SK Home Ad
Home ಸಿನಿ ಮಿಲ್ಸ್ ಮಗನ ಸಿನಿಮಾ ಹಿಟ್‌… ಕಣ್ಣೀರಾದ ಅಪ್ಪ-ಅಮ್ಮ! ‘ಪ್ರೇಮದ ಊರಲಿ’ ಗೆಲುವಿನ ಸಂಭ್ರಮ

ಮಗನ ಸಿನಿಮಾ ಹಿಟ್‌… ಕಣ್ಣೀರಾದ ಅಪ್ಪ-ಅಮ್ಮ! ‘ಪ್ರೇಮದ ಊರಲಿ’ ಗೆಲುವಿನ ಸಂಭ್ರಮ

0
46

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಅದ್ಧೂರಿ ಯಶಸ್ಸು ಸಿಕ್ಕಿದ್ದು, ʻಪ್ರೇಮದ ಊರಲಿʼ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಹೊಸ ಚರಿತ್ರೆ ಸೃಷ್ಟಿಸಿದೆ. ಜಗತ್ತಿನಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾ, ಬರೋಬ್ಬರಿ 111 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಮಾಡುವ ಮೂಲಕ 100ಕೋಟಿಯ ಮೈಲಿಗಲ್ಲನ್ನು ಅತ್ಯಂತ ಸುಲಭವಾಗಿ ದಾಟಿದೆ.

ಸಿನಿಮಾ ಈ ಮಟ್ಟದ ಯಶಸ್ಸು ಕಾಣುತ್ತಿದ್ದಂತೆ, ಚಿತ್ರದ ಸೂತ್ರಧಾರ, ನಿರ್ದೇಶಕ ಮನೋಜ್ ಕುಮಾರ್ ತಮ್ಮ ಹುಟ್ಟೂರಾದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಅಂದಲೆ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ನೆಚ್ಚಿನ ನಿರ್ದೇಶಕ ಗ್ರಾಮಕ್ಕೆ ಕಾಲಿಡುತ್ತಿದ್ದಂತೆ ಊರಿನ ಜನತೆ ಅದ್ಧೂರಿ ಸ್ವಾಗತ ಕೋರಿ, ಜೈಕಾರ ಕೂಗಿ ತಮ್ಮ ಪ್ರೀತಿ ಹಾಗೂ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಮಗನ ಈ ಐತಿಹಾಸಿಕ ಸಾಧನೆ ಮತ್ತು ಅಭೂತಪೂರ್ವ ಯಶಸ್ಸನ್ನು ಕಣ್ಣಾರೆ ಕಂಡ ಮನೋಜ್ ಕುಮಾರ್ ಅವರ ತಂದೆ-ತಾಯಿ ಅತ್ಯಂತ ಭಾವುಕರಾಗಿದ್ದಾರೆ. ಇಡೀ ಗ್ರಾಮವೇ ಹಬ್ಬದ ವಾತಾವರಣದಲ್ಲಿ ಮುಳುಗೇಳುವಂತೆ ಮಾಡಿದ ಈ ವಿಶೇಷ ಕ್ಷಣಕ್ಕೆ ಇಡೀ ʻಪ್ರೇಮದ ಊರಲಿʼ ಚಿತ್ರತಂಡ ಸಾಕ್ಷಿಯಾಗಿದೆ.

ನಿರ್ದೇಶಕ ಮನೋಜ್‌ ಅವರೊಂದಿಗೆ ಅಂದಲೆ ಗ್ರಾಮಕ್ಕೆ ಆಗಮಿಸಿದ್ದ ಚಿತ್ರತಂಡ, ಗ್ರಾಮಸ್ಥರೊಂದಿಗೆ ಬೆರೆತು ತಮ್ಮ ಸಿನಿಮಾದ ಗೆಲುವಿನ ಸಂಭ್ರಮವನ್ನು ಹಂಚಿಕೊಂಡಿದೆ.

ಒಟ್ಟಿನಲ್ಲಿ, ಭೂಮಿ ಮೇಲೆ ಮಳೆ ನಿಂತರೂ ʻಪ್ರೇಮದ ಊರಲಿʼ ಸಿನಿಮಾದ ಪ್ರೀತಿಯ ಮಳೆ ಹಾಗೂ ಗಲ್ಲಾಪೆಟ್ಟಿಗೆಯ ಅಬ್ಬರ ಮಾತ್ರ ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ.