SK Home Ad
Home ಸುದ್ದಿ ಚಿನ್ನದ ಬೆಲೆ ಪಾತಾಳಕ್ಕೆ; 24 ಕ್ಯಾರೆಟ್ ದರ ಎಷ್ಟಾಗಿದೆ? ಬಂಗಾರ ಖರೀದಿದಾರರಿಗೆ ಸುವರ್ಣ ಅವಕಾಶ

ಚಿನ್ನದ ಬೆಲೆ ಪಾತಾಳಕ್ಕೆ; 24 ಕ್ಯಾರೆಟ್ ದರ ಎಷ್ಟಾಗಿದೆ? ಬಂಗಾರ ಖರೀದಿದಾರರಿಗೆ ಸುವರ್ಣ ಅವಕಾಶ

0
6

ಬೆಂಗಳೂರು: ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಿಗೆ ಸಂತಸದ ಸುದ್ದಿ. ಬೆಂಗಳೂರಿನ ಚಿನ್ನದ ಮಾರುಕಟ್ಟೆಯಲ್ಲಿ ನವೆಂಬರ್ 19ರಂದು ಬಂಗಾರದ ಬೆಲೆಯಲ್ಲಿ ಇಳಿಕೆಯಾಗಿದೆ  ಕಳೆದ  15 ದಿನಗಳಿಂದ   ಚಿನ್ನದ ದರದಲ್ಲಿ ಏರಿಳಿತ ಕಂಡುಬರುತ್ತಿದ್ದು, ಇದೀಗ ಬೆಲೆ ಇಳಿಕೆಯಾಗಿರುವುದು ಆಭರಣ ಖರೀದಿಸುವವರ ಗಮನ ಸೆಳೆದಿದೆ.

ಚಿನ್ನವನ್ನು ಹೂಡಿಕೆಯ ಜೊತೆಗೆ ಭಾರತೀಯ ಕುಟುಂಬಗಳಲ್ಲಿ ಶುಭ ಕಾರ್ಯಗಳು, ಮದುವೆ ಹಾಗೂ ಹಬ್ಬಗಳ ಸಂದರ್ಭದಲ್ಲಿ ಪ್ರಮುಖವಾಗಿ ಖರೀದಿಸಲಾಗುತ್ತದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಆಗುವ ಸಣ್ಣ ಬದಲಾವಣೆಯೂ ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಮದುವೆ ಹಾಗೂ ಶುಭ ಸಮಾರಂಭಗಳಿಗಾಗಿ ಚಿನ್ನ ಖರೀದಿಸಲು ಯೋಜಿಸಿರುವವರಿಗೆ ಇಂದಿನ ದರದ ಮಾಹಿತಿ ಮಹತ್ವದ್ದಾಗಿದೆ.

ಬೆಂಗಳೂರಿನಲ್ಲಿ ಇಂದಿನ ನವೆಂಬರ್‌ 18ರ  ಚಿನ್ನದ ದರ  24 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹13,325, 22 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹12,214 ಮತ್ತು  18 ಕ್ಯಾರೆಟ್ ಚಿನ್ನ ಪ್ರತಿ ಗ್ರಾಂಗೆ ₹9,993. ಬೆಳ್ಳಿಯಲ್ಲಿ ಕೂಡಾ ಇಂದಿನ ದರ ಇಳಿಕೆಯಾಗಿದ್ದು ಪ್ರತಿ  ಗ್ರಾಂ 184.90 ಯಾಗಿದೆ.

ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದು ಆಭರಣ ಖರೀದಿಸುವ ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ. ಮಾರುಕಟ್ಟೆಯಲ್ಲಿನ ಚಿನ್ನದ ದರಗಳ ಏರಿಳಿತದ ಮೇಲೆ ಗ್ರಾಹಕರು ಗಮನಹರಿಸುತ್ತಿದ್ದಾರೆ.

ಚಿನ್ನದ ದರಗಳು ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಬದಲಾಗುತ್ತಿರುತ್ತವೆ. ಆದ್ದರಿಂದ ಖರೀದಿಸುವ ಮುನ್ನ ಸ್ಥಳೀಯ ಆಭರಣ ಮಳಿಗೆಯಲ್ಲಿ ಅಂದಿನ ಅಂತಿಮ ದರವನ್ನು ಖಚಿತಪಡಿಸಿಕೊಳ್ಳುವುದು ಉತ್ತಮ.