ಬೆಂಗಳೂರು: ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವಂಚನೆ ತಡೆಯಲು ಮತ್ತು ಡಿಜಿಟಲಿಕರಣಗೊಳಿಸಲು ಇನ್ಮುಂದೆ ಶಿಕ್ಷಣ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ವ್ಯವಸ್ಥೆ ಜಾರಿಗೊಳಿಸಲಿದೆ. 2026-27 ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಈ ಹೊಸ ವವ್ಯಸ್ಥೆ ಜಾರಿಯಾಗಲಿದ್ದು, ವಿದ್ಯಾರ್ಥಗಳು ಡಿಜಿ ಲಾಕರ ಮೂಲಕ ತಮ್ಮ ಅಂಕಪಟ್ಟಿ ಯನ್ನು ಪಡೆಯಬಹುದು.
ಇತ್ತಿಚಿನ ದಿನಗಳಲ್ಲಿ ನಕಲಿ ಅಂಕಪಟ್ಟಿ ಪಡೆಯುವುದು, ಅಂಕಗಳನ್ನು ತಿದ್ದುಪಡಿ ಮಾಡಿ ದಾಖಲೆಗಳನ್ನು ದುರ್ಬಳಿಕೆ ಮಾಡುವುದು ನಡೆಯುವ ಅಕ್ರಮಗಳು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಇದುವರೆಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಫಲಿತಾಂಶ ಪ್ರಕಟವಾದ ಬಳಿಕ ಕಾಗದ ರೂಪದಲ್ಲಿ ಅಂಕಪಟ್ಟಿ ನೀಡಲಾಗತಿತ್ತು ಆದರೆ ನೂತನ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕ ಡಿಜಿ ಲಾಕರ್ ಯಿಂದ ಅಂಕಪಟ್ಟಿ ಪಡೆಯಬಹುದು, ಡಿಜಿಲಾಕರದಿಂದ ಪಡೆಯುವ ಈ ಅಂಕಪಟ್ಟಿಗೆ ಅಧಿಕೃತ ಮಾನ್ಯತೆ ಇರಲಿದೆ. ಹೀಗಾಗಿ ಇನ್ಮುಂದೇ ವಿದ್ಯಾರ್ಥಿಗಳಾಗಲಿ ಅಥವಾ ಪೋಷಕರಾಗಲಿ ಅಂಕಪಟ್ಟಿ ಪಡಯಲು ಶಿಕ್ಷಣ ಇಲಾಖೆಯ ಕಚೇರಿಗಳಿಗೆ ಅಲೆದಾಡುವ ಅಗತ್ಯ ಇರುವುದಿಲ್ಲ.
ಡಿಜಿಲಾಕರ್ ಬಳಸುವುದು ಹೇಗೆ ?
ವಿದ್ಯಾರ್ಥಿಗಳು ತಮ್ಮ ಮೊಬೈಲ್ ನ ಪ್ಲೆಸ್ಟೋರ್ ನಲ್ಲಿ ಡಿಜಿಲಾಕರ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಅದಕ್ಕೆ ನಿಮ್ಮ ಆಧಾರ ಐಡಿ ಲಿಂಕ ಮಾಡುವ ವ್ಯವಸ್ಥೆ ಮಾಡಿರುತ್ತಾರೆ. ಅಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳು ಸುರಕ್ಷಿತವಾಗಿ ಸಂಗ್ರಹಿಸಲು ಸಾಧ್ಯವಾಗಲಿದೆ. ಉನ್ನತ ಶಿಕ್ಷಣ ಪ್ರವೇಶಾತಿ ಸೇರಿದಂತೆ ಅಗತ್ಯ ಸಂದರ್ಭಗಳಲ್ಲಿ ಡಿಜಿಟಲ್ ಅಂಕಪಟ್ಟಿಯನ್ನು ಅಧಿಕೃತ ದಾಖಲೆಯಾಗಿ ಬಳಸಬಹುದು. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ 2026-27 ಶೈಕ್ಷಣಿಕ ವರ್ಷದಿಂದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ವ್ಯವಸ್ಥೆ ಜಾರಿಗೆ ಬರಲಿದೆ, ಇದರಿಂದ ವಿದ್ಯಾರ್ಥಿಗಳಿಗೆ ಅನೂಕುಲ ಕಲ್ಪಿಸುವುದರ ಜೊತೆಗೆ ವಂಚನೆ ತಡೆಯುವಲ್ಲಿ ಮಹತ್ವದ ಬದಲಾವಣೆ ಬರಲಿದೆ.





















