SK Home Ad
Home ಸುದ್ದಿ ದೇಶ ಅದಾನಿ ವಿಚಾರ: ಮಾರ್ಚ್ 13ರವರೆಗೆ ರಾಜ್ಯಸಭೆ ಕಲಾಪ ಮುಂದೂಡಿಕೆ

ಅದಾನಿ ವಿಚಾರ: ಮಾರ್ಚ್ 13ರವರೆಗೆ ರಾಜ್ಯಸಭೆ ಕಲಾಪ ಮುಂದೂಡಿಕೆ

0
131

ನವದೆಹಲಿ: ಕಾಂಗ್ರೆಸ್ ಸಂಸದೆ ರಜನಿ ಪಾಟೀಲ್ ಅವರ ಅಮಾನತು ಹಿಂಪಡೆಯಲು ಮತ್ತು ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ ತನಿಖೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಸದನಕ್ಕೆ ಅಡ್ಡಿಪಡಿಸಿದ್ದರಿಂದ ರಾಜ್ಯಸಭೆಯ ಕಲಾಪವನ್ನು ಸೋಮವಾರ ಮಾರ್ಚ್ 13ಕ್ಕೆ ಮುಂದೂಡಲಾಯಿತು.
ಸದನ ಆರಂಭವಾಗುತ್ತಲೇ ಗದ್ದಲದಿಂದಾಗಿ ಬೆಳಗ್ಗೆ ಅಲ್ಪಾವಧಿಗೆ ಮುಂದೂಡಲ್ಪಟ್ಟ ಸದನವು, ವಿರಾಮದ ನಂತರ ಮಾರ್ಚ್ 13 ರಂದು ಬೆಳಿಗ್ಗೆ 11 ಗಂಟೆಗೆ ಸಭೆ ಸೇರಲಿದೆ.