ಹುಬ್ಬಳ್ಳಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ರಾಹುಲ್ ಗಾಂಧಿ ಸ್ವತಃ ಅಪರಾಧ ಮಾಡಿ ಇನ್ನೊಬ್ಬರ ಮೇಲೆ ಹೊರಿಸುವ ಹತಾಶ ರಾಜಕಾರಣಿ. ಅಮೆರಿಕ ಉದ್ಯಮಿ ಜಾರ್ಜ್ ಸೋರಸ್‌ನೊಂದಿಗೆ ರಾಹುಲ್ ಗಾಂಧಿ ಹೊಂದಿರುವ ನಂಟು ಎಲ್ಲರಿಗೂ ಗೊತ್ತಿರುವಂಥದ್ದು.
ಆ ವಿದೇಶಿ ಸೋರಸ್‌ನಿಂದ ಕೋಟ್ಯಂತರ ರೂಪಾಯಿ ಪಡೆದು ಭಾರತದ ಪ್ರಜಾಪ್ರಭುತ್ವ ದುರ್ಬಲಗೊಳಿಸುವ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್‌ಗೆ ಹರಿದು ಬರುತ್ತಿರುವ ವಿದೇಶಿ ಹಣದಿಂದ ದೇಶದ ಅಖಂಡತೆಗೆ ದಕ್ಕೆ ತರುವ ಕೆಲಸ ನಡೆಯುತ್ತಿದೆ” ಎಂದು ಆರೋಪಿಸಿದರು.
ವಿದೇಶ ಪ್ರವಾಸ, ಭಾರತ ವಿರೋಧಿ ಹೇಳಿಕೆ, ಪ್ರಜಾಪ್ರಭುತ್ವದ ಬಗ್ಗೆ ಟೀಕೆ ಮಾಡುವುದೇ ರಾಹುಲ್ ಚಾಳಿಯಾಗಿದೆ. ಹಣ ಕೊಟ್ಟವರನ್ನು ಸಮಾಧಾನಪಡಿಸಲು ಈ ಚಳವಳಿ ನಡೆಸುತ್ತಿದ್ದಾರೆ ಎಂದರು.
‘ಮೋದಿ ಸೂರ್ಯ, ರಾಹುಲ್ ಆರೋಪ ವ್ಯರ್ಥ’ : ಪ್ರಧಾನಿ ಮೋದಿ ದೇಶಕ್ಕಾಗಿ ತ್ಯಾಗ ಮಾಡಿದ ದೇಶಾಭಿಮಾನಿ. ಅವರನ್ನು ಅವಮಾನಿಸುವುದು ಇಡೀ ದೇಶಾಭಿಮಾನಿಗಳಿಗೆ ಅವಮಾನ ಮಾಡಿದಂತೆ. ಮೋದಿ ಸೂರ್ಯನಿದ್ದಂತೆ, ಅವರ ಮುಂದೆ ಇಂತಹ ವ್ಯರ್ಥ ಆರೋಪಗಳು ಬೆಳಕು ಕಳೆದುಕೊಳ್ಳುತ್ತವೆ. 2047ರ ವಿಕಸಿತ ಭಾರತದ ಸಂಕಲ್ಪಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದು ಬೊಮ್ಮಾಯಿ ಹೇಳಿದರು.
- ಕಾಂಗ್ರೆಸ್ ಮುಖಂಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎಂ.ಎಸ್. ಅನಂತ್ ನಿಧನ
- ರಾಹುಲ್ ಗಾಂಧಿ ವಿದೇಶಿ ಏಜೆಂಟ್: ಸೋರಸ್ ಹಣದಿಂದ ದೇಶದ ವಿರುದ್ಧ ಷಡ್ಯಂತ್ರ – ಮಾಜಿ ಸಿಎಂ, ಸಂಸದ ಬೊಮ್ಮಾಯಿ ವಾಗ್ದಾಳಿ
- ± ಸಂಖ್ಯೆಗಳ ಮಾಯಾವಿ: ‘ಮಾನವ ಕಂಪ್ಯೂಟರ್’ ಶಕುಂತಲಾ ದೇವಿಯ ಜನ್ಮದಿನ ವಿಶೇಷ
- ರಾಜಸ್ಥಾನದಲ್ಲಿ ರೈಲು ಹಳಿಯಲ್ಲಿ ನಿಗೂಢ ಸ್ಫೋಟ: ರೈಲು ಹಳಿಗೆ ಹಾನಿ
- ದೊಡ್ಡಚಲ್ಲೂರು ಬಳಿ ಚಿರತೆ ದಾಳಿಗೆ ರೈತ ಬಲಿ





















