ಥಿಯೇಟರ್‌ನಲ್ಲಿ 50 ದಿನ ಪೂರೈಸಿದ ‘ಅಯೋಗ್ಯ 2’ : ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅಭಿನಯದ ‘ಅಯೋಗ್ಯ 2’ ಚಿತ್ರವು ಚಿತ್ರಮಂದಿರಗಳಲ್ಲಿ 50 ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿದ್ದು, ಈ ಸಂಭ್ರಮವನ್ನು ಚಿತ್ರತಂಡ ಪ್ರೇಕ್ಷಕರು ಹಾಗೂ ಅಭಿಮಾನಿಗಳೊಂದಿಗೆ ಹಂಚಿಕೊಂಡಿದೆ. ಭರ್ಜರಿ ಓಪನಿಂಗ್ ಪಡೆದುಕೊಂಡು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ದ ‘ಅಯೋಗ್ಯ 2’, ಬಿಡುಗಡೆಯ ಬಳಿಕ ಕರ್ನಾಟಕದ ಸುಮಾರು 25ಕ್ಕೂ ಅಧಿಕ ಚಿತ್ರಮಂದಿರಗಳು ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರದರ್ಶನ ಕಂಡಿದೆ. ಪ್ರಸ್ತುತ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಸೆಳೆಯುವುದು ಸವಾಲಾಗಿರುವ ಸಂದರ್ಭದಲ್ಲಿ, ಸಿನಿಮಾ 50 ದಿನಗಳ ಪ್ರದರ್ಶನ ಪೂರ್ಣಗೊಳಿಸಿರುವುದು ಚಿತ್ರತಂಡದ ಸಂಭ್ರಮಕ್ಕೆ ಕಾರಣವಾಗಿದೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಅಕ್ಟೋಬರ್‌ನಿಂದ WhatsApp Business API ಬಳಸುವವರಿಗೆ ಹೊಸ ಹೊರೆ ? : WhatsApp Business Platform/API ಬಳಸುವ ವ್ಯವಹಾರಗಳಿಗೆ ಅಕ್ಟೋಬರ್‌ನಿಂದ ಪ್ರತಿ ಮೆಸೇಜ್‌ಗೆ ಶುಲ್ಕ ವಿಧಿಸುವ ಕುರಿತು ಹೊಸ ದರ ವ್ಯವಸ್ಥೆ ಜಾರಿಗೆ ಬರಲಿದೆ ಎಂಬ ಮಾಹಿತಿ ಇದೀಗ ಗಮನ ಸೆಳೆದಿದೆ. ಈ ಬದಲಾವಣೆ ಭಾರತೀಯ ವ್ಯವಹಾರಗಳಿಗೂ ಅನ್ವಯಿಸುವ ಸಾಧ್ಯತೆ ಇದೆ, ಆದರೆ ₹0.14ರ ದರವು ಯಾವ ರೀತಿಯ ಮೆಸೇಜ್‌ಗೆ ಮತ್ತು ಯಾವ ವರ್ಗದ business messageಗೆ ಅನ್ವಯಿಸುತ್ತದೆ ಎಂಬುದನ್ನು ಪ್ರಸ್ತುತ Metaಯ ಅಧಿಕೃತ pricing category ಆಧರಿಸಿ ನೋಡಬೇಕಾಗಿದೆ. (ಮಾಹಿತಿ ಅಪ್ಡೇಟ್ ಆಗಲಿದೆ)
ರೈತರಿಗೆ ದೆಹಲಿಗೆ ಬನ್ನಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಕ್ತ ಆಹ್ವಾನ : ಕಬ್ಬಿನ ನ್ಯಾಯಯುತ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಇಂದು ಪ್ರತಿಭಟನೆಗೆ ಮುಂದಾಗಿರುವ ಕರ್ನಾಟಕದ ಕಬ್ಬು ಬೆಳೆಗಾರರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರು ದೆಹಲಿಗೆ ಬಂದು ಮುಕ್ತ ಚರ್ಚೆ ನಡೆಸುವಂತೆ ಆಹ್ವಾನ ನೀಡಿದ್ದಾರೆ. ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶ ಹಂಚಿಕೊಂಡಿರುವ ಸಚಿವರು, ರೈತರು ಬೀದಿಗಿಳಿದು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ, ನೇರವಾಗಿ ರಾಷ್ಟ್ರ ರಾಜಧಾನಿಗೆ ಬಂದರೆ ಅಧಿಕಾರಿಗಳ ಜೊತೆ ಕೂರಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಪೂರ್ಣ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.
- WhatsApp ಬಳಕೆಗೆ ಹಣ ಪಾವತಿಸಬೇಕೇ? ಹೊಸ ಶುಲ್ಕ ನೀತಿ ಯಾರಿಗೆ ಅನ್ವಯ? ಇಲ್ಲಿದೆ ಸಂಪೂರ್ಣ ವಿವರ!
- ‘ಅಯೋಗ್ಯ 2’ಗೆ 50ರ ಸಂಭ್ರಮ: ‘ಅಯೋಗ್ಯ-3’ ಕುರಿತು ಸತೀಶ್ ನೀನಾಸಂ ಸುಳಿವು
- Samyukta Karnataka News Live: ಅಕ್ಟೋಬರ್‌ನಿಂದ WhatsApp Business ಬಳಕೆದಾರರಿಗೆ ಹೊಸ ಶುಲ್ಕ?
- ಕಬ್ಬು ಬೆಳೆಗಾರರ ಪ್ರತಿಭಟನೆ ಹಿನ್ನೆಲೆ: ರೈತರಿಗೆ ದೆಹಲಿಗೆ ಬನ್ನಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮುಕ್ತ ಆಹ್ವಾನ
- ಬಂಗಾರಪ್ಪ ಬಿಜೆಪಿಗೆ ಬಂದ ಮೇಲೆಯೇ ಬಿಎಸ್ವೈ, ಈಶ್ವರಪ್ಪ ರಾಜಕೀಯವಾಗಿ ಬದುಕಿದ್ದು
(ಮಾಹಿತಿ ಅಪ್ಡೇಟ್ ಆಗಲಿದೆ)






















