ಹುಬ್ಬಳ್ಳಿ: ಹುಬ್ಬಳ್ಳಿ-ಸಿಂಧನೂರು ಡೈಲಿ ಪ್ಯಾಸೆಂಜರ್ ರೈಲಿನ ವೇಳಾಪಟ್ಟಿಯನ್ನು ಆಗಸ್ಟ್ 17 ರಿಂದ ಬದಲಾವಣೆ ಮಾಡಲಾಗಿದೆ.
ಕಾರ್ಯಾಚರಣೆ ಕಾರಣದಿಂದಾಗಿ ಹುಬ್ಬಳ್ಳಿ-ಸಿಂಧನೂರು ಡೈಲಿ ಪ್ಯಾಸೆಂಜರ್ (ರೈಲು ಸಂಖ್ಯೆ- 56927) ರೈಲಿನ ಸಮಯವನ್ನು ಕೆಲವು ನಿಲ್ದಾಣಗಳಲ್ಲಿ ಪರಿಷ್ಕರಿಸಲಾಗಿದೆ. ಈ ರೈಲು ಕೊಪ್ಪಳಕ್ಕೆ 9.12 ಕ್ಕೆ ತಲುಪಿ 9.14ಕ್ಕೆ ಹೊರಡುತ್ತಿತ್ತು. ಈಗ 9.23 ಕ್ಕೆ ತಲುಪಿ 9.25 ಕ್ಕೆ ಹೊರಡಲಿದೆ. ಗಿಣಿಗೇರಾಕ್ಕೆ 9.24 ಕ್ಕೆ ತಲುಪಿ 9.25 ಕ್ಕೆ ಹೊರಡುತ್ತಿತ್ತು. ಈಗ 9.34 ಕ್ಕೆ ತಲುಪಿ 9.35 ಕ್ಕೆ ಹೊರಡಲಿದೆ. ಅದೇ ರೀತಿ ಬೂದಗುಂಪಕ್ಕೆ 9.38ಕ್ಕೆ ತಲುಪಿ 9.39 ಕ್ಕೆ ಹೊರಡುತ್ತಿತ್ತು. ಈಗ 9.45 ಕ್ಕೆ ತಲುಪಿ 9.46ಕ್ಕೆ ಹೊರಡಲಿದೆ. ಜಬ್ಬಲಗುಡ್ಡಕ್ಕೆ 9.53ಕ್ಕೆ ತಲುಪಿ 954 ಕ್ಕೆ ಹೊರಡುತ್ತಿತ್ತು. ಇನ್ನು ಮುಂದೆ 9.54 ಕ್ಕೆ ತಲುಪಿ 95.5 ಕ್ಕೆ ಹೊರಡಲಿದೆ ಎಂದು ತಿಳಿಸಲಾಗಿದೆ.
ಹುಬ್ಬಳ್ಳಿ ಮತ್ತು ಭಾಣಾಪುರ ರೈಲ್ವೆ ನಿಲ್ದಾಣಗಳ ನಡುವೆ, ಚಿಕ್ಕಬೆಣಕಲ್ ಮತ್ತು ಸಿಂಧೂರು ನಿಲ್ದಾಣಗಳ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ತಿಳಿಸಿದ್ದಾರೆ.






















