SK Home Ad
Home ನಮ್ಮ ಜಿಲ್ಲೆ ಉಡುಪಿ ಶಾರ್ಜಾದಲ್ಲಿ ಕೊಲೆಗೀಡಾದ ಅಲ್ವಿನ್ ಕುಂದರ್ ಶವ ಇಂದು ತಾಯ್ನಾಡಿಗೆ

ಶಾರ್ಜಾದಲ್ಲಿ ಕೊಲೆಗೀಡಾದ ಅಲ್ವಿನ್ ಕುಂದರ್ ಶವ ಇಂದು ತಾಯ್ನಾಡಿಗೆ

0
39

ಉಡುಪಿ: ಶಾರ್ಜಾದಲ್ಲಿ ನಿಗೂಢವಾಗಿ ಕೊಲೆಗೀಡಾಗಿರುವ ಇಲ್ಲಿನ ಕುಂದಾಪುರದ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದ‌ರ್ (50) ಅವರ ಶವ ಶಾರ್ಜಾದಿಂದ ಸೆ.25 ರಂದು ವಿಮಾನದ ಮೂಲಕ ಹುಟ್ಟೂರಿಗೆ ಬರಲಿದೆ.

ಗುರುವಾರ ರಾತ್ರಿ 11 ಗಂಟೆಗೆ ಶಾರ್ಜಾದಿಂದ ಪ್ರಕಾಶ್‌ ಅವರ ಸಂಬಂಧಿಕರು ಹಾಗೂ ಕಂಪೆನಿಯವರು ವಿಮಾನದಲ್ಲಿ ಪಾರ್ಥಿವ ಶರೀರದೊಂದಿಗೆ ಹೊರಟಿದ್ದು, ಶುಕ್ರವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ.

ಕಳೆದ 14 ವರ್ಷಗಳಿಂದ ಶಾರ್ಜಾದಲ್ಲಿ ಸಿಮನ್ಸ್ ಕಂಪೆನಿಯ ಖಾಸಗಿ ವಿಮಾನ ಯಾನ ಸಂಸ್ಥೆಯ ಟರ್ಮಿನಲ್ – 2 ರಲ್ಲಿ ಹಿರಿಯ ಮ್ಯಾನೇಜ‌ರ್ ಆಗಿದ್ದ ಅಲ್ವಿನ್ ಪ್ರಕಾಶ್ ಕುಂದ‌ರ್ ಅವರ ಮೃತದೇಹ ಆ.12ರಂದು ಅಲ್ ಅಮಿನ್ ಎಂಬ ರಸ್ತೆಯ ಪಾರ್ಕಿಂಗ್ ಪ್ರದೇಶದಲ್ಲಿ ಅವರದೇ ಕಾರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ಜೊತೆಗಿದ್ದ ಪತ್ನಿ ಹಾಗೂ ಪುತ್ರ ನಾಪತ್ತೆಯಾಗಿರುವುದು ಹಲವು ಸಂದೇಹಗಳಿಗೆ ಎಡೆಮಾಡಿಕೊಟ್ಟಿದೆ.