SK Home Ad
Home ಸಿನಿ ಮಿಲ್ಸ್ ಬಿಗ್ ಬಾಸ್ 13: ‘ಬಾಡಿಗಾರ್ಡ್’ ಎಂದ ಮಂಜನಿಗೆ ಯಶಸ್ ಖಡಕ್ ಉತ್ತರ; ಗಂಡಸ್ತನದ ಮಾತಿಗೆ ತಿರುಗೇಟು!

ಬಿಗ್ ಬಾಸ್ 13: ‘ಬಾಡಿಗಾರ್ಡ್’ ಎಂದ ಮಂಜನಿಗೆ ಯಶಸ್ ಖಡಕ್ ಉತ್ತರ; ಗಂಡಸ್ತನದ ಮಾತಿಗೆ ತಿರುಗೇಟು!

0
13

BBK13: ‘ಬಿಗ್ ಬಾಸ್ ಕನ್ನಡ ಸೀಸನ್-13’ರ ವೀಕೆಂಡ್ ಸಂಚಿಕೆಯಲ್ಲಿ ಸ್ಪರ್ಧಿಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಸುದೀಪ್ ಅವರು ಪ್ರಸ್ತಾಪಿಸಿದ ಹೇಳಿಕೆಯೊಂದಕ್ಕೆ ಸಂಬಂಧಿಸಿದಂತೆ, ಯಶಸ್ ಅವರನ್ನು ಮಂಜ ‘ಬಾಡಿಗಾರ್ಡ್’ ಎಂದು ಲೇವಡಿ ಮಾಡಿದ್ದಾರೆ. ಇದಕ್ಕೆ ಯಶಸ್ ಕೂಡ ಅಷ್ಟೇ ಖಡಕ್ ಆಗಿ ತಿರುಗೇಟು ನೀಡಿರುವುದು ದೊಡ್ಮನೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಸುದೀಪ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಂಜ, ಯಶಸ್ ಸಾಧನೆ ಸೌಂದರ್ಯಗೆ ಬಾಡಿಗಾರ್ಡ್ ಆಗಿರುವುದು ಎಂದು ವ್ಯಂಗ್ಯವಾಡಿದರು. ಮೊದಲು ಆಸಿಯಾಗೆ ಬಾಡಿಗಾರ್ಡ್ ಆಗಿದ್ದ ಯಶಸ್, ಈಗ ಎರಡು ಶಿಫ್ಟ್ ಕೆಲಸ ಮಾಡುತ್ತಿದ್ದರು. ಆಸಿಯಾ ಕೆಲಸದಿಂದ ತೆಗೆದುಹಾಕಿದ ಬಳಿಕ ಈಗ ಸೌಂದರ್ಯಗೆ ಬಾಡಿಗಾರ್ಡ್ ಆಗಿದ್ದಾರೆ ಎಂದು ಮಂಜ ಕಾಲೆಳೆದರು.

ಮಂಜನ ಮಾತಿಗೆ ತಕ್ಷಣ ಪ್ರತಿಕ್ರಿಯಿಸಿದ ಯಶಸ್, ವೈಯಕ್ತಿಕ ದಾಳಿ ಮತ್ತು ಹಳೆಯ ಜಗಳದ ವಿಚಾರ ಎತ್ತಿ ಮಂಜನಿಗೆ ತಿರುಗೇಟು ನೀಡಿದರು. ಮಂಜ ಯಾವಾಗ ಯಾರ ಜೊತೆ ಇರುತ್ತಾರೆ ಎಂಬುದೇ ಅವರಿಗೆ ಸ್ಪಷ್ಟವಿಲ್ಲ. ಜಗಳ ಬಂದಾಗಲೆಲ್ಲ ವೈಯಕ್ತಿಕ ನಿಂದನೆ ಮಾಡುವುದು ಅವರ ಚಾಳಿ. ಯಾರು ಅಸುರಕ್ಷಿತ ಭಾವನೆ ಹೊಂದಿರುತ್ತಾರೆಯೋ, ಅವರಿಗೆ ಬೇರೆಯವರ ಗಂಡಸ್ತನದ ಬಗ್ಗೆ ಅನುಮಾನ ಬರುತ್ತದೆ ಎಂದು ಯಶಸ್ ಚಾಟಿ ಬೀಸಿದರು.

ಇತ್ತೀಚೆಗೆ ಅಡುಗೆಮನೆ ವಿಚಾರವಾಗಿ ಗಾನವಿ ಮತ್ತು ಜಗದೀಶ್ ನಡುವೆ ನಡೆದ ಜಗಳದ ವೇಳೆ ಮಂಜ, ಜಗದೀಶ್ ಅವರನ್ನು ಉದ್ದೇಶಿಸಿ ಗಂಡಸ್ತನದ ಮಾತುಗಳನ್ನಾಡಿದ್ದರು. ಇದರಿಂದ ಜಗದೀಶ್ ಕೆರಳಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಇದೇ ಘಟನೆಯನ್ನು ಮುಂದಿಟ್ಟುಕೊಂಡು ಯಶಸ್ ಈಗ ಮಂಜನಿಗೆ ತಕ್ಕ ಉತ್ತರ ನೀಡಿದ್ದಾರೆ.