SK Home Ad
Home ಸಿನಿ ಮಿಲ್ಸ್ ದೊಡ್ಮನೆಯಲ್ಲಿ ತಾಂಡವ್ ರಾಮ್ ಮದುವೆ ಮಾತು: ಲಕ್ಷ್ಮಿ ಹೆಸರು ತಳುಕು ಹಾಕಿ ರೇಗಿಸಿದ ಕಿರಣ್, ಗಗನ್!

ದೊಡ್ಮನೆಯಲ್ಲಿ ತಾಂಡವ್ ರಾಮ್ ಮದುವೆ ಮಾತು: ಲಕ್ಷ್ಮಿ ಹೆಸರು ತಳುಕು ಹಾಕಿ ರೇಗಿಸಿದ ಕಿರಣ್, ಗಗನ್!

0
39

BBK13: ಬಿಗ್ ಬಾಸ್ ಮನೆಯಲ್ಲಿ ಆಟದ ತಂತ್ರಗಳ ನಡುವೆಯೂ ಆಗಾಗ ತಮಾಷೆ, ಕಾಲೆಳೆಯುವುದು ಮತ್ತು ವೈಯಕ್ತಿಕ ವಿಚಾರಗಳ ಚರ್ಚೆ ನಡೆಯುತ್ತಲೇ ಇರುತ್ತದೆ. ಇದೀಗ ದೊಡ್ಮನೆಯಲ್ಲಿ ನಟ ತಾಂಡವ್ ರಾಮ್ ಅವರ ಮದುವೆ ವಿಚಾರ ಭಾರಿ ಸದ್ದು ಮಾಡುತ್ತಿದೆ. ಸಹ ಸ್ಪರ್ಧಿಗಳಾದ ಕಿರಣ್ ಶಾಸ್ತ್ರಿ ಮತ್ತು ಗಗನ್ ಚಿನ್ನಪ್ಪ ಸೇರಿಕೊಂಡು ತಾಂಡವ್ ಅವರನ್ನು ಕಿಚಾಯಿಸುತ್ತಾ, ‘ಅಗ್ನಿಪರೀಕ್ಷೆ’ ಖ್ಯಾತಿಯ ಲಕ್ಷ್ಮಿ ಅವರ ಹೆಸರನ್ನು ತಳುಕು ಹಾಕಿದ್ದಾರೆ. ಸದ್ಯ ಈ ತಮಾಷೆಯ ಸಂಭಾಷಣೆಯ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಮನೆಯೊಳಗೆ ಹರಟೆ ಹೊಡೆಯುತ್ತಾ ಕುಳಿತಿದ್ದ ವೇಳೆ ಕಿರಣ್ ಶಾಸ್ತ್ರಿ, ತಾಂಡವ್ ಅವರಿಗೆ ಮದುವೆಯ ಸಲಹೆ ನೀಡಿದ್ದಾರೆ. “ಬಿಗ್ ಬಾಸ್‌ನಿಂದ ಹೊರಗೆ ಹೋದ ತಕ್ಷಣ ಇನ್ನೆರಡು ಮೂರು ತಿಂಗಳಲ್ಲಿ ಒಳ್ಳೆಯ ಹುಡುಗಿಯನ್ನು ನೋಡಿ ಮದುವೆಯಾಗಿಬಿಡಣ್ಣ” ಎಂದಿದ್ದಾರೆ. ಇದಕ್ಕೆ ತಾಂಡವ್ ನಗುತ್ತಲೇ ಒಪ್ಪಿಗೆ ಸೂಚಿಸಿದ್ದಾರೆ. ಮಾತು ಮುಂದುವರಿಸಿದ ಕಿರಣ್, “ಕಾವ್ಯಾ ಅಕ್ಕನಿಗೆ ಕೇಳ್ತೀಯಾ ಇಲ್ಲ ಲಕ್ಷ್ಮಿಗೆ ಕೇಳ್ತೀಯಾ? ಅವರು ಹೂ ಅಂದರೆ ವಾಲಗ ಊದಿಸಿಬಿಡು. ಲಕ್ಷ್ಮಿ ಆದರೆ ನೀನು ಎಲ್ಲಾದರೂ ಮಿಸ್ ಆಗುತ್ತೀಯಾ ಅಂತ ಅವಳ ಸೀರೆಗೆ ನಿನ್ನನ್ನು ಕಟ್ಟಿಕೊಂಡು ಹೋಗ್ತಾಳೆ” ಎಂದು ಕಾಲೆಳೆದಿದ್ದಾರೆ. ಇದಕ್ಕೆ ತಾಂಡವ್ “ಲಕ್ಷ್ಮಿ ರೆಬೆಲ್ ಅವಳು” ಎಂದು ನಕ್ಕಿದ್ದಾರೆ.

ಇದೇ ವೇಳೆ ಮಧ್ಯಪ್ರವೇಶಿಸಿದ ಗಗನ್ ಚಿನ್ನಪ್ಪ, “ಮದುವೆ ಆಗ್ತೀಯಾ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ. ಇದಕ್ಕೆ ಪಾಸಿಟಿವ್ ಆಗಿ ಉತ್ತರಿಸಿದ ತಾಂಡವ್, ಲಕ್ಷ್ಮಿ ಎಲಿಮಿನೇಟ್ ಆದ ಕ್ಷಣವನ್ನು ನೆನಪಿಸಿಕೊಂಡಿದ್ದಾರೆ. “ಕಾವ್ಯಾಗೆ ಅಪ್ಪಿಕೊಂಡು ದುಃಖದಲ್ಲಿ ಬೀಳ್ಕೊಟ್ಟೆ. ಆದರೆ ಲಕ್ಷ್ಮಿ ಮನೆಯಿಂದ ಹೋಗುವಾಗ ಸರಿಯಾಗಿ ಭೇಟಿಯಾಗಿ ಮಾತನಾಡಲು ಆಗಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ಕಿರಣ್ ಮತ್ತು ಗಗನ್ ಮತ್ತಷ್ಟು ರೇಗಿಸಿದ್ದು, “ಲಕ್ಷ್ಮಿ ಮೇಲೆ ಮನಸ್ಸಾಗಿದೆ ಅನ್ನಿಸುತ್ತೆ, ಹೊರಗೆ ಹೋದ ತಕ್ಷಣ ಅವರ ಮನೆಗೆ ಹೋಗಿ ಹಣ್ಣು-ಕಾಯಿ ಇಟ್ಟು ತಾಂಬೂಲ ಕೊಟ್ಟು ಮಾತುಕತೆ ಮುಗಿಸಿಬಿಡು” ಎಂದು ಸಲಹೆ ನೀಡಿ ನಗೆಗಡಲಲ್ಲಿ ತೇಲಿಸಿದ್ದಾರೆ.