ದಾವಣಗೆರೆ: ಹಿಂದೂ ಮಹಾಗಣಪತಿ ಗಣೇಶಮೂರ್ತಿ ವಿಸರ್ಜನಾ ಬೃಹತ್ ಶೋಭಾಯಾತ್ರೆ ವೇಳೆ ಡಿಜೆಗೆ ಅಳವಡಿಸಿದ್ದ ಆರ್ಚ್ ಬಿದ್ದು ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಶನಿವಾರ ಸಂಜೆ ನಗರದ ಹಳೆಯ ಬಸ್ ನಿಲ್ದಾಣದ ಬಳಿ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಗುಂಡಗತ್ತಿ ಗ್ರಾಮದ ಸಿದ್ದಲಿಂಗಪ್ಪ (45) ಗಾಯಗೊಂಡವರು. ಮಹಾನಗರಪಾಲಿಕೆ ವ್ಯಾಪ್ತಿಯ ಯರಗುಂಟೆ ಗ್ರಾಮದಲ್ಲಿರುವ ಮಗಳ ಮನೆಗೆ ಬಂದಿದ್ದ ಅವರು, ಗಣೇಶಮೂರ್ತಿ ವಿಸರ್ಜನಾ ಮೆರವಣಿಗೆ ವೀಕ್ಷಿಸಲು ಆಗಮಿಸಿದ್ದರು.
ಶೋಭಾಯಾತ್ರೆ ಹಳೆಯ ಬಸ್ ನಿಲ್ದಾಣದ ಸಮೀಪ ಬಂದಾಗ, ಮೆರವಣಿಗೆಯಲ್ಲಿ ಬಳಸಲಾಗಿದ್ದ ಆರು ಡಿಜೆಗಳ ಪೈಕಿ ಮೊದಲ ಡಿಜೆಗೆ ಅಳವಡಿಸಿದ್ದ ಆರ್ಚ್ ಏಕಾಏಕಿ ಸಿದ್ದಲಿಂಗಪ್ಪ ಅವರ ಮೇಲೆ ಬಿದ್ದಿದೆ. ಇದರಿಂದ ಅವರು ಗಾಯಗೊಂಡರು. ತಕ್ಷಣ ಸ್ಥಳದಲ್ಲಿದ್ದ ಡಿವೈಎಸ್ಪಿ ಬಂಕಾಳೆ ನಾಗಪ್ಪ ಅವರು ಗಾಯಾಳುವನ್ನು ತಮ್ಮ ವಾಹನದಲ್ಲೇ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
- ಸೌಂದರ್ಯಕ್ಕೆ ಮನೆಯಲ್ಲೇ ಮಾಡಿ ‘ಬೀಟ್ರೂಟ್ ಬಾಡಿ ಸ್ಕ್ರಬ್’: ಒಣಚರ್ಮದ ಸಮಸ್ಯೆಗೆ ಸರಳ ಪರಿಹಾರ!
- ರಾಜ್ಯದಲ್ಲಿ ವಿದ್ಯುತ್ ಅಭಾವವಿಲ್ಲ : ಸಚಿವ ಕೆ.ಜೆ. ಜಾರ್ಜ್
- ಡಿಜೆ ಆರ್ಚ್ ಬಿದ್ದು ವ್ಯಕ್ತಿಗೆ ಗಾಯ : ಡಿವೈಎಸ್ಪಿ ವಾಹನದಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
- ಮಂತ್ರಾಲಯದ ಶ್ರೀಮಠದ ವಸತಿಗೃಹ ಹೆಸರಿನಲ್ಲಿ ಭಕ್ತರಿಗೆ ವಂಚನೆ
- SSLC ಪರೀಕ್ಷಾ ಶುಲ್ಕ ದಿಢೀರ್ ಏರಿಕೆ: ವಿದ್ಯಾರ್ಥಿಗಳಿಗೆ ದರ ಬಿಸಿ!






















