SK Home Ad
Home ನಮ್ಮ ಜಿಲ್ಲೆ ‘ಬಳೆ’ಗೆ ಮತ್ತೆ ಸಿಗಲಿದೆಯೇ ‘ಕಿಚ್ಚನ ಚಪ್ಪಾಳೆ’?: ‘ಬಿಗ್ ಬಾಸ್’ ಕಿರಣ್ ಶಾಸ್ತ್ರಿ ವಿರುದ್ಧ ನೆಟ್ಟಿಗರ ಆಕ್ರೋಶ!

‘ಬಳೆ’ಗೆ ಮತ್ತೆ ಸಿಗಲಿದೆಯೇ ‘ಕಿಚ್ಚನ ಚಪ್ಪಾಳೆ’?: ‘ಬಿಗ್ ಬಾಸ್’ ಕಿರಣ್ ಶಾಸ್ತ್ರಿ ವಿರುದ್ಧ ನೆಟ್ಟಿಗರ ಆಕ್ರೋಶ!

0
17

ದೇವಿಗೆ ಪೂಜೆ ಮಾಡುತ್ತಾರೆ ಕಿರಣ್‌ ಶಾಸ್ತ್ರಿ ಆದ್ರೆ ಅವರೇ ಮಹಿಳೆಯರನ್ನೇ ಕೇವಲವಾಗಿ ಕಾಣುವ ದ್ವಂದ್ವ ನೀತಿ ವಿರುದ್ಧ ‘ಬಿಗ್ ಬಾಸ್’ ವೀಕ್ಷಕರು ಕೆಂಡಾಮಂಡಲವಾಗಿದ್ದಾರೆ. ಕಿರಣ್ ಶಾಸ್ತ್ರಿ, ಗಗನ್ ಮತ್ತು ತಾಂಡವ್‌ಗೆ “ಬಳೆ ಹಾಕೊಂಡು ಕೂತ್ಕೊಳ್ಳಿ” ಎಂದು ನಿಂದಿಸಿರುವುದು ಈಗ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ.

ಇದೇ ರೀತಿಯಾಗಿ ಹಿಂದಿನ ಸೀಸನ್‌ನಲ್ಲಿ ವಿನಯ್ ಗೌಡ ಕೂಡ ಕಾರ್ತಿಕ್ ವಿರುದ್ಧ ಇದೇ ರೀತಿಯ ಪದ ಬಳಸಿ ಕಿಚ್ಚ ಸುದೀಪ್‌ರಿಂದ ಸಖತ್ ಕ್ಲಾಸ್ ತೆಗೆಸಿಕೊಂಡಿದ್ದರು. ಈಗ ಕಿರಣ್ ಶಾಸ್ತ್ರಿ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದ್ದಾರೆ. ಮಹಿಳೆಯರ ಸಂಕೇತವಾದ ‘ಬಳೆ’ಯನ್ನು ದೌರ್ಬಲ್ಯವೆಂಬಂತೆ ಹೀಯಾಳಿಸಿ ಮಾತನಾಡಿರುವುದು ಅತ್ಯಂತ ಶೋಚನೀಯ ಎಂದು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

‘ಅಗ್ನಿಪರೀಕ್ಷೆ’ ಮೂಲಕ ಬಂದ ಕಾಮನರ್ಸ್ ಸ್ಪರ್ಧಿಗಳಲ್ಲಿ ಯಾವುದೇ ಸಭ್ಯತೆ ಇಲ್ಲ, ಇವರನ್ನು ತಕ್ಷಣವೇ ಶೋನಿಂದ ಆಚೆ ಕಳುಹಿಸಿ ಎಂದು ವೀಕ್ಷಕರು ಆಗ್ರಹಿಸುತ್ತಿದ್ದಾರೆ. ಮುಂಬರುವ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಈ ವಿಚಾರವನ್ನು ಹೇಗೆ ಹ್ಯಾಂಡಲ್ ಮಾಡಲಿದ್ದಾರೆ ಎಂಬುದನ್ನು ನೋಡಬೇಕಿದೆ.