ರಾಯಚೂರು: ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವಸತಿ ಗೃಹದ ಹೆಸರಿನಲ್ಲಿ ಅನೇಕರಿಗೆ ವಂಚಿಸುತ್ತಿರುವುದು ಗಮನಕ್ಕೆ ಬಂದಿದೆ.ಶ್ರೀಮಠವು ಅಧಿಕೃತ ವೆಬ್‌ಸೈಟ್‌ನ ಮಾಹಿತಿಯನ್ನು ಜನರ ಅನುಕೂಲಕ್ಕಾಗಿ ಹಾಕಲಾಗಿದೆ. ಆದರೂ ಕೆಲ ಕಿಡಿಗೇಡಿಗಳ ಮಠದ
ಹೆಸರಿನಲ್ಲಿ ವಸತಿ ಗೃಹ ಕಾಯ್ದಿರಿಸುವ(ಬುಕ್) ಮಾಡಲು ನಕಲಿ ವೆಬ್‌ಸೈಟ್ ಮೂಲಕ ವಂಚನೆಯ ಮಾಡುತ್ತಿದ್ದಾರೆ ಎಂದು ಶ್ರೀಮಠವು ತಿಳಿಸಿದೆ.
ಶ್ರೀಮಠದ ಅಧಿಕೃತವಾಗಿ www.srsmatha.org ನಲ್ಲಿ ಮಾತ್ರ ವೆಬ್ ಸೈಟ್ ಇದ್ದು ಇದರಲ್ಲೇ ರೂಮ್ ಬುಕ್ಕಿಂಗ್ ಮಾಡಬೇಕು. ಇದರ ಹೊರತಾಗಿ ಯಾವುದೇ ವೆಬ್ ಸೈಟ್ ಇಲ್ಲ. ಭಕ್ತರು ದೇಣಿಗೆ(ಡೊನೆಶನ್)ನೀಡುವವರು,ರೂಮ್ ಬುಕ್ಕಿಂಗ್‌ಗಾಗಿ ಇದನ್ನೇ ಬಳಸಬೇಕು.
ಆನ್ ಲೈನ್ ವೆಬ್ ಸೈಟ್‌ನಲ್ಲಿ ರೂಮ್ ಸಿಕ್ಕಿಲ್ಲ ಎಂದು ಬೇರೆ ವೆಬ್ ಸೈಟ್ ಪರಿಶೀಲನೆ ಮಾಡಿ ವಂಚನೆಗೊಳಗಾಗಬಾರದು. ಅಧಿಕೃತ ವೆಬ್ ಸೈಟ್ ಹೊರತುಪಡಿಸಿ ಮೂರನೇ ವ್ಯಕ್ತಿಯ ಮಾತು ಆಲಿಸಬೇಡಿ ಎಂದು ಮಠದ ಮಾಧ್ಯಮ ವಕ್ತಾರ ಶ್ರೀನಿಧಿ ಕರ್ಣಂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಸೌಂದರ್ಯಕ್ಕೆ ಮನೆಯಲ್ಲೇ ಮಾಡಿ ‘ಬೀಟ್ರೂಟ್ ಬಾಡಿ ಸ್ಕ್ರಬ್’: ಒಣಚರ್ಮದ ಸಮಸ್ಯೆಗೆ ಸರಳ ಪರಿಹಾರ!
- ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ : ಸಚಿವ ಕೆ.ಜೆ. ಜಾರ್ಜ್
- ಡಿಜೆ ಆರ್ಚ್ ಬಿದ್ದು ವ್ಯಕ್ತಿಗೆ ಗಾಯ : ಡಿವೈಎಸ್ಪಿ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
- ಮಂತ್ರಾಲಯದ ಶ್ರೀಮಠದ ವಸತಿಗೃಹ ಹೆಸರಿನಲ್ಲಿ ಭಕ್ತರಿಗೆ ವಂಚನೆ
- SSLC ಪರೀಕ್ಷಾ ಶುಲ್ಕ ದಿಢೀರ್ ಏರಿಕೆ: ವಿದ್ಯಾರ್ಥಿಗಳಿಗೆ ದರ ಬಿಸಿ!






















