SK Home Ad
Home ಸಿನಿ ಮಿಲ್ಸ್ ‘ಇಂಡಿಯಾಸ್ ಗಾಟ್ ಲೇಟೆಂಟ್’ ನಟ ನಮನ್ ಅರೋರಾ ಸ್ಯಾಂಡಲ್‌ವುಡ್‌ಗೆ: ‘ಹುಬ್ಬಳ್ಳಿ ಹಂಟರ್ಸ್’ ಮೂಲಕ ಎಂಟ್ರಿ

‘ಇಂಡಿಯಾಸ್ ಗಾಟ್ ಲೇಟೆಂಟ್’ ನಟ ನಮನ್ ಅರೋರಾ ಸ್ಯಾಂಡಲ್‌ವುಡ್‌ಗೆ: ‘ಹುಬ್ಬಳ್ಳಿ ಹಂಟರ್ಸ್’ ಮೂಲಕ ಎಂಟ್ರಿ

0
20

ಬೆಂಗಳೂರು: ದೇಶಾದ್ಯಂತ ಡಿಜಿಟಲ್ ಮನರಂಜನಾ ಜಗತ್ತು ಹಾಗೂ ಬಾಲಿವುಡ್‌ನಲ್ಲಿ ತಮ್ಮ ಸಹಜ ಅಭಿನಯದಿಂದ ಗಮನ ಸೆಳೆದಿರುವ ನಟ ಹಾಗೂ ಸ್ಟ್ಯಾಂಡಪ್ ಕಾಮಿಡಿಯನ್ ನಮನ್ ಅರೋರಾ ಇದೀಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಶಿಷ್ಟ ಕಥಾಹಂದರ ಹೊಂದಿರುವ ‘ಹುಬ್ಬಳ್ಳಿ ಹಂಟರ್ಸ್’ ಚಿತ್ರದ ಮೂಲಕ ಅವರು ಚಂದನವನಕ್ಕೆ ಅಧಿಕೃತವಾಗಿ ಎಂಟ್ರಿ ನೀಡುತ್ತಿದ್ದು, ಸ್ಯಾಂಡಲ್‌ವುಡ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.

ಸಮಯ್ ರೈನಾ ನಿರೂಪಣೆಯ ಪ್ರಸಿದ್ಧ ‘ಇಂಡಿಯಾಸ್ ಗಾಟ್ ಲೇಟೆಂಟ್’ ಶೋ ಮೂಲಕ ನಮನ್ ಅರೋರಾ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು. ಈ ವೇದಿಕೆಯಲ್ಲಿ ಅವರ ಕಾಮಿಕ್ ಟೈಮಿಂಗ್ ಹಾಗೂ ಹಾಸ್ಯ ಶೈಲಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಈ ಶೋ ನೀಡಿದ ಬ್ರೇಕ್‌ನಿಂದಾಗಿ ಡಿಜಿಟಲ್ ಮಾಧ್ಯಮದಲ್ಲಿ ಅವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.

ಕೇವಲ ಹಾಸ್ಯಕ್ಕಷ್ಟೇ ಸೀಮಿತವಾಗದೆ ಹಿರಿತೆರೆ ಹಾಗೂ ಒಟಿಟಿ ಕ್ಷೇತ್ರದಲ್ಲೂ ನಮನ್ ಛಾಪು ಮೂಡಿಸಿದ್ದಾರೆ. 2022ರ ಬಾಲಿವುಡ್ ಹಿಟ್ ‘ಜುಗ್ ಜುಗ್ ಜೀಯೋ’, 2024ರ ‘ಮಿಸ್ಟರ್ & ಮಿಸೆಸ್ ಮಹಿ’ ಸಿನಿಮಾ ಮತ್ತು ಜನಪ್ರಿಯ ‘ಕಾಲ್ ಮಿ ಬೇ’ ವೆಬ್ ಸರಣಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿ ತಮ್ಮ ನಟನಾ ಸಾಮರ್ಥ್ಯ ನಿರೂಪಿಸಿದ್ದಾರೆ.

ಇದೀಗ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾ ಮೂಲಕ ಹೊಸ ಭಾಷೆ ಹಾಗೂ ವಾತಾವರಣದಲ್ಲಿ ಸ್ಯಾಂಡಲ್‌ವುಡ್ ಪ್ರೇಕ್ಷಕರ ಮುಂದೆ ಬರಲು ಅವರು ಸಿದ್ಧರಾಗಿದ್ದಾರೆ. ‘ಬೆಲ್ ಬಾಟಂ’ ಖ್ಯಾತಿಯ ಸಂತೋಷ್ ಕುಮಾರ್ ಕೆ.ಸಿ. ನಿರ್ಮಾಣದ ಈ ಚಿತ್ರಕ್ಕೆ ಸಮರ್ಥ್ ಬಿ. ಕಡಕೊಳ್ ನಿರ್ದೇಶನ ಮಾಡಿದ್ದು, ಪ್ರೇಕ್ಷಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.