SK Home Ad
Home ಕ್ರೀಡೆ ಆರ್‌ಸಿಬಿ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಭುವನೇಶ್ವರ್ ಕುಮಾರ್ ಪುನರಾಗಮನ ಸುಳಿವು!

ಆರ್‌ಸಿಬಿ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾಗೆ ಭುವನೇಶ್ವರ್ ಕುಮಾರ್ ಪುನರಾಗಮನ ಸುಳಿವು!

0
9

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಸರಣಿ  ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯ ವೇಗಿ ಭುವನೇಶ್ವರ್ ಕುಮಾರ್, ಮತ್ತೆ ಭಾರತೀಯ ಕ್ರಿಕೆಟ್ ತಂಡಕ್ಕೆ ಮರಳುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

36 ವರ್ಷದ ಭುವಿ, ಆರ್‌ಸಿಬಿ ಪರ 2025ರ ಋತುವಿನಲ್ಲಿ 17 ವಿಕೆಟ್ ಹಾಗೂ 2026ರಲ್ಲಿ 17.89ರ ಅದ್ಭುತ ಸರಾಸರಿಯಲ್ಲಿ 28 ವಿಕೆಟ್ ಪಡೆದುಕೊಂಡು ಪರ್ಪಲ್ ಕ್ಯಾಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದರು. ಈ ದ್ವಿತೀಯ ಇನಿಂಗ್ಸ್ ಪ್ರದರ್ಶನವು ಅವರ ರಾಷ್ಟ್ರೀಯ ತಂಡದ ಪುನರಾಗಮನದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, “ನಾನೀಗ ಯಾರಿಗೂ ಏನನ್ನೂ ಸಾಬೀತುಪಡಿಸಲು ಆಡುತ್ತಿಲ್ಲ. ಆದರೆ ಭಾರತಕ್ಕೆ ಮತ್ತೆ ಆಡಲು ಸಿಕ್ಕರೆ ಖುಷಿ. ತಂಡದಿಂದ ಹೊರಬಿದ್ದ ಆರಂಭದಲ್ಲಿ ಮುಂದಿನ ಎರಡು ಸರಣಿಗಳಲ್ಲಿ ಅವಕಾಶ ಸಿಗಬಹುದು ಎಂದು ಆಯ್ಕೆಗಾರರು ಹೇಳಿದ್ದರು. ಆದರೆ ನಂತರ ಅವರ ಮಾತು ಮತ್ತು ನಡೆಯ ನಡುವಿನ ವ್ಯತ್ಯಾಸ ತಿಳಿಯಿತು. ಅದು ಸುಲಭದ ಸಮಯವಾಗಿರಲಿಲ್ಲ, ಆದರೆ ಕುಟುಂಬದ ಬೆಂಬಲದಿಂದ ವಾಸ್ತವವನ್ನು ಒಪ್ಪಿಕೊಂಡೆ” ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

2022ರ ನವೆಂಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯವಾಡಿದ್ದ ಭುವನೇಶ್ವರ್, ಇದುವರೆಗೆ ಭಾರತದ ಪರ 229 ಪಂದ್ಯಗಳಿಂದ 294 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಪ್ರಸ್ತುತ ಫಾರ್ಮ್ ಆಧಾರದಲ್ಲಿ ಅವರಿಗೆ ಮತ್ತೆ ಟೀಮ್ ಇಂಡಿಯಾ ಬಾಗಿಲು ತೆರೆಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.