ಚಿತ್ರದುರ್ಗ: ತಾಲೂಕಿನ ಬ್ಯಾಲಹಾಳ್ ಗ್ರಾಮದಲ್ಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿನಿಯರ ಹಿಂದೆ ಬಿದ್ದು ಕಿರುಕುಳ ನೀಡುತ್ತಿದ್ದ ಪ್ರಕರಣವನ್ನು ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬ್ಯಾಲಹಾಳ್ ಗ್ರಾಮದ ಪ್ರದೀಪ್ (32) ಹಲ್ಲೆಗೊಳಗಾದ ಯುವಕ. ಗಾಯಾಳು ಪ್ರದೀಪ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲಾ-ಕಾಲೇಜು ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದ ಯುವಕರ ಪುಂಡಾಟಿಕೆಯನ್ನು ಪ್ರದೀಪ್ ಪ್ರಶ್ನಿಸಿದ್ದರು ಎನ್ನಲಾಗಿದೆ. ಇದರಿಂದ ಕುಪಿತಗೊಂಡ ನವೀನ್, ಕುಮಾರ, ಸಂಜಯ್ ಸೇರಿದಂತೆ ಹಲವರು ಮಾರಕಾಸ್ತ್ರ ಹಿಡಿದು ಬಂದು ಪ್ರದೀಪ್ ಮೇಲೆ ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಮಾರಕಾಸ್ತ್ರ ಹಿಡಿದು ಬೆದರಿಕೆ ಹಾಕುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಕುರಿತು ಭರಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
- ಪೆನ್-ಪೇಪರ್ ಪರೀಕ್ಷೆಗೆ ಗುಡ್ಬೈ? ಬರಹಕ್ಕಲ್ಲ, ಬ್ರೈನ್ಗೆ ಕೆಲಸ: AI ಚಾಟ್ಬಾಟ್ ವಿನೂತನ ಅಸ್ತ್ರ!
- ನಾನಾ ಪಾಟೇಕರ್ ಪತ್ನಿಯಿಂದ ಪ್ರತ್ಯೇಕವಾಗಿ ಬದುಕಿದ್ದೇಕೆ? ದೂರವಿದ್ದರೂ ಮುರಿಯದ ದಾಂಪತ್ಯ
- ಚಿತ್ರದುರ್ಗ ತಾಲೂಕಿನ ಬ್ಯಾಲಹಾಳ್ ಗ್ರಾಮದಲ್ಲಿ ಪುಂಡರ ಹಾವಳಿ: ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ
- ವಿಡಿಯೊ, ಆಡಿಯೊ, ಚಿತ್ರ ಅಸಲಿ ಅಥವಾ ನಕಲಿ? ಪತ್ತೆಗೆ ಗೂಗಲ್ನಿಂದ ಹೊಸ ಅಸ್ತ್ರ
- ನಟನೆಯ ಜತೆಗೆ ಜೈ ಜವಾನ್, ಜೈ ಕಿಸಾನ್ ಎಂದ “ನಾನಾ” ಬದುಕಿನ ಹಲವು ಮಜಲುಗಳು






















