ಭಾರತ ಮತ್ತು ವೆಸ್ಟ್ ಇಂಡೀಸ್ ತಂಡ ನಡುವೆ ನಡೆಯುತ್ತಿರುವ ಮೂರು ದಿನಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಐತಿಹಾಸಿಕ ದಾಖಲೆ ಬರೆದಿದೆ.
ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಏಕದಿನ ಇತಿಹಾಸದಲ್ಲೇ ಮೊದಲ ಬಾರಿಗೆ 400 ರನ್‌ಗಳ ಗಡಿಯನ್ನು ದಾಟಿ ಐತಿಹಾಸಿಕ ದಾಖಲೆ ಬರೆದಿದೆ
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ವೆಸ್ಟ್ ಇಂಡೀಸ್‌ಗೆ ಭಾರತ ಆರಂಭಿಕ ಆಘಾತ ನೀಡಿತಾದರೂ ಜಾನ್ ಕ್ಯಾಂಪ್ಬೆಲ್ ಮತ್ತು ಶೈ ಹೋಪ್ ಜೋಡಿ 110 ರನ್‌ಗಳ ಜತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಮೂರನೇ ವಿಕೆಟ್‌ಗೆ ಜತೆಯಾದ ಅಮೀರ್ ಜಂಗೂ ಮತ್ತು ಶಾಯ್ ಹೋಪ್ ಜೋಡಿ 182 ರನ್‌ಗಳ ಜತೆಯಾಟದೊಂದಿಗೆ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು. ಒಂದೇ ಇನ್ನಿಂಗ್ಸ್‌ನಲ್ಲಿ ಈ ಮೂವರು ಶತಕ ಸಿಡಿಸಿ ಮೊದಲ ಬಾರಿಗೆ ತಂಡದ ಮೊತ್ತವನ್ನು 400ರ ಗಡಿ ದಾಟಿಸುವ ಮೂಲಕ ಐತಿಹಾಸಿಕ ದಾಖಲೆಗೆ ಸಾಕ್ಷಿಯಾದರು.
ಈ ಹಿಂದೆ 2019ರಲ್ಲಿ ಗ್ರೆನಡಾದ ಸೇಂಟ್ ಜಾರ್ಜಸ್ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 389 ರನ್‌ಗಳನ್ನು ದಾಖಲಿಸಿದ್ದು, ವೆಸ್ಟ್ ಇಂಡೀಸ್ ತಂಡ ಇದುವರೆಗೆ ಏಕದಿನ ಪಂದ್ಯದಲ್ಲಿ ಪೇರಿಸಿದ್ದ ಬೃಹತ್ ಮೊತ್ತವಾಗಿತ್ತು.
ಈ ಪಂದ್ಯದಲ್ಲಿ ಇಂಗ್ಲೆಂಡ್ 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 418 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 48 ಓವರ್‌ಗಳಲ್ಲಿಯೇ 389 ರನ್‌ಗಳಿಸಿ ಸೋಲೊಪ್ಪಿಕೊಂಡಿತ್ತು.
ಇದಾದ ಬಳಿಕ 2025ರಲ್ಲಿ ಐರ್ಲೆಂಡ್ ತಂಡದ ವಿರುದ್ಧ ವೆಸ್ಟ್ ಇಂಡೀಸ್ ತಂಡ 385 ರನ್‌ಗಳಸಿದ್ದು ಎರಡನೇ ಅತಿ ದೊಡ್ಡ ಮೊತ್ತವಾದರೆ, 2019ರಲ್ಲಿ ಐರ್ಲೆಂಡ್ ವಿರುದ್ಧವೇ 381 ರನ್‌ಗಳನ್ನು ದಾಖಲಿಸಿತ್ತು. 2023 ರಲ್ಲಿ ನೆದರ್‌ಲ್ಯಾಂಡ್ಸ್ ತಂಡದ ವಿರುದ್ಧ 374 ರನ್ ದಾಖಲಿಸಿದ್ದು ವೆಸ್ಟ್ ಇಂಡೀಸ್‌ನ ನಾಲ್ಕನೇ ಗರಿಷ್ಠ ಮೊತ್ತವಾಗಿತ್ತು.
ವೆಸ್ಟ್ ಇಂಡೀಸ್ ತಂಡ ಏಕದಿನ ಪಂದ್ಯದಲ್ಲಿ ದಾಖಲಿಸಿದ ಗರಿಷ್ಠ ರನ್‌ಗಳ ವಿವರ
1 405/7 ಭಾರತ 2026
2 389 ಇಂಗ್ಲೆಂಡ್ 2019
3 385/7 ಐರ್ಲೆಂಡ್ 2025
4 381/3 ಐರ್ಲೆಂಡ್ 2019
5 374/6 ನೆದರ್‌ಲ್ಯಾಂಡ್ಸ್ 2023






















