SK Home Ad
Home ಸಿನಿ ಮಿಲ್ಸ್ ಸ್ತ್ರೀ ಶಕ್ತಿಯ ಸಂಕೇತಕ್ಕೆ ಅಪಮಾನ? ಬಿಗ್ ಬಾಸ್ ಅಂಗಳದಲ್ಲಿ ಬಿಸಿಯೇರಿದ ‘ಬಳೆ’ ಚರ್ಚೆ!

ಸ್ತ್ರೀ ಶಕ್ತಿಯ ಸಂಕೇತಕ್ಕೆ ಅಪಮಾನ? ಬಿಗ್ ಬಾಸ್ ಅಂಗಳದಲ್ಲಿ ಬಿಸಿಯೇರಿದ ‘ಬಳೆ’ ಚರ್ಚೆ!

0
11

BBK13: ಬಿಗ್ ಬಾಸ್13ರ ಮನೆಯಲ್ಲಿ ಜಗಳ ಮತ್ತು ವಾದ-ವಿವಾದಗಳು ಸಹಜ. ಆದ್ರೆ ಕೆಲವು ಸೂಕ್ಷ್ಮ ಹೇಳಿಕೆಗಳು ಬಿಗ್ ಬಾಸ್ ಇತಿಹಾಸದಲ್ಲೇ ದೊಡ್ಡ ಚರ್ಚೆಗೆ ಗ್ರಾಸವಾಗುತ್ತವೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ನಡೆದಿರುವ ಟಾಸ್ಕ್ ಒಂದರ ವೇಳೆ ಸ್ಪರ್ಧಿ ಕಿರಣ್ ಶಾಸ್ತ್ರಿ ‘ಬಳೆ ಹಾಕಿಕೊಂಡು ಕೂತ್ಕೊಳ್ಳಿ’ ಎಂದು ಹೇಳುವ ಮೂಲಕ ಮತ್ತೆ ಹಳೆಯ ‘ಬಳೆ’ ವಿವಾದವನ್ನು ಮುನ್ನೆಲೆಗೆ ತಂದಿದ್ದಾರೆ.

ಟಾಸ್ಕ್ ವೇಳೆ ಗಲಾಟೆ ತೀವ್ರಗೊಂಡಾಗ, ಸಹ-ಸ್ಪರ್ಧಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಕಿರಣ್ ಶಾಸ್ತ್ರಿ, “ಬಳೆ ಹಾಕಿಕೊಂಡು ಕೂತ್ಕೊಂಡು ಬಿಡಿ ಎಲ್ಲರೂ” ಎಂದು ಗಟ್ಟಿಯಾಗಿ ಕಿರುಚಿದ್ದಾರೆ. ಈ ಮಾತು ಕೇಳುತ್ತಿದ್ದಂತೆ ಮನೆಯ ಇತರ ಸದಸ್ಯರು ತಕ್ಷಣವೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಲಿಂಗ ತಾರತಮ್ಯವನ್ನು ಎತ್ತಿಹಿಡಿಯುವ ಹಾಗೂ ಹೆಣ್ಣುಮಕ್ಕಳನ್ನು ಕೀಳಾಗಿ ಕಾಣುವ ಇಂತಹ ಮಾತುಗಳಿಗೆ ಸ್ಪರ್ಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದು, “ಬಳೆ ಹಾಕಿಕೊಂಡರೆ ಏನು ತಪ್ಪು?” ಎಂದು ಸ್ಪರ್ಧಿ ಗಗನ್ ನೇರವಾಗಿ ಪ್ರಶ್ನಿಸಿದ್ದಾರೆ. ಇದರಿಂದಾಗಿ ಮನೆಯಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ಈ ಹಿಂದೆ ಬಿಗ್ ಬಾಸ್ ಸೀಸನ್ 10ರಲ್ಲಿ ವಿನಯ್ ಮತ್ತು ಸಂಗೀತಾ ಮಧ್ಯ ಬಳೆ ಮಾತಿನ ಚಕಮಕಿ ಜೋರಾಗಿತ್ತು, ಆಗ ವಿನಯ್ ಗೌಡ ಕೂಡ ಇದೇ ರೀತಿಯ ಹೇಳಿಕೆ ನೀಡಿದಕ್ಕೆ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಸಂದರ್ಭದಲ್ಲಿ ವಾರಾಂತ್ಯದ ಪಂಚಾಯಿತಿಯಲ್ಲಿ ನಿರೂಪಕ ಕಿಚ್ಚ ಸುದೀಪ್, “ಬಳೆ ಎಂಬುದು ಸ್ತ್ರೀ ಶಕ್ತಿಯ ಸಂಕೇತ, ಅದನ್ನು ಅಸಮರ್ಥತೆಗೆ ಅಥವಾ ಕೀಳಾಗಿ ಬಳಸಬೇಡಿ” ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿ ಕ್ಲಾಸ್ ತೆಗೆದುಕೊಂಡಿದ್ದರು.

ಈಗ ಕಿರಣ್ ಶಾಸ್ತ್ರಿಗೂ ಕೂಡ ಅದೇ ಹಳೆಯ ತಪ್ಪನ್ನು ಪುನರಾವರ್ತಿಸಿದ್ದಾರೆ. ಹೀಗಾಗಿ ಈ ವಾರದ ‘ವಾರದ ಕಥೆ ಕಿಚ್ಚನ ಜೊತೆ’ ಸಂಚಿಕೆಯಲ್ಲಿ ಸುದೀಪ್ ಕಿರಣ್ ಶಾಸ್ತ್ರಿಗೆ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ.