ಬಾಗಲಕೋಟೆ: ಸಿಎಂ ಡಿ.ಕೆ. ಶಿವಕುಮಾರ ಅವರಿಗೆ ಬಾಗಲಕೋಟೆಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಆರ್‌ಎಸ್ಎಸ್ ಸ್ವಯಂಸೇವಕರು ಧರಿಸುವ ಕೇಸರಿ ಬಣ್ಣದ ರಾಖಿ ಕಟ್ಟಿದ್ದಾರೆ.
ಆರ್‌ಎಸ್ಎಸ್ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿರುವ ಹೊತ್ತಿನಲ್ಲಿ ಈ ಘಟನೆ ರಾಜಕೀಯ ವಲಯದಲ್ಲಿ ಗಮನಸೆಳೆದಿದೆ.
ಶುಕ್ರವಾರ ಬರ ವೀಕ್ಷಣೆಗಾಗಿ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದ ಸಿಎಂ ಡಿ.ಕೆ. ಶಿವಕುಮಾರ ಅವರು ನವನಗರದ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿದರು. ಸಭೆ ನಂತರ ಸಿಎಂ ಬಳಿ ತೆರಳಿದ ನಾರಾಯಣಸಾ ಭಾಂಡಗೆ ಸಹೋದರತ್ವದ ಭಾಗವಾಗಿ ರಾಖಿ ಕಟ್ಟುವುದಾಗಿ ಹೇಳಿ ಕೇಸರಿ ನೂಲು ಹೊಂದಿರುವ ರಕ್ಷೆ ಕಟ್ಟಿದರು.




















