SK Home Ad
Home ಸಿನಿ ಮಿಲ್ಸ್ ‘ಟಾಕ್ಸಿಕ್’ ಅಖಾಡಕ್ಕೆ ಲೇಡಿ ಬಾಸ್‌ಗಳ ಎಂಟ್ರಿ: ರಾಕಿಂಗ್ ಸ್ಟಾರ್ ಚಿತ್ರದ ಐವರು ನಾಯಕಿಯರ ಪರಿಚಯ!‌

‘ಟಾಕ್ಸಿಕ್’ ಅಖಾಡಕ್ಕೆ ಲೇಡಿ ಬಾಸ್‌ಗಳ ಎಂಟ್ರಿ: ರಾಕಿಂಗ್ ಸ್ಟಾರ್ ಚಿತ್ರದ ಐವರು ನಾಯಕಿಯರ ಪರಿಚಯ!‌

0
26

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್ ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ನಾಯಕಿಯರ ಪರಿಚಯಾತ್ಮಕ ಟೀಸರ್ ಬಿಡುಗಡೆಯಾಗಿದ್ದು, ಸಿನಿರಂಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ‘ಟಾಕ್ಸಿಕ್ ಪ್ರಪಂಚದ ಪಂಚ ಸುಂದರಿಯರು’ ಎಂದು ಕರೆಯಲಾಗುತ್ತಿರುವ ಐವರು ಖ್ಯಾತ ನಟಿಯರ ಖಡಕ್ ಲುಕ್ ಅನ್ನು ಈ ಟೀಸರ್ ಮೂಲಕ ಚಿತ್ರತಂಡ ಅನಾವರಣಗೊಳಿಸಿದೆ.

ಚಿತ್ರದಲ್ಲಿ ನಟಿಸುತ್ತಿರುವ ನಟಿಯರು ಮತ್ತು ಅವರ ಪಾತ್ರಗಳ ವಿವರ ಇಲ್ಲಿದೆ: ನಯನತಾರಾ: ‘ಗಂಗಾ’ ಎಂಬ ಶಕ್ತಿಶಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬುಲೆಟ್ ರೈಡ್ ಮಾಡುತ್ತಾ ಕೈಯಲ್ಲಿ ವೆಪನ್ ಹಿಡಿದು ಅಬ್ಬರಿಸಿದ್ದಾರೆ. ಹಾಗೇ ಕಿಯಾರಾ ಅಡ್ವಾನಿ ‘ನಾಡಿಯಾ’ ಹೆಸರಿನ ಪಾತ್ರದಲ್ಲಿ ನಟಿಸಿದ್ದು, ಫೇರಿಟೇಲ್ ಬೆಡಗಿಯಂತೆ ಅತ್ಯಂತ ಗ್ಲಾಮರಸ್ ಆಗಿ ಮಿಂಚಿದ್ದಾರೆ. ಈ ಚಿತ್ರದಲ್ಲಿ ರುಕ್ಮಿಣಿ ವಸಂತ್ ‘ಮೆಲ್ಲಿಸಾ’ ಎಂಬ ವಿಭಿನ್ನ ಪಾತ್ರಕ್ಕೆ ಜೀವ ತುಂಬಿದ್ದು, ಗನ್ ಹಿಡಿದು ಗುರಿ ಇಟ್ಟಿರುವ ಲುಕ್ ಗಮನ ಸೆಳೆದಿದೆ. ತಾರಾ ಸುತಾರಿಯಾ ‘ರೆಬೆಕ್ಕಾ’ ಎಂಬ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಸಿಗರೇಟ್ ಸೇದುತ್ತಾ ವೆಪನ್ ಹಿಡಿದು ಗತ್ತಿನಿಂದ ನಿಂತಿದ್ದಾರೆ. ಇನ್ನೂ ಹುಮಾ ಖುರೇಷಿ ‘ಎಲಿಜಬೆತ್’ ಪಾತ್ರದಲ್ಲಿ ಲೇಡಿ ಬಾಸ್ ತರಹ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದು, ಕೈಯಲ್ಲಿ ಸಿಗರೇಟ್ ಹಿಡಿದು ಕಾಣಿಸಿಕೊಂಡಿದ್ದಾರೆ.

ಬಾಲಿವುಡ್‌ನ ಮೂವರು ಹಾಗೂ ಸೌತ್‌ನ ಇಬ್ಬರು ಸ್ಟಾರ್ ನಟಿಯರನ್ನೊಳಗೊಂಡ ಈ ಟೀಸರ್ ಆರಂಭದಲ್ಲೇ, “ಮಕ್ಕಳು, ಪೋಷಕರು ಮತ್ತು ಹಿರಿಯರೇ ಈ ಸಿನಿಮಾ ಪ್ರಪಂಚದಿಂದ ದೂರವಿರಿ” ಎಂಬ ವಿಭಿನ್ನ ವಾರ್ನಿಂಗ್‌ನೊಂದಿಗೆ ಶುರುವಾಗುತ್ತದೆ. “ಪ್ರೀತಿ ಒಬ್ಬ ಹೆಣ್ಣನ್ನು ಮಾನ್ಸ್ಟರ್ ಆಗಿ ಮಾಡಬಲ್ಲದು. ಅವನ ಅಳಿದುಳಿದ ಪ್ರೀತಿಗಾಗಿ ನಾವಿಲ್ಲಿ ಹೋರಾಡುತ್ತಿದ್ದೇವೆ, ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ” ಎಂಬ ಡೈಲಾಗ್ ಕುತೂಹಲ ಮೂಡಿಸಿದೆ.

ಕೊನೆಯಲ್ಲಿ ಯಶ್ ತಮ್ಮದೇ ವಿಶಿಷ್ಟ ಶೈಲಿಯಲ್ಲಿ, “ಲೇಡಿಸ್ & ಲೇಡಿಸ್, ಒಬ್ಬೊಬ್ಬರೇ ಬರ್ತೀರಾ? ಒಟ್ಟಿಗೆ ಬರ್ತೀರಾ?” ಎಂದು ಮಾಸ್ ಡೈಲಾಗ್ ಹೊಡೆಯುವ ಮೂಲಕ ಟೀಸರ್ ಖದರ್ ಹೆಚ್ಚಿಸಿದ್ದಾರೆ. ಆಗಸ್ಟ್ 26 ರಂದು ತೆರೆಕಾಣಲಿರುವ ಈ ಚಿತ್ರದಲ್ಲಿ ಯಶ್ ‘ರಾಯ’ ಎಂಬ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.