SK Home Ad
Home ಸಿನಿ ಮಿಲ್ಸ್ ಕಿಚ್ಚನ ಚಪ್ಪಾಳೆ ಸಿಕ್ಕರೂ ಗಗನ್‌ಗೆ ಬಿಡದ ತಲೆನೋವು; ‘ಎತ್ತಿಸೋಣ’ ಪದದಿಂದ ತಾಂಡವ್‌ ಜೊತೆ ಬಿರುಕು!

ಕಿಚ್ಚನ ಚಪ್ಪಾಳೆ ಸಿಕ್ಕರೂ ಗಗನ್‌ಗೆ ಬಿಡದ ತಲೆನೋವು; ‘ಎತ್ತಿಸೋಣ’ ಪದದಿಂದ ತಾಂಡವ್‌ ಜೊತೆ ಬಿರುಕು!

0
22

BBK13: ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್ ಅವರು ಗಗನ್‌ ಚಿನ್ನಪ್ಪ ಅವರಿಗೆ ‘ಕಿಚ್ಚನ ಚಪ್ಪಾಳೆ’ ನೀಡಿ, ಆಟದ ತಂತ್ರಗಾರಿಕೆ ಮತ್ತು ಕ್ಯಾಪ್ಟನ್ ಪಟ್ಟಕ್ಕೆ ಶುಭ ಕೋರಿದ್ದಾರೆ. ಇದಕ್ಕೂ ಮುನ್ನ ಪ್ರಸಾರವಾದ ವಿಡಿಯೋದಲ್ಲಿ, ಯಶಸ್‌ ಕೃಷ್ಣ ಮತ್ತು ತಾಂಡವ್‌ ರಾಮ್‌ ಅವರನ್ನು ನಾಮಿನೇಟ್‌ ಮಾಡುವ ಕುರಿತು ಗಗನ್‌ ರೂಪಿಸಿದ್ದ ಪ್ಲ್ಯಾನ್ ತೋರಿಸಲಾಗಿದ್ದು, ಇದು ಗಗನ್‌ ಮತ್ತು ತಾಂಡವ್‌ ನಡುವೆ ಬಿರುಕು ಮೂಡಿಸಿದೆ.

ವಿಡಿಯೋದಲ್ಲಿ ಗಗನ್‌ ಆಟದ ತಂತ್ರಗಳನ್ನು ಉಲ್ಲೇಖಿಸಿ ಮಾತನಾಡಿದ ತಾಂಡವ್‌ ರಾಮ್‌, ಸೌಂದರ್ಯ, ಯಶಸ್‌ ಮತ್ತು ತಮ್ಮನ್ನು ನಾಮಿನೇಷನ್‌ನಿಂದ ಉಳಿಸಲು ಗಾನವಿ ಪಟ್ಟು ಹಿಡಿದಾಗ, ಇಬ್ಬರನ್ನು ‘ಎತ್ತಿಸೋಣ’ ಎಂದು ಗಗನ್‌ ಹೇಳಿದ ಮಾತು ತಮಗೆ ಇಷ್ಟವಾಯಿತು ಎಂದರು. ಆದರೆ, ಇದೇ ವಿಚಾರವಾಗಿ ಪ್ರಶಾಂತ್‌ ಬಳಿ ಮಾತನಾಡಿದ ಗಗನ್‌, ತಾಂಡವ್‌ ತಮ್ಮನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

“ತಾಂಡವ್‌ ಸೌಂದರ್ಯ ಟೀಮ್‌ನಲ್ಲಿರುವ ಕಾರಣ ನಾಮಿನೇಟ್‌ ಮಾಡಿಸುವ ಅನಿವಾರ್ಯತೆ ಇತ್ತು. ನಾನೇನಾದರೂ ನಾಮಿನೇಟ್‌ ಮಾಡಬೇಕೆಂದಿದ್ದರೆ ಗಾನವಿ ಬಳಿ ಏಕೆ ಕೇಳಬೇಕಿತ್ತು? ವಿಡಿಯೋದಲ್ಲಿ ಪೂರ್ತಿ ತೋರಿಸಿಲ್ಲ. ಶೆಟ್ಟಿ ಡಾನ್‌ ಸ್ಪರ್ಧೆಯಲ್ಲಿ ತಾಂಡವ್‌ನನ್ನು ಉಳಿಸಿ ನಾನು ನಾಮಿನೇಟ್‌ ಆದೆ. ಈ ವಿಚಾರವನ್ನು ತಾಂಡವ್‌ಗೆ ಅರ್ಥ ಮಾಡಿಸು” ಎಂದು ಗಗನ್‌ ಅವರು ಪ್ರಶಾಂತ್‌ ಮುಂದೆ ಅಳಲು ತೋಡಿಕೊಂಡರು.

ಮತ್ತೊಂದೆಡೆ, ಭಾನುವಾರದ ಎಪಿಸೋಡ್‌ಗೆ ಸಿದ್ಧವಾಗುತ್ತಿದ್ದ ತಾಂಡವ್‌ ಬಳಿ ಪ್ರಶಾಂತ್‌ ಈ ವಿಚಾರ ಪ್ರಸ್ತಾಪಿಸಿದರು. ಆಗ ತಾಂಡವ್‌, “ಗಗನ್‌ ನನ್ನ ಬಳಿ ಬಂದು ಏಕೆ ಮಾತನಾಡುತ್ತಿಲ್ಲ ಎಂದು ಕೇಳಿದರು. ಆದರೆ, ಈಗ ಮಾತನಾಡುವುದು ಬೇಡ, ರಾತ್ರಿ ಮಾತನಾಡೋಣ ಎಂದು ಹೇಳಿದ್ದೇನೆ” ಎಂದು ತಿಳಿಸಿದರು. ಸದ್ಯ ಗಗನ್‌ ಮತ್ತು ತಾಂಡವ್‌ ನಡುವಿನ ಮುನಿಸನ್ನು ಶಮನಗೊಳಿಸಿ ಸಂಧಾನ ಮಾಡಿಸುವ ಜವಾಬ್ದಾರಿಯನ್ನು ಪ್ರಶಾಂತ್‌ ವಹಿಸಿಕೊಂಡಿದ್ದಾರೆ.