SK Home Ad
Home ನಮ್ಮ ಜಿಲ್ಲೆ ಧಾರವಾಡ ಆ.20, 22 ರಂದು ಬೆಳಗಾವಿ – ಬೆಂಗಳೂರು ನಡುವೆ ವಿಶೇಷ ರೈಲು

ಆ.20, 22 ರಂದು ಬೆಳಗಾವಿ – ಬೆಂಗಳೂರು ನಡುವೆ ವಿಶೇಷ ರೈಲು

0
56

ಹುಬ್ಬಳ್ಳಿ : ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ಬೆಳಗಾವಿ ನಡುವೆ ವಿಶೇಷ ಎಕ್ಸ್’ಪ್ರೆಸ್ (ರೈಲು ಸಂಖ್ಯೆ 06551/06552) ರೈಲುಗಳನ್ನು ನೈಋತ್ಯ ರೈಲ್ವೆ ಓಡಿಸಲಿದೆ..

ಎಸ್ಎಂವಿಟಿ ಬೆಂಗಳೂರು – ಬೆಳಗಾವಿ ವಿಶೇಷ ರೈಲು ( ರೈಲು ಸಂಖ್ಯೆ – 06551) ಆಗಸ್ಟ್ 20 ಮತ್ತು 22ರಂದು ರಾತ್ರಿ 7 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಟು, ಮರುದಿನ 08:25 ಗಂಟೆಗೆ ಬೆಳಗಾವಿ ತಲುಪಲಿದೆ.

ಮರುಪ್ರಯಾಣದ ಮಾರ್ಗದಲ್ಲಿ: ಬೆಳಗಾವಿ – ಎಸ್ಎಂವಿಟಿ ಬೆಂಗಳೂರು ವಿಶೇಷ ರೈಲು ( ರೈಲು ಸಂಖ್ಯೆ- 06552) ಆಗಸ್ಟ್ 21 ಮತ್ತು 23ರಂದು ರಾತ್ರಿ 7.30 ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ 5 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.

ಮಾರ್ಗಮಧ್ಯೆ, ಈ ವಿಶೇಷ ರೈಲು ಎರಡೂ ಮಾರ್ಗಗಳಲ್ಲಿ ( ಹೋಗುವ ಮತ್ತು ಬರುವ ) ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ಬೀರೂರು, ದಾವಣಗೆರೆ, ಹರಿಹರ, ಎಸ್ಎಂಎಂ ಹಾವೇರಿ, ಎಸ್ಎಸ್ಎಸ್ ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೊಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.

ಈ ವಿಶೇಷ ರೈಲಿನಲ್ಲಿ ಒಟ್ಟು 19 ಬೋಗಿಗಳು ಇದ್ದು, ಇದರಲ್ಲಿ 10 ಸ್ಲೀಪರ್ ಕ್ಲಾಸ್, 07 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ 02 ದ್ವಿತೀಯ ದರ್ಜೆ ಕಮ್ ಲಗೇಜ್/ದಿವ್ಯಾಂಗ ಬೋಗಿಗಳು ಒಳಗೊಂಡಿವೆ ಎಂದು ನೈಋತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.