SK Home Ad
Home ನಮ್ಮ ಜಿಲ್ಲೆ ಧಾರವಾಡ ಸಚಿವ ಸಂತೋಷ ಲಾಡ್ ಕಾರ್‌ಗೆ ಸಾರಥಿಯಾದ ಡಿಸಿ ಸ್ನೇಹಲ್

ಸಚಿವ ಸಂತೋಷ ಲಾಡ್ ಕಾರ್‌ಗೆ ಸಾರಥಿಯಾದ ಡಿಸಿ ಸ್ನೇಹಲ್

0
106

ಧಾರವಾಡ: ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ನಡೆದ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಮುಗಿದ ನಂತರ ಸಚಿವ ಸಂತೋಷ ಲಾಡ್ ಅವರ ಕಾರನ್ನು ಚಲಾಯಿಸುವ ಮೂಲಕ ಜಿಲ್ಲಾಧಿಕಾರಿ ಸ್ನೇಹಲ್ ಗಮನ ಸೆಳೆದರು.

ಕಾರ್ಯಕ್ರಮದ ನಂತರ ಅಧಿಕಾರಿಗಳು ಹಾಗೂ ಸಚಿವರು ನಗರ ಪರಿಶೀಲನೆಗೆ ತೆರಳಲು ಮುಂದಾದರು. ಆಗ ಸಚಿವ ಸಂತೋಷ ಲಾಡ್, ಅಧಿಕಾರಿಗಳೆಲ್ಲರೂ ತಮ್ಮ ಕಾರಿನಲ್ಲಿಯೇ ಬರುವಂತೆ ಹೇಳಿದರು. ಅಧಿಕಾರಿಗಳು ಕಾರಿನ ಹಿಂದಿನ ಆಸನಗಳಲ್ಲಿ ಕೂತರೆ, ಸ್ನೇಹಲ್ ಅವರು ಚಾಲಕರ ಸೀಟಿನಲ್ಲಿ ಕುಳಿತುಕೊಂಡು ಸೀಟ್ ಬೆಲ್ಟ್ ಕಟ್ಟಿಕೊಂಡರು. ಇದನ್ನು ಕಂಡು ಸಚಿವ ಲಾಡ್‌ಗೂ ಅಚ್ಚರಿಯಾಯಿತು!

ಆದರೂ ನಸುನಕ್ಕು ಓಕೆ ಎಂದರು. ಸಚಿವ ಸಂತೋಷ ಲಾಡ್ ಚಾಲಕರ ಪಕ್ಕದ ಸೀಟಿನಲ್ಲಿ ಕುಳಿತುಕೊಂಡರು. ಜಿಲ್ಲಾಧಿಕಾರಿ ಯಾವುದೇ ಹಿಂಜರಿಕೆ ಇಲ್ಲದೇ ಸೀಟ್ ಬೆಲ್ಟ್ ಕಟ್ಟಿಕೊಂಡು ಕಾರನ್ನು ಓಡಿಸಿದರು. ಕಾರಿನಲ್ಲಿ ಪೊಲೀಸ್ ಕಮೀಶನರ್ ಭೂಷಣ ಜಿ ಬೋರಸೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿಲ್ಲಾ ಪಂಚಾಯತ ಸಿಇಒ ಭುವನೇಶ ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಸಿ.ಡಿ, ಸಹಾಯಕ ಆಯುಕ್ತರಾದ ಪ್ರಭಾವತಿ ಕೂಡ ತೆರಳಿದರು.