SK Home Ad
Home ನಮ್ಮ ಜಿಲ್ಲೆ ಕಲಬುರಗಿ ಕಲಬುರಗಿ : ಶ್ರೀಕಾಂತ ಶೆಟ್ಟಿ ಬಳಿಕ ಈಗ ಮುತಾಲಿಕ್‌ಗೆ ನಿರ್ಬಂಧ

ಕಲಬುರಗಿ : ಶ್ರೀಕಾಂತ ಶೆಟ್ಟಿ ಬಳಿಕ ಈಗ ಮುತಾಲಿಕ್‌ಗೆ ನಿರ್ಬಂಧ

0
58
ಕಲಬುರಗಿಯಲ್ಲಿ ಮುತಾಲಿಕ್‌ಗೆ ನೋ ಎಂಟ್ರಿ; ಕೋಮು ಸೌಹಾರ್ದ, ಕಾನೂನು ಸುವ್ಯವಸ್ಥೆ ಹಿನ್ನೆಲೆ ಕ್ರಮ

ಸಂ.ಕ. ಸಮಾಚಾರ ಕಲಬುರಗಿ : ಹಿಂದೂ ಜಾಗರಣ ವೇದಿಕೆಯ ಸದಸ್ಯ ಶ್ರೀಕಾಂತ ಶೆಟ್ಟಿ ಅವರನ್ನು ಕಲಬುರಗಿ ನಗರಕ್ಕೆ ನಿರ್ಬಂಧಿಸಿದ ಬೆನ್ನಲ್ಲೆ ಈಗ ಶ್ರೀರಾಮ ಸೇನಾ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಅವರನ್ನು ಗುರುವಾರ ರಾತ್ರಿ 8 ರಿಂದ ದಿ.6 ರ ಬೆಳಗ್ಗೆ 8 ಗಂಟೆವರೆಗೆ ಕಲಬುರಗಿ ಉಪವಿಭಾಗದ ತಾಲ್ಲೂಕುಗಳೊಳಗೆ ಪ್ರವೇಶಿಸದಂತೆ ತಾತ್ಕಾಲಿಕವಾಗಿ ನಿರ್ಬಂಧಿಸಿ ಕಲಬುರಗಿ ಸಹಾಯಕ ಆಯುಕ್ತೆ ರಿತಿಕಾ ವರ್ಮಾ ಆದೇಶಿಸಿದ್ದಾರೆ.

ಜೇವರ್ಗಿ ತಾಲ್ಲೂಕಿನ ನೇಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಜೇರಟಗಿ ಗ್ರಾಮದಲ್ಲಿ ಶುಕ್ರವಾರ ಹಿಂದೂ ಮಹಾಗಣಪತಿ ವಿಸರ್ಜನೆ ಮತ್ತು ಬೃಹತ್ ಶೋಭಾಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದರು. ನಂತರ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಭಾಷಣ ಮಾಡಲು ಚಿಂತಿಸಲಾಗಿತ್ತು. ಆದರೆ ಕೋಮು ಭಾವನೆಗೆ ಧಕ್ಕೆ ಹಾಗೂ ಪ್ರಚೋದನಕಾರಿ ಭಾಷಣ ಮಾಡುವ ಸಂಭವನೀಯತೆ ಹಿನ್ನೆಲೆಯಲ್ಲಿ ಕಲಬುರಗಿ ವಿಭಾಗದ ಕಲಬುರಗಿ, ಜೇವರ್ಗಿ, ಯಡ್ರಾಮಿ, ಅಫಜಲಪುರ ಮತ್ತು ಆಳಂದ ತಾಲ್ಲೂಕಿನಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ.

ಜೇವರ್ಗಿ ಮತ್ತು ಆಳಂದ ಪಟ್ಟಣದಲ್ಲಿ ದಿ.4 ರಂದು 21 ದಿನಗಳ ಗಣೇಶ ವಿಗ್ರಹ ವಿಸರ್ಜನೆ ನಡೆಯಲಿದೆ. ಜೇವರ್ಗಿ ಮತ್ತು ಆಳಂದ ಉಭಯ ತಾಲ್ಲೂಕುಗಳೆರಡು ಮತೀಯ ಸೂಕ್ಷö್ಮ ಸ್ಥಳಗಳಾಗಿದ್ದರಿಂದ ಕೋಮು ಸೌಹಾರ್ದತೆ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಹಿನ್ನೆಲೆಯಲ್ಲಿ ಮುಂಜಾಗ್ರತೆವಹಿಸಲಾಗಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.