೇಶ ಹೊರಡಿಸಿದ್ದಾರೆ. ನಗರದಲ್ಲಿ ಜನರು ಗುಂಪು, ಗುಂಪಾಗಿ ಸೇರುವಂತಿಲ್ಲ. ಶವ ಸಂಸ್ಕಾರಕ್ಕೆ ಅನ್ವಯಿಸುವುದಿಲ್ಲ ಎಂದು ತಹಶೀಲ್ದಾರ್ ಸದಾಶಿವ ಮುಕ್ಕೋಜಿ ಆದೇಶದಲ್ಲಿ ತಿಳಿಸಿದ್ದಾರೆ.ಶಾಸಕ ಆನಂದ ನ್ಯಾಮಗೌಡರ ನೇತ್ರತ್ವದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ವೃತ್ತ ನಿರ್ಮಾಣಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗಿತ್ತು. ಇದನ್ನು ಖಂಡಿಸಿ ಬಿಜೆಪಿ ಮುಖಂಡರು ಜಮಖಂಡಿಯಲ್ಲಿ 20ಕ್ಕೂ ಹೆಚ್ಚು ಸರ್ಕಲ್​​​ ನಿರ್ಮಾಣ ಆಗಿತ್ತು. ಈ ವಿವಾದ ಹೆಚ್ಚಾಗುತ್ತಿದ್ದಂತೆ 144 ಸೆಕ್ಷನ್ ಜಾರಿ ಮಾಡಲಾಗಿದೆ.