ಕಲಬುರಗಿ: ಅಫಜಲಪೂರ ತಾಲೂಕಿನ ಚೌಡಾಪೂರ ರಾಷ್ಟ್ರಿಯ ಹೆದ್ದಾರಿಯಲ್ಲಿ ನಡೆಸುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಬೆಂಬಲ ನೀಡಿದ ಮಾಜಿ ಸಚಿವ ಮಾಲೀಕಯ್ಯ ವ್ಹಿ ಗುತ್ತೇದಾರ, ರಾಜ್ಯದಲ್ಲಿ ಒಂದೇ ರೀತಿಯ ಬೆಂಬಲ ಬೆಲೆ ಸಿಗಬೇಕಾದರೆ ರಾಜ್ಯದಲ್ಲಿ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಆಗ ಮಾತ್ರ ಬೆಂಬಲ ಬೆಲೆ ಸಿಗಲು ಸಾಧ್ಯ ಎಂದು ಹೇಳಿಕೆ ನೀಡಿದ್ದಾರೆ.
ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಪ್ರತಿ ಟನ್ಗೆ 5,500 ರೂ. ಏಕ ರೂಪದ ಬೆಲೆ ನಿಗದಿಪಡಿಸಬೇಕು. ಇಲ್ಲವಾದರೆ ಸಕ್ಕರೆ ಕಾರ್ಖಾನೆ ಕಾರ್ಯರಂಭಕ್ಕೂ ತೊಂದರೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು. ಇದು ಕೇವಲ ಕಬ್ಬಿನ ಹೋರಾಟ ಅಲ್ಲ, ರೈತರ ಬದುಕಿನ ಹೋರಾಟ, ರೈತರು ಒಗ್ಗಟ್ಟಿನಿಂದ ನಿಂತರೆ ಖಂಡಿತ ಸಮಸ್ಯೆ ಬಗೆಹರಿಯಲಿದೆ. ಕಬ್ಬಿನ ಕಾರ್ಖಾನೆಯವರು ಟನ್ಗೆ 4500 ರೂ. ಮತ್ತು ರಾಜ್ಯ ಸರಕಾರದವರು 1,000 ರೂ. ಪ್ರೋತ್ಸಾಹ ಧನ ಕೊಟ್ಟರೆ ಸಮಸ್ಯೆ ಬಗಿಹರಿಯುತ್ತದೆ ಎಂದು ಮಾಲೀಕಯ್ಯ ಗುತ್ತೇದಾರ ಹೇಳಿದರು.
ಉದ್ಯಮಿದಾರ ಮಹಾದೇವ ಗುತ್ತೇದಾರ, ರಾಘವೇಂದ್ರ ಮಠಪತಿ, ಮಹಾಂತೇಶ್ ಪಾಟೀಲ್, ಸಿದ್ದರಾಮ ದಣ್ಣೂರ, ಸಂತೋಷ ಮಾಳಗೊಂಡ, ಪ್ರಿಯಾಂಕ ಭಟ್ ಪೂಜಾರಿ, ದತ್ತು ಜಮಾದಾರ, ಸಾಯಬಣ್ಣ ಜಮಾದಾರ, ರಮೇಶ ಜಮಾದಾರ, ಮಾರುತಿ ಮೂರನೇತ್ತಿ, ಬಲವಂತ ಜಕಬಾ, ರಾಜು ಜಿಡಗಿ, ಮಲಕಣ್ಣ ಅವರಾದ, ಮಲ್ಲಪ್ಪ ಮಾದರ, ಮಾಳಪ್ಪ ಪೂಜಾರಿ, ಸಂತೋಷ ಸೆಂಡಗೆ, ಗುರಣ್ಣ ಲಿಂಗಶೆಟ್ಟಿ, ವಿಠ್ಠಲ್ ಗುತ್ತೇದಾರ, ಶ್ರೀಪಾದ ಸೆಂಡಗೆ, ಅವಧೂತ ಮೂರನೇತ್ತಿ , ಬಸವರಾಜ ಕಂಟೆಗೋಳ ಸೇರಿ ಅನೇಕರಿದ್ದರು.






















