SK Home Ad
Home ಸುದ್ದಿ Samyukta Karnataka News Live: ಅಮೆರಿಕದ ಸರ್ಕಾರಿ ದಾಖಲೆಗಳಲ್ಲಿ AIಗೆ ಹೊಸ ಹೆಸರು

Samyukta Karnataka News Live: ಅಮೆರಿಕದ ಸರ್ಕಾರಿ ದಾಖಲೆಗಳಲ್ಲಿ AIಗೆ ಹೊಸ ಹೆಸರು

0
243
AIಗೆ ಹೊಸ ಹೆಸರು : ಅಮೆರಿಕ ಸರ್ಕಾರದ ಅಧಿಕೃತ ಪದ ಬಳಕೆಯಲ್ಲಿ ಮಹತ್ವದ ಬದಲಾವಣೆ

‘ನೀವು ದೈತ್ಯ’ ಎಂದ ಟ್ರಂಪ್ – ಸುಂದರ್ ಪಿಚೈ ನಗುತ್ತಲೇ ಕೊಟ್ಟ ಪ್ರತಿಕ್ರಿಯೆ ಭಾರೀ ವೈರಲ್ : ಶ್ವೇತಭವನದ AI ಸಭೆಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಅವರನ್ನು ಡೊನಾಲ್ಡ್ ಟ್ರಂಪ್ ‘Monster’ ಎಂದು ಕರೆದರು. ಪಿಚೈ ನಗುತ್ತಲೇ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

UPSCಗೆ 100 ವರ್ಷ – ಅಕ್ಟೋಬರ್ 1ರಂದು ಶತಮಾನೋತ್ಸವ ಸಮಾರಂಭ : ಭಾರತದ ನಾಗರಿಕ ಸೇವಾ ನೇಮಕಾತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಕೇಂದ್ರ ಲೋಕಸೇವಾ ಆಯೋಗ (UPSC) ಅಕ್ಟೋಬರ್ 1, 2026ರಂದು ತನ್ನ ಶತಮಾನೋತ್ಸವವನ್ನು ಆಚರಿಸಲಿದೆ. 1926ರ ಅಕ್ಟೋಬರ್ 1ರಂದು ಭಾರತದ ಮೊದಲ ಲೋಕಸೇವಾ ಆಯೋಗ ಸ್ಥಾಪನೆಯಾದ ದಿನದಿಂದ ಆರಂಭವಾದ ಸಂಸ್ಥೆಯ ಪಯಣ ಇದೀಗ 100 ವರ್ಷಗಳನ್ನು ಪೂರೈಸುತ್ತಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮೊಮ್ಮಗಳ ಮೇಲೆ ದೌರ್ಜನ್ಯ ಯತ್ನ ಆರೋಪ, ಅಜ್ಜನ ವಿರುದ್ಧ FIR : ಸ್ವಂತ ಮೊಮ್ಮಗಳ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಡಿ 75 ವರ್ಷದ ಅಜ್ಜನ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಕಾಯ್ದೆಗಳಡಿ ಪ್ರಕರಣ ದಾಖಲಾಗಿರುವ ಆಘಾತಕಾರಿ ಘಟನೆ ಸುರಪುರ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹೈಜಾಕ್ ಭೀತಿ ಮೂಡಿಸಿದ್ದ ವಿಮಾನ : ದುಬೈಯಿಂದ ಟೆಲ್ ಅವಿವ್‌ಗೆ ತೆರಳುತ್ತಿದ್ದ ಫ್ಲೈದುಬೈ ಪ್ರಯಾಣಿಕ ವಿಮಾನದಲ್ಲಿ ಬುಧವಾರ ತುರ್ತು ಪರಿಸ್ಥಿತಿಯ ಸಂಕೇತಗಳು ರವಾನೆಯಾಗಿದ್ದು, ಕೆಲಕಾಲ ಅಪಹರಣದ ಆತಂಕ ಸೃಷ್ಟಿಸಿತು. ಆದರೆ ನಂತರದ ಬೆಳವಣಿಗೆಯಲ್ಲಿ ವಿಮಾನವನ್ನು ಅಪಹರಿಸಲಾಗಿಲ್ಲ ಎಂಬುದು ಸ್ಪಷ್ಟವಾಗಿದ್ದು, ಪೈಲಟ್‌ಗಳ ನಡುವಿನ ಘರ್ಷಣೆಯೇ ಘಟನೆಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಯಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅಮೆರಿಕದ 29,000 ಸರ್ಕಾರಿ ವೆಬ್‌ಸೈಟ್‌ಗಳಿಗೆ ಒಂದೇ ವಿಳಾಸ : ಅಮೆರಿಕದ ಫೆಡರಲ್ ಸರ್ಕಾರದ ವಿವಿಧ ವೆಬ್‌ಸೈಟ್‌ಗಳು ಮತ್ತು ಆನ್‌ಲೈನ್ ಸೇವೆಗಳನ್ನು ಒಂದೇ ಡಿಜಿಟಲ್ ವೇದಿಕೆಗೆ ತರುವ ಉದ್ದೇಶದ ಹೊಸ America.gov ವೆಬ್‌ಸೈಟ್ ಸೆಪ್ಟೆಂಬರ್ 29ರಂದು ಲೈವ್ ಆಗಿದೆ. ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆಯನ್ನು ಬಳಸಿಕೊಂಡು ನಾಗರಿಕರು ಸರ್ಕಾರಿ ಸೇವೆಗಳು ಹಾಗೂ ಮಾಹಿತಿಯನ್ನು ಸುಲಭವಾಗಿ ಹುಡುಕಲು ಈ ವೇದಿಕೆಯನ್ನು ರೂಪಿಸಲಾಗಿದೆ. ಅಮೆರಿಕದ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಏಜೆನ್ಸಿಗಳಿಗೆ ಸಂಬಂಧಿಸಿದ ಸುಮಾರು 29,000 ವೆಬ್‌ಸೈಟ್‌ಗಳಲ್ಲಿರುವ ಮಾಹಿತಿಯನ್ನು ಒಂದೇ ಪ್ರವೇಶದ್ವಾರದಿಂದ ಪಡೆಯುವ ವ್ಯವಸ್ಥೆಯನ್ನು America.gov ಒದಗಿಸುತ್ತದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಅರಬ್ಬಿ ಸಮುದ್ರದಲ್ಲಿ ಕೋಸ್ಟ್ ಗಾರ್ಡ್ ಭರ್ಜರಿ ಕಾರ್ಯಾಚರಣೆ : ಅರಬ್ಬಿ ಸಮುದ್ರದಲ್ಲಿ ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಕ್ಷದ್ವೀಪದ ಪಶ್ಚಿಮ ಭಾಗದಲ್ಲಿ ಸೆಪ್ಟೆಂಬರ್ 25ರಂದು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 526 ಕೆಜಿ ಹೆರಾಯಿನ್ ಮತ್ತು ಮೆಥಾಂಫೆಟಮೈನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ₹3,000 ಕೋಟಿಗೂ ಅಧಿಕ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಪ್ತಚರ ಮಾಹಿತಿ ಆಧರಿಸಿ ಭಾರತೀಯ ಕರಾವಳಿ ಕಾವಲು ಪಡೆ ಸಮುದ್ರ ಮತ್ತು ವಾಯು ಮಾರ್ಗದಲ್ಲಿ ಕಣ್ಗಾವಲು ನಡೆಸಿ ಅನುಮಾನಾಸ್ಪದ ಹಡಗನ್ನು ಪತ್ತೆಹಚ್ಚಿತ್ತು. ಬಳಿಕ ಹಡಗನ್ನು ಹಿಂಬಾಲಿಸಿ ತಡೆದು ಪರಿಶೀಲನೆ ನಡೆಸಿದಾಗ ಭಾರೀ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ ಎಂದು ಕರಾವಳಿ ಕಾವಲು ಪಡೆ ತಿಳಿಸಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

‘AI’ಗೆ ಅಮೆರಿಕದ ಸರ್ಕಾರಿ ದಾಖಲೆಗಳಲ್ಲಿ ಕೃತಕ ಬುದ್ಧಿಮತ್ತೆಗೆ ಹೊಸ ಹೆಸರು : ಕೃತಕ ಬುದ್ಧಿಮತ್ತೆ (Artificial Intelligence) ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ‘Artificial Intelligence’ ಮತ್ತು ‘AI’ ಎಂಬ ಪದಗಳ ಬದಲಿಗೆ ‘Super Intelligence’ ಮತ್ತು ‘SI’ ಎಂಬ ಪದಗಳನ್ನು ಫೆಡರಲ್ ಸರ್ಕಾರದ ಅಧಿಕೃತ ಬಳಕೆಯಲ್ಲಿ ಬಳಸುವಂತೆ ಟ್ರಂಪ್ ಆದೇಶಿಸಿದ್ದಾರೆ. ಈ ನಿರ್ಧಾರವನ್ನು ತಂತ್ರಜ್ಞಾನದ ವೇಗದ ಬೆಳವಣಿಗೆ ಮತ್ತು ಅದರ ಪರಿವರ್ತನಕಾರಿ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಪದಬಳಕೆಯ ಬದಲಾವಣೆ ಎಂದು ಆಡಳಿತ ವಿವರಿಸಿದೆ. ಟ್ರಂಪ್ ಆಡಳಿತದ ಪ್ರಕಾರ, ಸರ್ಕಾರ ಬಳಸುವ ಪರಿಭಾಷೆಯು ಈ ತಂತ್ರಜ್ಞಾನಗಳ ಸಾಮರ್ಥ್ಯ ಮತ್ತು ಅಮೆರಿಕದ ಜನರಿಗೆ ಅವು ಸೃಷ್ಟಿಸಬಹುದಾದ ಅವಕಾಶಗಳನ್ನು ಪ್ರತಿಬಿಂಬಿಸಬೇಕು. ಇದೇ ಕಾರಣಕ್ಕೆ ‘Super Intelligence’ ಎಂಬ ಪದವು ಪ್ರಸ್ತುತ AI ತಂತ್ರಜ್ಞಾನಗಳ ಭರವಸೆ, ಸಾಮರ್ಥ್ಯ ಹಾಗೂ ವೇಗವಾಗಿ ಅಭಿವೃದ್ಧಿಯಾಗುತ್ತಿರುವ ಸ್ವರೂಪವನ್ನು ಹೆಚ್ಚು ಸೂಕ್ತವಾಗಿ ವಿವರಿಸುತ್ತದೆ ಎಂಬ ನಿಲುವನ್ನು ಆಡಳಿತ ಮುಂದಿಟ್ಟಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.

(ಮಾಹಿತಿ ಅಪ್​ಡೇಟ್ ಆಗಲಿದೆ)