ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಿದ್ದು, ಪ್ರಾಥಮಿಕ ಶಾಲಾ ವಿಭಾಗದಿಂದ 20 ಜನ ಮತ್ತು ಪ್ರೌಢ ಶಾಲಾ ವಿಭಾಗದಿಂದ ಓರ್ವ ವಿಶೇಷ ಶಿಕ್ಷಕರೂ ಸೇರಿದಂತೆ 11 ಜನ ಸೇರಿ ಒಟ್ಟು 31 ಶಿಕ್ಷಕರು ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಾಲಾ ವಿಭಾಗದಿಂದ
ಸಿ ಉಮಾ-ಬೆಂಗಳೂರು ಗ್ರಾಮಾಂತರ,
ಬಸಪ್ಪ ಪರಪ್ಪ ಪಾಟೀಲ-ಚಿಕ್ಕೋಡಿ,
ಅಶೋಕ-ಉಡುಪಿ,
ಸುರೇಶ್ ಕೆ.-ರಾಯಚೂರು,
ಹಣಮಂತ ಕಲ್ಲಪ್ಪ ಕಾತರಕಿ- ವಿಜಯಪುರ,
ಉಷಾ ವಿ. ನಾಯಕ- ಉತ್ತರ ಕನ್ನಡ,
ಮಸ್ತಾನ್ ವಲಿ-ಚಿಕ್ಕಬಳ್ಳಾಪುರ,
ಪ್ರಭಾವತಿ ಬಾಳಪ್ಪ ಹಾಲೆನ್ನವರ-ಬೆಳಗಾವಿ,
ಸರೋಜಮ್ಮ- ಚಾಮರಾಜನಗರ,
ನಿಂಗಪ್ಪಾ-ಕಲಬುರಗಿ,
ರತ್ನಮ್ಮ ಎನ್.ಎಂ. -ಬೆಂಗಳೂರು ಕೇಂದ್ರ ಶೈಕ್ಷಣಿಕ,
ನೇಮಣ್ಣ ಬಮ್ಮಣ್ಣ ಜಮಖಂಡಿ-ಬಾಗಲಕೋಟೆ,
ರಾಮಚಂದ್ರ ಈ. ನಾಯಕ- ಶಿರಸಿ,
ಮಾಲಿನಿ ಎಂ-ಮಧುಗಿರಿ,
ಕುಮಾರನಾಯ್ಕ ಬಿ.ಡಿ- ಶಿವಮೊಗ್ಗ,
ಕೃಷ್ಣಮೂರ್ತಿ ಕೆ.ಎಸ್-ಬೆಂಗಳೂರು ಉತ್ತರ,
ಮಲ್ಲಿಕಾರ್ಜನ ಬಡಿಗೇರ- ದಾವಣಗೆರೆ,
ಪ್ರೇಮಕುಮಾರ್ ವಿ.ಎಸ್- ತುಮಕೂರು,
ದುರಗಪ್ಪ ಹೆಚ್.- ಬಳ್ಳಾರಿ,
ಮೈಲಾರಪ್ಪ ಬೂದಿಹಾಳ-ಕೊಪ್ಪಳ.
ಪ್ರೌಢ ಶಾಲಾ ವಿಭಾಗದಿಂದ
ಬಿರಾದಾರ ಸಿದ್ದಪ್ಪ ವೀರಭದ್ರಪ್ಪ- ಶಿರಸಿ,
ಶೈನಾಕುಮಾರಿ ಎಂ.- ಬೆಂಗಳೂರು,
ಕುಬೇರನಾಯ್ಕ ಬಿ.-ಶಿವಮೊಗ್ಗ,
ನೀಲಕಂಠ ಗಾಂವಕರ್-ಬೆಂಗಳೂರು ಗ್ರಾಮಾಂತರ,
ವಿ. ವೆಂಕಟೇಶ- ಚಿಕ್ಕಬಳ್ಳಾಪುರ,
ಮಮತ ಆರ್. ನಾಯ್ಕ- ಉತ್ತರ ಕನ್ನಡ,
ರೋಶನ್ ಅಲೆಗ್ಸಾಂಡರ್-ದಕ್ಷಿಣ ಕನ್ನಡ,
ಜಯಶೀಲ-ಮೈಸೂರು,
ಮಥಾಯಿ ಟಿ.- ಚಿಕ್ಕಮಗಳೂರು
ಈ ಎಲ್ಲರೂ ಶಿಕ್ಷಕರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಹಿಳಾ ಶಿಕ್ಷಕರಿಗೆ ವಿಶೇಷ ಗೌರವವಾಗಿ, ಅಕ್ಷರ ಮಾತೆ ಸಾವಿತ್ರಿ ಬಾಯಿ ಪುಲೆ ಅವರ ಹೆಸರಿನಲ್ಲಿ ಸೆ. 5ರಂದು ನಡೆಯುವ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆಯಂದು ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪುರಸ್ಕೃತರಿಗೆ ತಲಾ 25 ಸಾವಿರ ರೂ. ನಗದು ಪುರಸ್ಕಾರವನ್ನು ನೀಡಲಾಗುತ್ತದೆ. ಒಟ್ಟು 7.75 ಲಕ್ಷ ನಗದು ಪುರಸ್ಕಾರವನ್ನು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಹಾಗೂ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿಯಿಂದ ಭರಿಸಲು ಆದೇಶಿಸಲಾಗಿದೆ.



















