SK Home Ad
Home ನಮ್ಮ ಜಿಲ್ಲೆ ಧಾರವಾಡ ಮಂತ್ರಾಲಯ ಶ್ರೀಗಳಿಗೆ ಧಾರವಾಡ ಪೇಡೆಯ ತುಲಾಭಾರ

ಮಂತ್ರಾಲಯ ಶ್ರೀಗಳಿಗೆ ಧಾರವಾಡ ಪೇಡೆಯ ತುಲಾಭಾರ

0
55

ಹುಬ್ಬಳ್ಳಿ: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರಿಗೆ ಹುಬ್ಬಳ್ಳಿಯ ಭಕ್ತರು ಧಾರವಾಡದ ಪ್ರಸಿದ್ಧ ಪೇಡೆಯ ಮೂಲಕ ತುಲಾಭಾರ ಸೇವೆ ನೆರವೇರಿಸಿದರು.

ಮಂತ್ರಾಲಯದಲ್ಲಿ ನಡೆದ ಈ ವಿಶಿಷ್ಟ ತುಲಾಭಾರ ಸೇವೆಯಲ್ಲಿ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಪಾಲ್ಗೊಂಡು ಭಕ್ತರಿಗೆ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಭವಾನಿ ನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿ ಮಠದ ಗೌರವ ವಿಚಾರಣಾಕರ್ತ ಎ.ಸಿ.ಗೋಪಾಲ್, ಶ್ರೀಮಠದ ವ್ಯವಸ್ಥಾಪಕ ಜೋಯಿಸ್ ಹುಲಿರಾಜಾಚಾರ್ಯ, ಬಿಂದು ಮಾಧವ ಪುರೋಹಿತ, ಗುರುರಾಜ ಆಚಾರ್ಯ ಸಾಮಗ, ಜೆ. ವೇಣುಗೋಪಾಲ ಆಚಾರ್ಯ, ಹಯವದನ ಆಚಾರ್ಯ, ವಾಸುದೇವ ಕಟ್ಟಿ ಹಾಗೂ ರಾಘವೇಂದ್ರ ಗೊಗ್ಗಿ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.

ತುಲಾಭಾರದ ಬಳಿಕ ಶ್ರೀಗಳು ಭಕ್ತರನ್ನು ಆಶೀರ್ವದಿಸಿ, ಶ್ರೀ ರಾಘವೇಂದ್ರಸ್ವಾಮಿಗಳ ಅನುಗ್ರಹ ಸದಾ ಎಲ್ಲರ ಮೇಲಿರಲಿ ಎಂದು ಹಾರೈಸಿದರು.