SK Home Ad
Home ಸುದ್ದಿ ದೇಶ ಮೋದಿ ವಿರುದ್ಧದ ಫೋನ್ ಕದ್ದಾಲಿಕೆ ಆರೋಪ ಒಪ್ಪದ ಸ್ಯಾಮ್ ಪಿತ್ರೋಡಾ

ಮೋದಿ ವಿರುದ್ಧದ ಫೋನ್ ಕದ್ದಾಲಿಕೆ ಆರೋಪ ಒಪ್ಪದ ಸ್ಯಾಮ್ ಪಿತ್ರೋಡಾ

0
4

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿಸುತ್ತಿದ್ದಾರೆ ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಸ್ಯಾಮ್ ಪಿತ್ರೋಡಾ ಭಿನ್ನ ನಿಲುವು ವ್ಯಕ್ತಪಡಿಸಿದ್ದಾರೆ. ಮೋದಿ ಅವರು ಫೋನ್ ಟ್ಯಾಪಿಂಗ್‌ನಂತಹ ಕೆಲಸ ಮಾಡುತ್ತಾರೆ ಎಂಬುದನ್ನು ತಾವು ನಂಬುವುದಿಲ್ಲ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಆರೋಪದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಟಿವಿ ಸಂದರ್ಶನವೊಂದರಲ್ಲಿ ಮಾತನಾಡಿದ ಪಿತ್ರೋಡಾ, ಪ್ರಧಾನಿ ಮೋದಿ ಅವರ ಕಾರ್ಯವೈಖರಿಯನ್ನು ಉಲ್ಲೇಖಿಸಿ, ಫೋನ್ ಕದ್ದಾಲಿಕೆ ಆರೋಪವನ್ನು ತಳ್ಳಿಹಾಕಿದ್ದಾರೆ. “ಪ್ರಧಾನಿ ನರೇಂದ್ರ ಮೋದಿ ಫೋನ್ ಟ್ಯಾಪ್ ಮಾಡುತ್ತಾರೆ ಎಂದು ನಾನು ಭಾವಿಸುವುದಿಲ್ಲ. ಅವರು ಅಂತಹ ಕೆಲಸ ಮಾಡುವುದಿಲ್ಲ. ಸ್ಕ್ರೂಡ್ರೈವರ್ ಹಿಡಿದು ಕಂಪ್ಯೂಟರ್ ಮುಂದೆ ಕೂರುವ ವ್ಯಕ್ತಿಯೂ ಅವರಲ್ಲ” ಎಂದು ಹೇಳಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ಅವರಿಗೆ ಹಬ್ಬದ ಶುಭಾಶಯ ಕೋರುವ ಮೂಲಕ ಸುದ್ದಿಯಲ್ಲಿದ್ದ ಪಿತ್ರೋಡಾ, ಇದೀಗ ರಾಹುಲ್ ಗಾಂಧಿ ಅವರ ಗಂಭೀರ ಆರೋಪದ ನಡುವೆಯೇ ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಒಂದೇ ಪಕ್ಷದ ಇಬ್ಬರು ಪ್ರಮುಖ ನಾಯಕರ ಹೇಳಿಕೆಗಳಲ್ಲಿನ ಭಿನ್ನ ನಿಲುವು ಇದೀಗ ಚರ್ಚೆಗೆ ಗ್ರಾಸವಾಗಿದೆ.