ಹುಬ್ಬಳ್ಳಿ: ಗ್ರಾಮೀಣ ಭಾಗದಲ್ಲಿ ಖದೀಮರ ಹಾವಳಿ ಮತ್ತೆ ಶುರುವಾಗಿದೆ. ತಾಲೂಕಿನ ಸುಳ್ಳ ಮತ್ತು ಬ್ಯಾಹಟ್ಟಿ ಗ್ರಾಮಗಳಲ್ಲಿ ಒಂದೇ ರಾತ್ರಿ ಎರಡು ಕೆನರಾ ಬ್ಯಾಂಕ್ ಎಟಿಎಂಗಳನ್ನು ಲೂಟಿ ಮಾಡಲಾಗಿದೆ.
ಸುಳ್ಳ ಗ್ರಾಮದಲ್ಲಿನ ಎಟಿಎಂನಲ್ಲಿ 11 ಲಕ್ಷ, ಬ್ಯಾಹಟ್ಟಿ ಗ್ರಾಮದ ಎಟಿಎಂನಲ್ಲಿ 3 ಲಕ್ಣ ಸೇರಿ ಒಟ್ಟು 14 ಲಕ್ಣ ದೋಚಿದ್ದಾರೆ.
ಬೆಳಗಿನ ಜಾವ ಹೊಂಚು ಹಾಕಿದ್ದ ಕಳ್ಳರು, ಗ್ಯಾಸ್ ಕಟರ್ ಮೂಲಕ ಎಟಿಎಂ ಶಟರ್ ಕಟ್ ಮಾಡಿದ್ದಾರೆ. ಸಾಕ್ಷ್ಯ ನಾಶಕ್ಕೆ ಸಿಸಿಟಿವಿ ಕ್ಯಾಮೆರಾ ಒಡೆದು, ಬಳಿಕ ಮಷಿನ್‌ನ ಕ್ಯಾಶ್ ಬಾಕ್ಸ್ ಕತ್ತರಿಸಿ ಹಣದ ಸಮೇತ ಪರಾರಿಯಾಗಿದ್ದಾರೆ.
ಏಕಕಾಲಕ್ಕೆ ಅಕ್ಕಪಕ್ಕದ ಗ್ರಾಮಗಳಲ್ಲೇ ದರೋಡೆ ನಡೆದಿರುವುದು ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದೆ. ಸುದ್ದಿ ತಿಳಿದು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.
ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.






















