SK Home Ad
Home ಸಿನಿ ಮಿಲ್ಸ್ ಗಗನ್‌ಗೆ ಪವರ್ ಗೇಮ್: ಕ್ಯಾಪ್ಟನ್ಸಿ ರೇಸ್‌ಗೆ ಬಿಗ್ ಟ್ವಿಸ್ಟ್; ಆರದ ಗಾಯಕ್ಕೆ ಬಲಿಯಾದ ಸ್ಪರ್ಧಿ ಇವರೇ!

ಗಗನ್‌ಗೆ ಪವರ್ ಗೇಮ್: ಕ್ಯಾಪ್ಟನ್ಸಿ ರೇಸ್‌ಗೆ ಬಿಗ್ ಟ್ವಿಸ್ಟ್; ಆರದ ಗಾಯಕ್ಕೆ ಬಲಿಯಾದ ಸ್ಪರ್ಧಿ ಇವರೇ!

0
38

BBK13: ಬಿಗ್ ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಮನೆಯೊಳಗಿನ ಆಟದ ರಂಗು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರತಿ ನಿರ್ಧಾರವೂ ಸ್ಪರ್ಧಿಗಳ ಭವಿಷ್ಯವನ್ನು ಬದಲಿಸುವಂತಿದ್ದು, ಸದ್ಯ ಈ ವಾರದ ಕ್ವೀನ್ ಆಗಿರುವ ಗಾನವಿ ಗೌಡ ಮತ್ತು ಕ್ವೀನ್ ಮೇಕರ್ ಗಗನ್ ಚಿನ್ನಪ್ಪ ಕೈಯಲ್ಲಿ ವಿಶೇಷ ಅಧಿಕಾರ ಸಿಕ್ಕಿದೆ. ಮುಂದಿನ ವಾರದ ಕ್ಯಾಪ್ಟನ್ಸಿ ಆಸೆಯಲ್ಲಿರುವ ಈ ಇಬ್ಬರಿಗೆ ಬಿಗ್ ಬಾಸ್ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಅವಕಾಶ ನೀಡಿದ್ದು, ಮನೆಯೊಳಗೆ ತಂತ್ರಗಾರಿಕೆಯ ಲೆಕ್ಕಾಚಾರಗಳು ಜೋರಾಗಿವೆ.

ಮುಂದಿನ ವಾರದ ಕ್ಯಾಪ್ಟನ್ಸಿ ಓಟದಿಂದ ಇತರ ಸದಸ್ಯರ ಪೈಕಿ ಒಬ್ಬರನ್ನು ಶಾಶ್ವತವಾಗಿ ಹೊರಗಿಡುವ ವಿಶೇಷ ಅಧಿಕಾರವನ್ನು ಬಿಗ್ ಬಾಸ್ ನೀಡಿದ್ದಾರೆ. ಮನೆಯ ಸದಸ್ಯರ ಅರ್ಹತೆಯನ್ನು ಮಾನದಂಡವಾಗಿಟ್ಟುಕೊಂಡು, ಕ್ಯಾಪ್ಟನ್ ಆಗಲು “ಅರ್ಹತೆಯಿಲ್ಲದ” ಒಬ್ಬರನ್ನು ಹೆಸರಿಸಬೇಕೆಂಬ ನಿಯಮವಿದೆ. ಆದ್ರೆ ಇದಕ್ಕೆ ಬಿಗ್ ಬಾಸ್ ನೀಡಿರುವ ಟ್ವಿಸ್ಟ್ ಎಂದರೆ ಗಾನವಿ ಗೌಡ ಮತ್ತು ಗಗನ್ ಚಿನ್ನಪ್ಪ ಇಬ್ಬರಲ್ಲಿ ಯಾರು ಮೊದಲು ಬಜರ್ ಒತ್ತುತ್ತಾರೋ, ಅವರಿಗೆ ಈ ನಿರ್ಧಾರ ಕೈಗೊಳ್ಳುವ ಅವಕಾಶ ಸಿಗಲಿದೆ. ಈ ಹೊಸ ನಿಯಮ ಮನೆಯ ಇತರ ಸ್ಪರ್ಧಿಗಳಲ್ಲಿ ತೀವ್ರ ಸಂಚಲನ ಮತ್ತು ಆತಂಕ ಮೂಡಿಸಿದೆ.

ಮತ್ತೊಂದೆಡೆ, ಕ್ಯಾಪ್ಟನ್ ಗಗನ್ ಚಿನ್ನಪ್ಪ ಸ್ಪರ್ಧಿ ಯಶಸ್ ವಿರುದ್ಧ ತಮ್ಮ ಹಳೆಯ ಅಸಮಾಧಾನವನ್ನು ಹೊರಹಾಕಿದ್ದಾರೆ. ಈ ಹಿಂದೆ ಯಶಸ್ ಜೊತೆ ಉಂಟಾಗಿದ್ದ ಮನಸ್ತಾಪ ಮತ್ತು ಟಾಸ್ಕ್‌ವೊಂದರ ಘಟನೆಯನ್ನು ಉಲ್ಲೇಖಿಸಿದ ಗಗನ್, ಯಶಸ್ ಅವರನ್ನು ಬರೋಬ್ಬರಿ ನಾಲ್ಕು ವಾರಗಳ ಕಾಲ ಅಂದರೆ ಬಿಗ್ ಬಾಸ್ ಮುಗಿಯುವವರೆಗೂ ನಾಮಿನೇಟ್ ಮಾಡಿದ್ದಾರೆ. “ಬೀಪ್ ಮುಗಿದಿರಬಹುದು, ಆದ್ರೆ ಆಡಿದ ಪದಗಳನ್ನು ನಾನು ಮರೆತಿಲ್ಲ” ಎನ್ನುವ ಮೂಲಕ ಗಗನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಒಟ್ಟಾರೆಯಾಗಿ… ಬಿಗ್ ಬಾಸ್ ನೀಡಿರುವ ಈ ಬ್ಯಾಕ್-ಟು-ಬ್ಯಾಕ್ ಟ್ವಿಸ್ಟ್‌ಗಳಿಂದ ಮನೆಯ ಸ್ಪರ್ಧಿಗಳು ಕಂಗಾಲಾಗಿದ್ದಾರೆ. ಕ್ಯಾಪ್ಟನ್ಸಿ ಓಟದ ಬಜರ್ ಯುದ್ಧ ಮತ್ತು ಯಶಸ್ ದೀರ್ಘಾವಧಿಯ ನಾಮಿನೇಷನ್ ಎಪಿಸೋಡ್‌ನಲ್ಲಿ ಯಾವ ರೀತಿಯ ತಿರುವುಗಳನ್ನು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದ್ದು, ಇಂದಿನ ಸಂಚಿಕೆ ವೀಕ್ಷಕರಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.