ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮೆಟ್ರೋದಲ್ಲಿ ಪ್ರಯಾಣಿಸಿದ ಅನುಭವವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಂಚಿಕೊಂಡಿದ್ದಾರೆ. ನವೆಂಬರ್ 13ರಂದು ಪಿಂಕ್ ಲೈನ್ ಉದ್ಘಾಟನೆ ವೇಳೆ ನಡೆದ ಸ್ವಾರಸ್ಯಕರ ಘಟನೆಯನ್ನು ನೆನಪಿಸಿಕೊಂಡಿರುವ ಅವರು, ಪ್ರಧಾನಿ ಖರೀದಿಸಿದ್ದ ಮೆಟ್ರೋ ಸ್ಮಾರ್ಟ್ ಕಾರ್ಡ್ನ್ನು ಮಾಧ್ಯಮದವರಿಗೆ ಪ್ರದರ್ಶಿಸಿದ್ದಾರೆ.
‘ಮೆಟ್ರೋ ಟಿಕೆಟ್ ಖರೀದಿಸುವಾಗ ನನ್ನ ಬಳಿ ಹಣ ಇರಲಿಲ್ಲ. ಹೀಗಾಗಿ ನನ್ನ ಟಿಕೆಟ್ ಕೂಡ ನೀವೇ ತೆಗೆದುಕೊಳ್ಳಿ ಎಂದು ಪ್ರಧಾನಿಯವರಿಗೆ ಹೇಳಿದೆ’ ಎಂದು ಡಿಕೆಶಿ ನಗುತ್ತಲೇ ಹೇಳಿದ್ದಾರೆ.
ಪ್ರಯಾಣದ ವೇಳೆ ಮೋದಿ ತಮ್ಮನ್ನು ಆತ್ಮೀಯವಾಗಿ ನಡೆಸಿಕೊಂಡರು. ಆದರೆ ಇದನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.






















