SK Home Ad
Home ನಮ್ಮ ಜಿಲ್ಲೆ ಧಾರವಾಡ ʻಕೊಳಲು ಡಾಟ್ ಕಾಮೆಡಿʼ ನಾಟಕ ಪ್ರದರ್ಶನ ಆ. 22 ರಂದು

ʻಕೊಳಲು ಡಾಟ್ ಕಾಮೆಡಿʼ ನಾಟಕ ಪ್ರದರ್ಶನ ಆ. 22 ರಂದು

0
56

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ವತಿಯಿಂದ ಆ. 22ರಂದು ಸಂಜೆ 6ಗಂಟೆಗೆ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕ ಡಾ. ಪ್ರವೀಣ ಗೋಡಖಿಂಡಿ ಅವರ ವಿಶಿಷ್ಟ ಕಲ್ಪನೆಯ ಸಂಗೀತ ಮತ್ತು ಹಾಸ್ಯದ ಅಪರೂಪದ ಸಮ್ಮಿಲನದ ʻಕೊಳಲು ಡಾಟ್ ಕಾಮೆಡಿʼ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ನಾಟಕ ಪ್ರದರ್ಶನ ಅಂತಾರಾಷ್ಟ್ರೀಯ ಖ್ಯಾತಿಯ ಕೊಳಲು ವಾದಕ ಡಾ. ಪ್ರವೀಣ ಗೋಡಖಿಂಡಿ ಅವರ ಪರಿಕಲ್ಪನೆ, ಕಥೆ ಮತ್ತು ನಿರ್ದೇಶನದಲ್ಲಿ ಮೂಡಿ ಬಂದಿದ್ದು, ನಾಟಕ ಪ್ರದರ್ಶನಗೊಳ್ಳಲಿದೆ.

ಸ್ವತಃ ಡಾ. ಪ್ರವೀಣ ಗೋಡಖಿಂಡಿ ಅವರು ಹಾಗೂ ರಂಗನಟ ರವಿ ಕುಲಕರ್ಣಿ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇಡೀ ನಾಟಕದ ಸಂಭಾಷಣೆಗಳು ಪ್ರೇಕ್ಷಕರಿಗೆ ತಿಳಿಹಾಸ್ಯದ ವಿಶಿಷ್ಟ ಉತ್ತರ ಕರ್ನಾಟಕದ (ಧಾರವಾಡ) ಭಾಷಾ ಶೈಲಿಯಲ್ಲಿ ಮೂಡಿಬಂದಿವೆ. 90 ನಿಮಿಷಗಳ ನಾಟಕದ ನಂತರ ಪಂ. ಪ್ರವೀಣ ಗೋಡಖಿಂಡಿಯವರ ಜೀವನ ಸಂಗೀತ ಸಾಧನೆಯಲ್ಲಿ ನಡೆದ ದಾರಿ ಕುರಿತು ಅವರೊಂದಿಗೆ ಸಂದರ್ಶನ ರಂಗಮಂದಿರದ ಮೇಲೆ ನಡೆಯಲಿದೆ.